PM Kisan: ಫೆಬ್ರವರಿ ಅಂತ್ಯದಲ್ಲಿ ಪಿಎಂ ಕಿಸಾನ್ ಹಣ ಜಮಾ, ನಿಮಗೆ ಬರುತ್ತದೆಯೇ? ಇಲ್ಲವೇ? ಈ ರೀತಿ ಚೆಕ್ ಮಾಡಿ
PM Kisan: ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ₹2,000 ಹಣ ಫೆಬ್ರವರಿ ಅಂತ್ಯದಲ್ಲಿ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆ ಇದ್ದು, ಇ-ಕೆವೈಸಿ ಪೂರ್ಣಗೊಳಿಸಿದವರು ಮಾತ್ರ ಲಾಭ ಪಡೆಯಲಿದ್ದಾರೆ.

- ಪಿಎಂ ಕಿಸಾನ್ 22ನೇ ಕಂತು 2,000 ಜಮಾ ಸಾಧ್ಯತೆ
- ಇ-ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ಹಣ
- ಡಿಬಿಟಿ ಮೂಲಕ ರೈತರ ಖಾತೆಗೆ ನೇರ ಜಮಾ
PM Kisan 22nd Installment: ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತೀ ಕಂತಿನಲ್ಲಿ ನೀಡುವ 2,000 ನೆರವಿಗಾಗಿ ಲಕ್ಷಾಂತರ ಫಲಾನುಭವಿಗಳು ಕಾಯುತ್ತಿದ್ದಾರೆ.
ಇದುವರೆಗೆ 21 ಕಂತುಗಳ ಹಣ ಬಿಡುಗಡೆಗೊಂಡಿದ್ದು, ಈಗ ಎಲ್ಲರ ಕಣ್ಣೂ 22ನೇ ಕಂತಿನತ್ತ ನೆಟ್ಟಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಮೂಲಕ ಹಣ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ. ಆದರೆ ಇ-ಕೆವೈಸಿ ಪೂರ್ಣಗೊಳಿಸದವರ ಖಾತೆಗೆ ಹಣ ಜಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಿಂದಿನ ವರ್ಷಗಳ ಬಿಡುಗಡೆ ದಿನಾಂಕಗಳನ್ನು ಗಮನಿಸಿದರೆ, ಫೆಬ್ರವರಿ ಕೊನೆಯ ವಾರದಲ್ಲೇ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದುದನ್ನು ಕಾಣಬಹುದು. ಆದ್ದರಿಂದ ಈ ಬಾರಿ ಕೂಡ ತಿಂಗಳ ಅಂತ್ಯದಲ್ಲಿ ಹಣ ಜಮೆಯಾಗುವ ಸಾಧ್ಯತೆ ಹೆಚ್ಚು ಎಂದು ಅಂದಾಜಿಸಲಾಗಿದೆ.
ನಿಮ್ಮ ಖಾತೆಗೆ ಬರುತ್ತದೆಯೇ? ಹೇಗೆ ತಿಳಿಯುವುದು?
- ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “Beneficiary List” ಆಯ್ಕೆಮಾಡಿ.
- ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ವಿವರಗಳನ್ನು ನಮೂದಿಸಿ.
- ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಪರಿಶೀಲಿಸಿ.
ಇದಲ್ಲದೆ “Know Your Status” ವಿಭಾಗದಲ್ಲಿ ನೋಂದಣಿ ಸಂಖ್ಯೆ ನಮೂದಿಸಿ 22ನೇ ಕಂತಿನ ಸ್ಥಿತಿಯನ್ನು ಪರಿಶೀಲಿಸಬಹುದು. ಕೇಂದ್ರ ಸರ್ಕಾರ ಪ್ರತೀ ಕಂತಿನ ಮೊದಲು ಫಲಾನುಭವಿಗಳ ಪಟ್ಟಿಯನ್ನು ನವೀಕರಿಸುತ್ತಿದ್ದು, ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುತ್ತಿದೆ.
ಇ-ಕೆವೈಸಿ ಸರಿಯಾಗಿ ಪೂರ್ಣಗೊಂಡಿದ್ದರೆ ಮತ್ತು ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ, ಹಣ ನಿಮ್ಮ ಖಾತೆಗೆ ಜಮೆಯಾಗಲಿದೆ.



