ಭೂದಾಖಲೆಗಳಲ್ಲಿ ದೋಷ ಇದ್ದರೆ ರೈತರಿಗೆ ಪಿಎಂ ಕಿಸಾನ್ ಹಣ ಸಿಗಲ್ಲ! ಬಿಗ್ ಅಲರ್ಟ್
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ನೇರವಾಗಿ ಖಾತೆಗೆ ಬರುವಂತೆ ನೋಡಿಕೊಳ್ಳಲು ರೈತರು ಇಕೆವೈಸಿ, ಬ್ಯಾಂಕ್ ಮತ್ತು ಭೂದಾಖಲೆ ಸಂಬಂಧಿತ ಮಾಹಿತಿ ಸರಿಯಿಟ್ಟುಕೊಳ್ಳುವುದು ಅತ್ಯಗತ್ಯ.

ಪಿಎಂ ಕಿಸಾನ್ (PM-Kisan) ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ (pmkisan.gov.in) ಈ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಫಲಾನುಭವಿಗಳು ತಮ್ಮ bank account ಹಾಗೂ Aadhaar ನ್ನು ಜೋಡಣೆ ಮಾಡಿರಬೇಕು. ಜೊತೆಗೆ ಇಕೆವೈಸಿ (e-KYC) ಮಾಡಿಲ್ಲದಿದ್ದರೆ, ಈ ಕಂತು ಕೈತಪ್ಪುವುದು ಖಚಿತ.
ಇದೆಲ್ಲವೂ ಹೆಚ್ಚಾಗಿ ಮರೆತುಹೋಗುವ ತೊಂದರೆಗಳಾಗಿದ್ದು, ಆಧಾರ್ ಜೋಡಣೆ ತಪ್ಪಾದ್ರೆ ಅಥವಾ ಬ್ಯಾಂಕ್ ಖಾತೆ ದೋಷದಿಂದಾಗಿ (account mismatch), 20ನೇ ಕಂತು ಬರದೇ ಹೋದ ಘಟನೆಗಳು ಹಿಂದೆಯೂ ನಡೆದಿವೆ. ಹಾಗಾಗಿ ಈಗಲೇ ಪರಿಶೀಲನೆ ಮಾಡುವುದು ಅಗತ್ಯ.
ಇದನ್ನೂ ಓದಿ: ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಪಶುಪಾಲನಾ ಯೋಜನೆ 2025ಕ್ಕೆ ಅರ್ಜಿ ಸಲ್ಲಿಸಿ
ಬೆನಿಫಿಶಿಯರಿ ಲಿಸ್ಟ್ ಹಾಗೂ ಅಪ್ಡೇಟ್ ಆಯ್ಕೆಗಳು ಆನ್ಲೈನ್ಲ್ಲಿಯೇ
pmkisan.gov.in ವೆಬ್ಸೈಟ್ಗೆ ಹೋಗಿ, ‘Farmers Corner’ ವಿಭಾಗದಲ್ಲಿ ‘Beneficiary List’ ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದ ಪಟ್ಟಿ ಕಾಣಿಸುತ್ತದೆ. ಇಕೆವೈಸಿ ಮಾಡುವ ಹಾಗೂ ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಆಯ್ಕೆಯೂ ಇದೇ ವೆಬ್ಸೈಟ್ನಲ್ಲಿ ಸಿಗುತ್ತದೆ.
ರೈತರು ತಮ್ಮ mobile number ನ್ನು ನವೀಕರಿಸಿಕೊಂಡರೆ, ಎಲ್ಲಾ ಮಾಹಿತಿ ಮೆಸೇಜ್ ಮೂಲಕ ತಲುಪುತ್ತದೆ. ಈ ಮೂಲಕ ಯಾವುದೇ ಮಾಹಿತಿ ತಪ್ಪಾಗಿ ಕಂತು ತಪ್ಪದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ: 1 ಲಕ್ಷಕ್ಕೆ ಬಡ್ಡಿಯೇ 22,419 ರೂಪಾಯಿ ಸಿಗುವ ಎಸ್ಬಿಐ ಬ್ಯಾಂಕ್ ಯೋಜನೆ ಇದು
ಈವರೆಗೆ 19 ಕಂತುಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, 20ನೇ ಕಂತು ಜುಲೈ ಒಳಗೆ ಬಿಡುಗಡೆಯಾಗಲಿದೆ. ಆದರೆ, ಎಲ್ಲರಿಗೂ ಹಣ ಸಿಗುವುದು ಖಚಿತವಲ್ಲ. ಅರ್ಹತಾ ನಿಯಮಗಳನ್ನು ಪೂರೈಸಿದವರಿಗಷ್ಟೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗವಾಗುತ್ತದೆ.
ಈ ಯೋಜನೆ ದೇಶದ 9 ಕೋಟಿಗೂ ಹೆಚ್ಚು ರೈತರಿಗೆ ನೆರವಾಗಿದ್ದು, ವರ್ಷಕ್ಕೆ ₹6,000ರಂತೆ 3 ಕಂತುಗಳಲ್ಲಿ (2,000 ರೂಪಾಯಿ ಪ್ರತಿ ಕಂತು) ಹಣ ಜಮೆಯಾಗುತ್ತದೆ. ಯೋಜನೆಯ ಮುಖ್ಯ ಉದ್ದೇಶ ಕೃಷಿಗೆ ಆರ್ಥಿಕ ಸಹಾಯ ಒದಗಿಸುವುದಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ ಹಣದ ನಿರೀಕ್ಷೆಯಲ್ಲಿದ್ದ ರೈತರಿಗೆ ಮೋದಿಜಿ ಸಿಹಿಸುದ್ದಿ
ಭೂ ದಾಖಲೆಗಳಲ್ಲಿಯೂ ಪರಿಶೀಲನೆ ಅಗತ್ಯ
ಬ್ಯಾಂಕ್ ಖಾತೆ ಸರಿಯಾಗಿ ಕೆಲಸ ಮಾಡುತ್ತಿದ್ದರೂ, ಭೂದಾಖಲೆಗಳಲ್ಲಿ (land records) ಏನಾದರೂ ದೋಷ ಇದ್ದರೆ ಕಂತು ರದ್ದುಪಡಿಸಬಹುದು. ತಕ್ಷಣವೇ ತಮ್ಮ ಪಹಣಿ ದಾಖಲೆಗಳು ಸರಿಯಾಗಿದೆಯೆ ಎಂಬುದನ್ನು ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲಿಸಬೇಕು.
PM Kisan 20th Installment, Must-do Checklist




