ಪಿಎಂ ಕಿಸಾನ್ 22ನೇ ಹಂತದ ಹಣ: ರೈತರಿಗೆ ಮಹತ್ವದ ಸುದ್ದಿ ಘೋಷಿಸಿದ ಮೋದಿಜಿ

ಫೆಬ್ರವರಿಯಲ್ಲಿ ಪಿಎಂ ಕಿಸಾನ್ ಯೋಜನೆಯ 22ನೇ ಹಂತದ ಹಣ ಜಮಾ ಆಗುವ ನಿರೀಕ್ಷೆ ಹೆಚ್ಚಿದ್ದು, ಈ-ಕೆವೈಸಿ ಪೂರ್ಣಗೊಳಿಸಿದ ರೈತರಿಗೆ ಮಾತ್ರವೇ ಮೊತ್ತ ತಲುಪಲಿದೆ. ಅಗತ್ಯ ದಾಖಲೆಗಳ ಪರಿಶೀಲನೆ ಅತ್ಯಗತ್ಯ.

PM Kisan 22nd Installment: ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವತಃ ಬಟನ್ ಒತ್ತಿ 21ನೇ ಹಂತದ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ ನಂತರ, ಈಗ 22ನೇ ಹಂತದ ಮೊತ್ತಕ್ಕೂ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಲಕ್ಷಾಂತರ ರೈತರು ವರ್ಷಕ್ಕೊಮ್ಮೆ ದೊರೆಯುವ ₹6,000 ಪ್ರಯೋಜನದ ಮುಂದಿನ ಕಂತಿಗಾಗಿ ಕಾಯುತ್ತಿದ್ದಾರೆ.

22ನೇ ಹಂತದ ಹಣ ಫೆಬ್ರವರಿಯಲ್ಲಿ ಸಾಧ್ಯ,  ಆದರೆ ಷರತ್ತು?

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್ 22ನೇ ಹಂತದ ಹಣ ಬಿಡುಗಡೆ ಮಾಡಲು ಯೋಜನೆ ನಡೆದಿದೆ. ಈ ಹಂತದಲ್ಲಿ ಸಹ ರೈತರಿಗೆ ₹2,000 ಜಮೆ ಆಗಲಿದೆ. ಆದರೆ, ಈ–KYC ಪೂರ್ಣಗೊಂಡಿದ್ದರೆ ಮಾತ್ರ ಹಣ ಖಾತೆಗೆ ತಲುಪುತ್ತದೆ ಎಂಬುದು ಮುಖ್ಯ ಶರತ್ತು.

ಈ–KYC ಬಾಕಿ ಇದ್ದರೆ ಹಣ ನಿಲ್ಲಬಹುದು

ಅನೇಕ ರೈತರ KYC ಇನ್ನೂ ಅಪ್‌ಡೇಟ್ ಆಗಿಲ್ಲದಿರುವುದರಿಂದ ಮೊತ್ತ ಜಮೆ ತಡೆಗೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್‌–KYC ಹಾಗೂ ಪಿಎಂ ಕಿಸಾನ್ ಪೋರ್ಟಲ್‌ನ KYC ಎರಡನ್ನೂ ಸಮಯಕ್ಕೆ ಸರಿಯಾಗಿ ನವೀಕರಿಸಬೇಕು. ಇಲ್ಲದಿದ್ದರೆ ಮೊತ್ತ ತಲುಪದ ಪರಿಸ್ಥಿತಿ ಎದುರಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲಿಸಬೇಕಾದ ಮುಖ್ಯ ಅಂಶಗಳು

ಯೋಜನೆಯಡಿ ಹಣ ಪಡೆಯಲು ರೈತರು ನಾಲ್ಕು ಪ್ರಮುಖ ವಿಷಯಗಳನ್ನು ದೃಢಪಡಿಸಿಕೊಳ್ಳಬೇಕು

  • ಆಧಾರ್ ಮತ್ತು ಬ್ಯಾಂಕ್ ಖಾತೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
  • ಬ್ಯಾಂಕ್ KYC ಯಲ್ಲಿ ಯಾವುದೇ ಬಾಕಿ ಇರಬಾರದು.
  • ಭೂಮಿಯ ದೃಢೀಕರಣವನ್ನು ಸ್ಥಳೀಯ ಅಧಿಕಾರಿಗಳಿಂದ ನವೀಕರಿಸಿರಬೇಕು.
  • ಪಿಎಂ ಕಿಸಾನ್‌ನಲ್ಲಿ ದಾಖಲಾದ ಮೊಬೈಲ್ ಸಂಖ್ಯೆ ಸಕ್ರಿಯವಾಗಿರಬೇಕು.

ಈ ವಿವರಗಳು ಸರಿಯಾಗಿದ್ದರೆ ಯಾವುದೇ ಅಡಚಣೆ ಇಲ್ಲದೆ ₹2,000 ನಿಮ್ಮ ಖಾತೆಗೆ ಜಮೆಯಾಗುತ್ತದೆ.

e–KYC ಹೇಗೆ ಮಾಡಬೇಕು? ಸರಳ ಮಾರ್ಗಗಳು

ರೈತರು ಸಮೀಪದ CSC ಕೇಂದ್ರಕ್ಕೆ ಭೇಟಿ ನೀಡಿ KYC ಮಾಡಿಸಬಹುದು. ಇಲ್ಲವೇ, pmkisan.gov.in ಗೆ ಹೋಗಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಆನ್‌ಲೈನ್ ಮೂಲಕವೂ ಪೂರ್ಣಗೊಳಿಸಬಹುದು. ಪಿಎಂ ಕಿಸಾನ್ ಮೊಬೈಲ್ ಆಪ್ ಮೂಲಕವೂ e–KYC ಮಾಡಲು ಅವಕಾಶ ಕಲ್ಪಿಸಲಾಗಿದೆ.

ಯೋಜನೆಗೆ ಯಾರು ಅರ್ಹರು?

ಪಿಎಂ ಕಿಸಾನ್ ಯೋಜನೆಯಡಿ 5 ಎಕರೆಗಳೊಳಗಿನ ಸಣ್ಣ ಮತ್ತು ಅತಿಸಣ್ಣ ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಇದು ಮೂರು ಹಂತಗಳಲ್ಲಿ ₹2,000 ದಂತೆ ಕಂತು ಜಮೆಯಾಗುತ್ತದೆ. 22ನೇ ಹಂತದ ಮೊತ್ತ ಈಗ ರೈತರಿಗೆ ಮುಂದಿನ ಮುಂದಿನ ತಿಂಗಳಿನಲ್ಲಿ ದೊರಕಲಿದೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories