ಉತ್ತರ ಪ್ರದೇಶದಲ್ಲಿ ವಾಯು ಮಾಲಿನ್ಯಕ್ಕೆ ಪಾಕಿಸ್ತಾನವೇ ಕಾರಣ; ಅಧಿಕಾರಿ ಆರೋಪ

Story Highlights

ಉತ್ತರ ಪ್ರದೇಶದ ಮೂರು ನಗರಗಳಲ್ಲಿ ವಾಯು ಮಾಲಿನ್ಯಕ್ಕೆ ಪಾಕಿಸ್ತಾನವೇ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಲಕ್ನೋ: ಉತ್ತರ ಪ್ರದೇಶದ ಮೂರು ನಗರಗಳಲ್ಲಿ ವಾಯು ಮಾಲಿನ್ಯಕ್ಕೆ ಪಾಕಿಸ್ತಾನವೇ ಕಾರಣ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ನೆರೆಯ ದೇಶದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಗ್ರೇಟರ್ ನೋಯ್ಡಾ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿನ ಗಾಳಿಯು ವಿಷಕಾರಿಯಾಗಿದೆ. ಈ ಮೂರು ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೀವ್ರವಾಗಿ ಕುಸಿದಿದೆ. ನೋಯ್ಡಾದಲ್ಲಿ 304, ಗ್ರೇಟರ್ ನೋಯ್ಡಾದಲ್ಲಿ 312 ಮತ್ತು ಗಾಜಿಯಾಬಾದ್‌ನಲ್ಲಿ 324 ಎಕ್ಯೂಐ ದಾಖಲಾಗಿದೆ.

ಏತನ್ಮಧ್ಯೆ, ಗ್ರೇಟರ್ ನೋಯ್ಡಾದ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಿಕೆ ಗುಪ್ತಾ ಅವರು ವಾಯು ಮಾಲಿನ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು.

ಜಮ್ಮು ಕಾಶ್ಮೀರ: ಸೇನಾ ವಾಹನದ ಮೇಲೆ ಉಗ್ರರ ಗುಂಡಿನ ದಾಳಿ, ಓರ್ವ ಭಯೋತ್ಪಾದಕ ಹತ್ಯೆ

ಈ ವರ್ಷ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಒಂದೇ ದಿನದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಕೆಟ್ಟದಾಗಿ ಕುಸಿದಿರುವುದು ಇದೇ ಮೊದಲು. ನಮ್ಮ ನೆರೆಯ ಪಾಕಿಸ್ತಾನವನ್ನು ದೂಷಿಸಬೇಕಾಗಿದೆ. ಆ ದೇಶದಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದರಿಂದ ಈ ಮೂರು ನಗರಗಳಲ್ಲಿನ ಗಾಳಿಯು ವಿಷಕಾರಿಯಾಗಿದೆ ಎಂದು ಅವರು ಹೇಳಿದರು.

ಮತ್ತೊಂದೆಡೆ, ಪಾಕಿಸ್ತಾನವು ಉತ್ತರ ಪ್ರದೇಶದಿಂದ 500 ಕಿಮೀ ದೂರದಲ್ಲಿದೆ. ಇದರಿಂದ ರಾಜ್ಯದ ವಾಯು ಮಾಲಿನ್ಯಕ್ಕೆ ನೆರೆಯ ದೇಶವೇ ಕಾರಣ ಎಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಟೀಕೆಗೆ ಗುರಿಯಾಗಿದ್ದಾರೆ

Pakistan To Be Blamed For Toxic Air Chokes In Noida Up Pollution

Related Stories