ಡಿಸೆಂಬರ್ 31 ಗಡುವು, ಈ ಕೆಲಸ ಮಾಡದೆ ಹೋದರೆ ಬ್ಯಾಂಕ್ ಖಾತೆ ತೆರೆಯಲು ಸಹ ಸಾಧ್ಯವಿಲ್ಲ
ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿಕೊಳ್ಳದಿದ್ದರೆ, ಹೊಸ ವರ್ಷದಿಂದ ಬ್ಯಾಂಕ್ ಖಾತೆ ತೆರೆಯಲು, ಹಣಕಾಸು ವ್ಯವಹಾರ ನಡೆಸಲು ಸಾಧ್ಯವಿಲ್ಲ. ಡಿಸೆಂಬರ್ 31ರೊಳಗೆ ಈ ಕೆಲಸ ಪೂರ್ಣಗೊಳಿಸಲೇಬೇಕು.
- ಪ್ಯಾನ್–ಆಧಾರ್ ಲಿಂಕ್ ಮಾಡದೇ ಇದ್ದರೆ ಕಾರ್ಡ್ ಅಮಾನ್ಯ
- ಡಿಸೆಂಬರ್ 31 ಗಡುವು ಮಿಸ್ ಆದರೆ ಬ್ಯಾಂಕಿಂಗ್ ಸೇವೆಗಳಿಗೆ ತಡೆ
- ಪ್ಯಾನ್ ರದ್ದು ಆದರೆ ಐಟಿ ರಿಟರ್ನ್, ಲೋನ್, ಹೂಡಿಕೆ ಅಸಾಧ್ಯ
PAN–Aadhaar Link Deadline: ಹೊಸ ವರ್ಷದ ಸಂಭ್ರಮಕ್ಕೆ ಜನ ಸಿದ್ಧರಾಗುತ್ತಿರುವ ನಡುವೆಯೇ, ಸರ್ಕಾರದ ಮಹತ್ವದ ಗಡುವೊಂದು ಗಮನ ಸೆಳೆಯುತ್ತಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆಗೆ ಡಿಸೆಂಬರ್ 31 ಅಂತಿಮ ದಿನಾಂಕವಾಗಿ ನಿಗದಿಯಾಗಿದೆ. ಈ ಗಡುವನ್ನು ಮಿಸ್ ಮಾಡಿದರೆ, ಹೊಸ ವರ್ಷದಲ್ಲಿ ದೊಡ್ಡ ಹಣಕಾಸು ತೊಂದರೆ ಎದುರಾಗಬಹುದು.
ಭಾರತದಲ್ಲಿ ಯಾವುದೇ ಹಣಕಾಸು ಚಟುವಟಿಕೆ ನಡೆಸಬೇಕಾದರೂ ಪ್ಯಾನ್ ಕಾರ್ಡ್ ಅನಿವಾರ್ಯ ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಸಂಬಳ ಸ್ವೀಕರಿಸುವುದು, ತೆರಿಗೆ ಪಾವತಿ, ಹೂಡಿಕೆಸೇರಿದಂತೆ ಎಲ್ಲದಕ್ಕೂ ಪ್ಯಾನ್ ಅಗತ್ಯ. ಮಕ್ಕಳಿಂದ ಹಿರಿಯ ನಾಗರಿಕರ ತನಕ, ಎಲ್ಲರಿಗೂ ಇದು ಮುಖ್ಯ ಗುರುತಿನ ದಾಖಲೆ ಆಗಿದೆ.
ಪ್ಯಾನ್–ಆಧಾರ್ ಲಿಂಕ್ ಏಕೆ ಕಡ್ಡಾಯ?
ಪ್ಯಾನ್ ಕಾರ್ಡ್ ದುರುಪಯೋಗವನ್ನು ತಡೆಯಲು ಕೇಂದ್ರ ಸರ್ಕಾರ ಈ ಲಿಂಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಇದುವರೆಗೆ ಹಲವು ಬಾರಿ ಗಡುವು ವಿಸ್ತರಣೆ ನೀಡಲಾಗಿತ್ತು. ಆದರೆ ಈ ಬಾರಿ ಮತ್ತೊಮ್ಮೆ ಅವಧಿ ವಿಸ್ತರಣೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಗಡುವಿನ ನಂತರ ಲಿಂಕ್ ಮಾಡದ ಪ್ಯಾನ್ ಕಾರ್ಡ್ಗಳನ್ನು ಇನಾಕ್ಟಿವ್ ಅಥವಾ ರದ್ದು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ ಲಕ್ಷಣ ಕಾಣ್ತಾಯಿಲ್ಲ! ದುಬಾರಿ ದುನಿಯಾದಲ್ಲಿ ಚಿನ್ನ-ಬೆಳ್ಳಿ ಖರೀದಿ ಕಷ್ಟ ಕಷ್ಟ
ಲಿಂಕ್ ಮಾಡದಿದ್ದರೆ ಎದುರಾಗುವ ಸಮಸ್ಯೆಗಳು
ಪ್ಯಾನ್ ಕಾರ್ಡ್ ಅಮಾನ್ಯವಾದರೆ, ಹೊಸ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು, ಡಿಮ್ಯಾಟ್ ಖಾತೆ, ಲೋನ್, ಫಿಕ್ಸ್ಡ್ ಡೆಪಾಸಿಟ್, ವಿಮಾ ಪ್ರೀಮಿಯಂ ಪಾವತಿ ಎಲ್ಲವೂ ಅಡಚಣೆಗೆ ಒಳಗಾಗುತ್ತವೆ.
ಇದಲ್ಲದೆ, ಇನ್ಕಂ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ಸಲ್ಲಿಸಿದ ರಿಟರ್ನ್ನ ಹಣವೂ ಖಾತೆಗೆ ಬರದೇ ತಡೆಹಿಡಿಯಬಹುದು. ₹50,000ಕ್ಕಿಂತ ಹೆಚ್ಚು ನಗದು ವ್ಯವಹಾರ, ಷೇರು ಮಾರುಕಟ್ಟೆ ಹೂಡಿಕೆ, ವಿದೇಶಿ ಪ್ರಯಾಣದ ವೇಳೆ ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ ಪಾವತಿಗೂ ತೊಂದರೆ ಎದುರಾಗಬಹುದು. ಒಟ್ಟಿನಲ್ಲಿ, ಪ್ಯಾನ್ ರದ್ದು ಆದರೆ ಹಣಕಾಸು ಜೀವನವೇ ಅಸ್ತವ್ಯಸ್ತವಾಗುತ್ತದೆ.
ಇನ್ನೂ ಸಮಯ ಇದೆ – ಈಗಲೇ ಪರಿಶೀಲಿಸಿ
ಡಿಸೆಂಬರ್ 31ರೊಳಗೆ ಪ್ಯಾನ್–ಆಧಾರ್ ಲಿಂಕ್ ಆಗಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಕೊನೆಯ ಕ್ಷಣದ ತೊಂದರೆ ತಪ್ಪಿಸಲು, ಈ ಕೆಲಸವನ್ನು ಇಂದೇ ಪೂರ್ಣಗೊಳಿಸುವುದು ಉತ್ತಮ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



