ಮತ್ತೆ ರೈತರ ಖಾತೆಗಳಿಗೆ ₹2,000 ಜಮಾ! ಮೋದಿಜಿ ಕಡೆಯಿಂದ ದೇಶದ ರೈತರಿಗೆ ಭರ್ಜರಿ ಸುದ್ದಿ
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಹಂತದ ಹಣ ಬಿಡುಗಡೆಯ ಬಗ್ಗೆ ರೈತರು ಕಾತರದಿಂದ ಕಾಯುತ್ತಿದ್ದಾರೆ. e-KYC ಮತ್ತು ಭೂಮಿ ಪರಿಶೀಲನೆ ಪೂರ್ಣಗೊಂಡವರಿಗೆ ಮಾತ್ರ ಫೆಬ್ರವರಿ 2026ರಲ್ಲಿ 2 ಸಾವಿರ ಜಮೆಯಾಗುವ ಸಾಧ್ಯತೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಹಂತದ ಕುರಿತು ರೈತರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ 21ನೇ ಹಂತವನ್ನು ಸರ್ಕಾರ ನವೆಂಬರ್ 19, 2025ರಂದು ಬಿಡುಗಡೆ ಮಾಡಿತ್ತು. ಈ ಬಾರಿ 9 ಕೋಟಿಗೂ ಅಧಿಕ ರೈತರಿಗೆ ನೇರವಾಗಿ ರೂ.2,000 ಜಮೆಯಾಗಿದೆ.
ಫೆಬ್ರವರಿ 2026ಕ್ಕೆ ಹಣ ಬಿಡುಗಡೆ ನಿರೀಕ್ಷೆ
ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2,000 ವಿತರಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ, 22ನೇ ಹಂತವನ್ನು ಸರ್ಕಾರ ಫೆಬ್ರವರಿ 2026ರ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. 19ನೇ ಹಂತವನ್ನು ಫೆಬ್ರವರಿ 2025ರಲ್ಲಿ ಮತ್ತು 20ನೇ ಹಂತವನ್ನು ಆಗಸ್ಟ್ 2025ರಲ್ಲಿ ನೀಡಿರುವ ಹಿನ್ನೆಲೆ, ಮುಂದಿನ ಕಂತು ಕೂಡ ಇದೆ ರೀತಿ ಬಿಡುಗಡೆಯಾಗಲಿದೆ.
e-KYC ಅನಿವಾರ್ಯ – ಪೂರ್ಣಗೊಳಿಸದಿದ್ದರೆ ಹಣ ಜಮೆಯಾಗುವುದಿಲ್ಲ
ಸರ್ಕಾರ ಸ್ಪಷ್ಟಪಡಿಸಿರುವಂತೆ, e-KYC ಮಾಡದ ರೈತರಿಗೆ ಯಾವುದೇ ಹಂತದ ಹಣ ಜಮೆಯಾಗುವುದಿಲ್ಲ. ಇನ್ನೂ ಅನೇಕ ರೈತರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಕಾಯುತ್ತಿರುವುದು ಕೂಡ ಕಂಡು ಬಂದಿದೆ. ಅಂತವರ ಖಾತೆಗೆ 22ನೇ ಹಂತ ಜಮೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಭೂಮಿಯ ಪರಿಶೀಲನೆಯೂ ಕಡ್ಡಾಯ
ಈ ಬಾರಿ ಭೂಮಿ ದಾಖಲಾತಿ ಪರಿಶೀಲನೆಯನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೆ ತಂದಿದೆ. ಹಿಂದಿನ ಹಂತಗಳಲ್ಲಿ ಇದು ಅಗತ್ಯ ಇರಲಿಲ್ಲ. ಆದರೆ ಈಗ ಎಲ್ಲ ರೈತರು ತಮ್ಮ ಭೂಮಿ ವಿವರಗಳನ್ನು ಅಪ್‌ಡೇಟ್ ಮಾಡಿದರೆ ಮಾತ್ರ ಹಣ ಬಿಡುಗಡೆ ಆಗಲಿದೆ.
e-KYC ಹೇಗೆ ಮಾಡುವುದು? (Step-by-Step)
- ಪಿಎಂ ಕಿಸಾನ್ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
- ಹೋಂ ಪೇಜ್‌ನಲ್ಲಿ ಇರುವ e-KYC ಲಿಂಕ್ ಕ್ಲಿಕ್ ಮಾಡಿ
- ತೆರೆಯುವ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ
- ‘Search’ ಒತ್ತಿದ ನಂತರ ಮೊಬೈಲ್‌ಗೆ OTP ಬರುತ್ತದೆ
- OTP ನಮೂದಿ ‘Submit’ ಒತ್ತಿದರೆ e-KYC ಪೂರ್ಣ
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



