ಆಕ್ಸಿಜನ್ ತೊಂದರೆ, ಮೂವರು ರೋಗಿಗಳ ಸಾವು: ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ - Punjab Hospital Tragedy

ಪಂಜಾಬ್‌ನ ಜಲಂಧರ್ ಸರ್ಕಾರಿ ಆಸ್ಪತ್ರೆಯಲ್ಲಿ ತಾಂತ್ರಿಕ ದೋಷದಿಂದ ಆಕ್ಸಿಜನ್ ಪೂರೈಕೆ ಕಡಿಮೆಯಾಗಿ ಇಂದು ಐಸಿಯು ವಿಭಾಗದಲ್ಲಿ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಆತಂಕ ಮತ್ತು ಗೊಂದಲ ಮನೆಮಾಡಿದೆ.

  • ಪಂಜಾಬ್‌ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ತೊಂದರೆ
  • ಐಸಿಯುವಿನಲ್ಲಿ ಇಂದು ಮೂವರು ರೋಗಿಗಳ ಸಾವು
  • ತನಿಖೆಗೆ ಆರೋಗ್ಯ ಸಚಿವರ ಸೂಚನೆ

ಜಲಂಧರ್ (Jalandhar) ನ ಸರ್ಕಾರಿ ಆಸ್ಪತ್ರೆಯಲ್ಲಿ ತಾಂತ್ರಿಕ ದೋಷ (technical error) ಉಂಟಾದ ಪರಿಣಾಮ ಆಕ್ಸಿಜನ್ (oxygen supply) ಪೂರೈಕೆ ಕೆಲ ನಿಮಿಷಗಳ ಕಾಲ ಸ್ಥಗಿತಗೊಂಡಿದ್ದು, ಈ ಸಮಯದಲ್ಲಿ ಐಸಿಯು (ICU) ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ದುಃಖದ ಅಂತ್ಯ ಕಂಡಿದ್ದಾರೆ.

ಈ ಘಟನೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು, ತಕ್ಷಣವೇ ಹಾಸ್ಪಿಟಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಆಸ್ಪತ್ರೆಯ ಆಡಳಿತಾತ್ಮಕ ಸಿಬ್ಬಂದಿ ಹಾಗೂ ವೈದ್ಯರ ನಡುವೆ ಗೊಂದಲ ಉಂಟಾಗಿ ಕೆಲ ಕಾಲ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಂತಾಯಿತು.

ಚೀಪ್ ಮೆಡಿಕಲ್ ಆಫೀಸರ್ ಡಾ. ವಿನಯ್ ಕುಮಾರ್ ಅವರು ನೀಡಿದ ವಿವರಗಳಂತೆ, ತಾಂತ್ರಿಕ ದೋಷವಿಲ್ಲದಂತೆ ವ್ಯವಸ್ಥೆ ಕೆಲವೇ ನಿಮಿಷಗಳಲ್ಲಿ ಸರಿಪಡಿಸಲಾಯಿತು. ಬ್ಯಾಕಪ್ ಸಿಲಿಂಡರ್‌ಗಳ ಮೂಲಕ ತಕ್ಷಣ ಆಕ್ಸಿಜನ್ ಪೂರೈಸಲಾಯಿತು. ಆದರೆ ಮೂರು ರೋಗಿಗಳ ಸ್ಥಿತಿ ಈಗಾಗಲೇ ತೀವ್ರವಾಗಿತ್ತು ಎಂಬುದಾಗಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮೂವರು ಪಹಲ್ಗಾಮ್ ದಾಳಿ ಶಂಕಿತ ಉಗ್ರರ ಹತ್ಯೆ! ಕಾಶ್ಮೀರದಲ್ಲಿ ಎನ್‌ಕೌಂಟರ್‌

ಪಂಜಾಬ್ ರಾಜ್ಯದ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಅವರು ಇಂದು ಆಸ್ಪತ್ರೆಯನ್ನು ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ಸಮಿತಿಯನ್ನು ನೇಮಿಸುವುದಾಗಿ ತಿಳಿಸಿದ್ದಾರೆ. ತಪ್ಪಿತಸ್ಥರು ಪತ್ತೆಯಾದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಆಕ್ಸಿಜನ್ ವೈಫಲ್ಯದಿಂದಾಗಿ ಮೂವರು ರೋಗಿಗಳ ಸಾವಿಗೆ ಕಾರಣವಾದ ಈ ಘಟನೆ, ಆರೋಗ್ಯ ವ್ಯವಸ್ಥೆಯ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಸಾರ್ವಜನಿಕರ ವಿಶ್ವಾಸ ಪುನಃಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ಇದೆ ರೀತಿಯ ವಿಶ್ವಾಸಾರ್ಹ ಸುದ್ದಿಗಳಿಗಾಗಿ ತಪ್ಪದೆ Kannada News Today ಭೇಟಿ ನೀಡಿ.

Oxygen Supply Error Kills 3 ICU Patients in Punjab Hospital

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories