ಪಾಕಿಸ್ತಾನಕ್ಕೆ ಯುದ್ಧನೌಕೆ ಕಳುಹಿಸಿದ ಟರ್ಕಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಪಾಕಿಸ್ತಾನ ವಿದೇಶಿ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಟರ್ಕಿಯ ಟಿಜಿಸಿ ಬುಯುಕಾಡಾ ಎಂಬ ದೊಡ್ಡ ಯುದ್ಧನೌಕೆ ಇತ್ತೀಚೆಗೆ ಕರಾಚಿ ಕರಾವಳಿಗೆ ಬಂದಿದೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿರುವಂತೆಯೇ, ಪಾಕಿಸ್ತಾನ ವಿದೇಶಿ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತಿದೆ.

ಇದರ ಭಾಗವಾಗಿ, ಟರ್ಕಿಯ ಟಿಜಿಸಿ (Turkish Navy Warship) ಬುಯುಕಾಡಾ ಎಂಬ ದೊಡ್ಡ ಯುದ್ಧನೌಕೆ ಇತ್ತೀಚೆಗೆ ಕರಾಚಿ ಕರಾವಳಿಗೆ ಬಂದಿದೆ. ಜಲಾಂತರ್ಗಾಮಿ ನೌಕೆಗಳ ವಿರುದ್ಧ ಕಾರ್ಯನಿರ್ವಹಿಸುವ ಈ ಹಡಗು ಸಮರ್ಥ ಗಸ್ತು ಹಡಗು ಎಂದೂ ಗುರುತಿಸಲ್ಪಟ್ಟಿದೆ.

ಸಮುದ್ರದ ಮೂಲಕ ಭಾರತ ತನ್ನ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಭಯಪಡುವ ಪಾಕಿಸ್ತಾನ, ಈ ಗಸ್ತು ಹಡಗನ್ನು ತನ್ನ ನೆರವಿಗೆ ತಂದಿದೆ ಎನ್ನಲಾಗಿದೆ.

ಈ ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ಚರ್ಚಿಸಲು ಪಾಕಿಸ್ತಾನ ಸರ್ಕಾರವು ಉನ್ನತ ಸೇನಾ ಅಧಿಕಾರಿಗಳು ಮತ್ತು ವಿರೋಧ ಪಕ್ಷಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲು ನಿರ್ಧರಿಸಿದೆ.

ಆದಾಗ್ಯೂ, ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಈ ಸಭೆಗೆ ಗೈರುಹಾಜರಾಗಿತ್ತು. ಪಕ್ಷವು ಬಹಳ ಹಿಂದಿನಿಂದಲೂ ಭಯೋತ್ಪಾದನೆಯನ್ನು ಖಂಡಿಸುತ್ತಿದೆ.

Pakistan Deploys Turkish Warship Amid India Tensions

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories