ರೈತರಿಗೆ ಭರ್ಜರಿ ಸುದ್ದಿ ಬಿಡುಗಡೆ! ಪಿಎಂ ಕಿಸಾನ್‌ 21ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ

ಪಿಎಂ ಕಿಸಾನ್‌ ಯೋಜನೆಯ 21ನೇ ಕಂತು ಕುರಿತು ರೈತರ ಆತಂಕಕ್ಕೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ನವೆಂಬರ್ 19ರಂದು 2,000 ರೂ. ಕಂತು ಜಮಾ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದೆ.

PM Kisan 21st Installment: ರೈತರ ನಿರೀಕ್ಷೆಗೆ ತೆರೆ ಬೀಳುವಂತೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತು ನವೆಂಬರ್ 19ರಂದು ಬಿಡುಗಡೆ ಆಗುವುದಾಗಿ ಕೇಂದ್ರ ಕೃಷಿ ಸಚಿವಾಲಯದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಕೆಲವು ರಾಜ್ಯಗಳ ರೈತರಿಗೆ ಮೊತ್ತ ಈಗಾಗಲೇ ಜಮಾ ಆಗಿದ್ದರೂ, ಉಳಿದ ರಾಜ್ಯಗಳಿಗೆ ಇದುವರೆಗೂ ಕಾಯುವಿಕೆ ಮುಂದುವರಿದಿತ್ತು.

2019ರಲ್ಲಿ ಪ್ರಾರಂಭವಾದ ಈ ಯೋಜನೆಯಡಿಯಲ್ಲಿ ಈಗಾಗಲೇ 20 ಕಂತುಗಳ ಮೂಲಕ ₹3.70 ಲಕ್ಷ ಕೋಟಿ ಮೊತ್ತವನ್ನು 11 ಕೋಟಿಗೂ ಹೆಚ್ಚು ರೈತರಿಗೆ ನೇರವಾಗಿ ಪಾವತಿಸಲಾಗಿದೆ.

ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡುವ ಈ ಯೋಜನೆಯನ್ನು 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿ ಕಂತಿಗೂ ₹2,000 ಮೊತ್ತ ನೇರವಾಗಿ ಖಾತೆಗೆ (Bank Account) ಪಾವತಿಯಾಗುವುದು ಇದರ ವಿಶೇಷತೆ.

ಇದೇ ಸಮಯದಲ್ಲಿ, ಸರ್ಕಾರವು ಪರಿಹಾರ ವಿತರಣೆಯನ್ನು ಸುಗಮಗೊಳಿಸಲು ಹೊಸ ಡಿಜಿಟಲ್ ವೈಶಿಷ್ಟ್ಯಗಳನ್ನು ಸೇರಿಸಿದೆ. PM-KISAN ಪೋರ್ಟಲ್‌ನಲ್ಲಿ ‘Know Your Status’ ಎಂಬ ಆಯ್ಕೆಯ ಮೂಲಕ, ರೈತರು ತಮ್ಮ ಕಂತು ಅನುಮೋದನೆಯ ಸ್ಥಿತಿಯನ್ನು ತಕ್ಷಣವೇ ಪರಿಶೀಲಿಸಬಹುದಾಗಿದೆ. ಇದು ಗ್ರಾಮಾಂತರ ಪ್ರದೇಶದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ 21ನೇ ಕಂತು ಬಿಡುಗಡೆಗೂ ಮುನ್ನ, ತಮ್ಮ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸರಳ ವಿಧಾನವನ್ನೂ ಸರ್ಕಾರ ನೀಡಿದೆ.

pmkisan.gov.in ಗೆ ಭೇಟಿ ನೀಡಿ → Farmers Corner → Beneficiary Status ಆಯ್ಕೆ ಮಾಡಿ → ಆಧಾರ್ ಅಥವಾ ನೋಂದಣಿ ವಿವರ ನಮೂದಿಸಿ → ನಿಮ್ಮ ಗ್ರಾಮದ ಪಟ್ಟಿಯನ್ನೂ ಪರಿಶೀಲಿಸಬಹುದು.

ಹಣ ಜಮಾ ಆಗದಿದ್ದರೆ, ಕಾರಣಗಳು ಸಾಮಾನ್ಯವಾಗಿ e-KYC ಪೂರ್ಣವಾಗದಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿರುವುದು, ತಪ್ಪಾದ ಹೆಸರು ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ.

ಇಂತಹ ಸಂದರ್ಭದಲ್ಲಿ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಸಹಾಯವಾಣಿ 155261 / 1800-115-526 ಗೆ ಕರೆ ಮಾಡಬಹುದು.

PM Kisan 21st Installment Release Date Confirmed

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories