ರೈತರೇ, ಕಿಸಾನ್ ಹಣ ಬಂದಿದೆಯೋ ಇಲ್ಲವೋ ಈ ರೀತಿ ಚೆಕ್ ಮಾಡಿಕೊಳ್ಳಿ! ತುಂಬಾ ಸರಳ ಹಂತ
ಕೆಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿಎಂ ಕಿಸಾನ್ 21ನೇ ಕಂತಿನ ಹಣ ದೇಶದ ಲಕ್ಷಾಂತರ ರೈತರಿಗೆ ಜಮೆಯಾಗಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ತಿಳಿಯಲು ರೈತರು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

ಬೆಂಗಳೂರು: ರಾಜ್ಯದ ರೈತರ ನಿರೀಕ್ಷೆಗೆ ತೆರೆ ಬಿದ್ದಂತಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 21ನೇ ಕಂತಿನ ಹಣ ಈಗಾಗಲೇ ಅನೇಕ ಖಾತೆಗಳಿಗೆ ಜಮೆಯಾಗಲು ಪ್ರಾರಂಭವಾಗಿದೆ. ತಮಿಳುನಾಡಿನ ಕೋಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ.
18,000 ಕೋಟಿ ನೇರ ಜಮೆ – 9 ಕೋಟಿಗೂ ಹೆಚ್ಚು ಫಲಾನುಭವಿಗಳು
ಈ ಬಾರಿ ಸುಮಾರು 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ನೇರವಾಗಿ ವರ್ಗಾಯಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ 20ನೇ ಕಂತಿನ 20,500 ಕೋಟಿ ರೂಪಾಯಿಯನ್ನೂ 9.7 ಕೋಟಿ ರೈತರು ಪಡೆದಿದ್ದರು. ಈಗಾಗಲೇ 20 ಕಂತುಗಳಲ್ಲಿ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ 3.70 ಲಕ್ಷ ಕೋಟಿ ರೂಪಾಯಿ ತಲುಪಿರುವುದು ಗಮನಾರ್ಹ.
ಹಣ ಬರದಿದ್ದರೆ ಕಾರಣ ಏನು?
ಕೆಲ ರೈತರ ಖಾತೆಗೆ ಹಣ ಬಾರದಿದ್ದರೆ, ಅದರ ಹಿಂದೆ ಕೆಲವು ತಾಂತ್ರಿಕ ಹಾಗೂ ದಾಖಲೆ ಸಮಸ್ಯೆಗಳಿರಬಹುದು.
ಹಣ ತಾತ್ಕಾಲಿಕವಾಗಿ ಸ್ಥಗಿತವಾಗುವ ಪ್ರಮುಖ ಕಾರಣಗಳು:
- 01 ಫೆಬ್ರವರಿ 2019 ನಂತರ ಕೃಷಿಭೂಮಿ ಖರೀದಿಸಿದವರು
- ಒಂದೇ ಕುಟುಂಬದ ಇಬ್ಬರು ಸದಸ್ಯರು ಲಾಭ ಪಡೆಯುತ್ತಿರುವುದು
- ಇ-ಕೆವೈಸಿ ಪೂರ್ಣಗೊಳಿಸದಿರುವುದು
- ಆಧಾರ್–ಬ್ಯಾಂಕ್ ವಿವರಗಳ ಅಸಮರ್ಪಕ ಜೋಡಣೆ
ಈ ಸಮಸ್ಯೆಗಳು ಸರಿಯಾಗುವವರೆಗೆ ಕಂತು ಖಾತೆಗೆ ಬರದು.
ನಿಮ್ಮ ಖಾತೆಗೆ ಹಣ ಜಮೆಯಾಯಿತೇ ಎಂದು ಹೇಗೆ ಗೊತ್ತಾಗುತ್ತದೆ?
ರೈತರು ಸರ್ಕಾರದ ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ವಿವರ ಪರಿಶೀಲಿಸಬಹುದು.
ನಡೆಸಬೇಕಾದ ಹಂತಗಳು:
- ಪಿಎಂ ಕಿಸಾನ್ ವೆಬ್‌ಸೈಟ್ ತೆರೆಯಿರಿ
- ‘Beneficiary Status / ಫಲಾನುಭವಿಗಳ ಸ್ಥಿತಿ’ ಆಯ್ಕೆ ಮಾಡಿ
- ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ ವಿವರ ನಮೂದಿಸಿ
- ‘ವರದಿ ಪಡೆಯಿರಿ’ ಕ್ಲಿಕ್ ಮಾಡಿ
- ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡರೆ, ಹಣ ಜಮೆಯಾಗಿದೆ.
- ಸಾಮಾನ್ಯವಾಗಿ ಬ್ಯಾಂಕ್‌ನಿಂದ SMS ಕೂಡ ಬರುತ್ತದೆ.
ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ವಾರ್ಷಿಕ ₹6,000 ನೇರ ಸಬ್ಸಿಡಿ ನೀಡುವ ಮಹತ್ವದ ಯೋಜನೆ. ಪ್ರತಿ ನಾಲ್ಕು ತಿಂಗಳಿಗೆ ₹2,000 ರಂತೆ ಮೂರು ಕಂತುಗಳಾಗಿ ಹಣ ಜಮೆಯಾಗುತ್ತದೆ.
ನೋಂದಣಿಗೆ ಅಗತ್ಯ ದಾಖಲೆಗಳು:
- ರೈತನ ಭೂಮಿ ದಾಖಲೆ
- ರೈತ/ಪತ್ನಿಯ ಹೆಸರು
- ಬ್ಯಾಂಕ್ ಖಾತೆ ಸಂಖ್ಯೆ + IFSC ಕೋಡ್
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
ಇ-ಕೆವೈಸಿ ಕಡ್ಡಾಯ: ರೈತರು ತಪ್ಪದೇ ಪೂರ್ಣಗೊಳಿಸಬೇಕು
ಪೋರ್ಟಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿ ಸೌಲಭ್ಯ ಲಭ್ಯವಿದೆ. ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಯೋಜನೆಯ ಮುಖ್ಯ ಉದ್ದೇಶ ರೈತರ ಆದಾಯ ಹೆಚ್ಚಿಸುವುದು ಮತ್ತು ಕೃಷಿ ಚಟುವಟಿಕೆಗೆ ಸ್ಥಿರ ನೆರವು ಒದಗಿಸುವುದು.
ಕೃಷಿ ಚಟುವಟಿಕೆಗೆ ನೇರ ನೆರವು
ಈ ಯೋಜನೆಯಡಿ ದೊರೆಯುವ ಹಣ ಬೀಜ, ಗೊಬ್ಬರ, ಕೀಟನಾಶಕ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸಲು ಸಹಕಾರಿ. ಅನೇಕ ರೈತರು ಈ ಹಣವನ್ನು ಹಂಗಾಮಿ ಅವಶ್ಯಕತೆಗಳಿಗೆ ಬಳಸುತ್ತಿದ್ದಾರೆ.
PM-Kisan 21st Installment Released
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



