ಹೋಳಿ ಗಿಫ್ಟ್, ರೈತರ ಖಾತೆಗೆ 2,000 ಜಮಾ! ಕೇಂದ್ರ ಸರ್ಕಾರಿಂದ ಭರ್ಜರಿ ಸುದ್ದಿ
PM Kisan: ಕೇಂದ್ರ ಸರ್ಕಾರ ಹೋಳಿ ಹಬ್ಬದ ಮುನ್ನ ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆ. ಅರ್ಹ ರೈತರ ಬ್ಯಾಂಕ್ ಖಾತೆಗೆ ₹2,000 ಜಮಾ ಆಗಲಿದ್ದು, ಕೆಲವರಿಗೆ ₹4,000 ದೊರೆಯುವ ಮಾಹಿತಿ.

- ಹೋಳಿ ಗಿಫ್ಟ್ ರೂಪದಲ್ಲಿ ಪಿಎಂ ಕಿಸಾನ್ ಹಣ
- 2,000 ಪಿಎಂ ಕಿಸಾನ್ ಕಂತು ಶೀಘ್ರದಲ್ಲೇ ಜಮಾ
- eKYC ಕಡ್ಡಾಯ ಪೂರ್ಣಗೊಳಿಸದವರಿಗೆ ಹಣ ಸಿಗದು
PM Kisan: ರೈತರು ಕಾಯುತ್ತಿದ್ದ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಇದೀಗ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಹಬ್ಬದ ಮುನ್ನವೇ ರೈತರ ಬ್ಯಾಂಕ್ ಖಾತೆಗಳಿಗೆ ₹2,000 ನೇರ ಹಣ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಫೆಬ್ರವರಿ 24 ನಂತರ ಯಾವುದೇ ದಿನ ಈ ಹಣ ಜಮಾ ಆಗಬಹುದು ಎಂದು ಮೂಲಗಳು ಸೂಚಿಸುತ್ತಿವೆ. ಅಧಿಕೃತ ಘೋಷಣೆ ಇನ್ನೂ ಬಂದಿಲ್ಲವಾದರೂ, ಹಿಂದಿನ ಕಂತುಗಳ ಬಿಡುಗಡೆ ಸಮಯ ಹಾಗೂ ಹಬ್ಬದ ಸಂದರ್ಭವನ್ನು ಗಮನಿಸಿದರೆ ಮಾರ್ಚ್ ಮೊದಲ ವಾರದೊಳಗೆ ಹಣ ವರ್ಗಾವಣೆಯಾಗುವ ನಿರೀಕ್ಷೆ ಇದೆ. ಹೋಳಿ ಹಬ್ಬದ ಸಂತಸವನ್ನು ಹೆಚ್ಚಿಸಲು ಈ ಕ್ರಮ ಎಂದು ತಿಳಿದುಬಂದಿದೆ.
ಈ ಯೋಜನೆ 2019ರಲ್ಲಿ ಆರಂಭಗೊಂಡಿದ್ದು, ವಿಶ್ವದಲ್ಲೇ ಅತಿ ದೊಡ್ಡ ನೇರ ಪ್ರಯೋಜನ ವರ್ಗಾವಣೆ (DBT) ಯೋಜನೆಗಳಲ್ಲಿ ಒಂದಾಗಿದೆ. ಈಗಾಗಲೇ 21 ಕಂತುಗಳು ಬಿಡುಗಡೆಯಾಗಿದ್ದು, ಇದು 22ನೇ ಕಂತಾಗಲಿದೆ. ಸಾಮಾನ್ಯವಾಗಿ ಪ್ರತೀ ಅರ್ಹ ರೈತರಿಗೆ ₹2,000 ಜಮಾ ಆಗುತ್ತದೆ.
ಆದರೆ ಹಿಂದಿನ ಕಂತಿನಲ್ಲಿ ತಾಂತ್ರಿಕ ಕಾರಣಗಳಿಂದ ಹಣ ಸಿಗದಿದ್ದವರಿಗೆ ಈ ಬಾರಿ ಒಟ್ಟಿಗೆ ₹4,000 ಸಿಗುವ ಸಾಧ್ಯತೆ ಇದೆ. ತಪ್ಪುಗಳನ್ನು ಸರಿಪಡಿಸಿ, ಅಗತ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಿದ ರೈತರಿಗೆ ಮಾತ್ರ ಈ ಲಾಭ ಸಿಗಲಿದೆ.
ಇದಕ್ಕಾಗಿ eKYC ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. eKYC ಮಾಡಿಸದಿದ್ದರೆ ಹಣ ವರ್ಗಾವಣೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಅಥವಾ ಸಮೀಪದ ಸಿಎಸ್ಸಿ ಕೇಂದ್ರದ ಮೂಲಕ OTP ಆಧಾರಿತ eKYC ಪ್ರಕ್ರಿಯೆ ಸುಲಭವಾಗಿ ಪೂರ್ಣಗೊಳಿಸಬಹುದು.
ಒಟ್ಟಿನಲ್ಲಿ, ಹೋಳಿ ಹಬ್ಬದ ಮುನ್ನ ರೈತರಿಗೆ ಹಣ ಜಮಾ ಆದರೆ ಅದು ಖಂಡಿತವಾಗಿಯೂ ದೊಡ್ಡ ಸಂತಸದ ಸುದ್ದಿ ಆಗಲಿದೆ.






