PM Kisan: ರೈತರ ಖಾತೆಗೆ 6,000 ಜಮಾ; ಪಿಎಂ ಕಿಸಾನ್ ಯೋಜನೆಯ 22ನೇ ಕಂತಿಗೆ ಸಿದ್ಧತೆ ಪೂರ್ಣ
PM Kisan Scheme: ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಿದ್ಧತೆ ಪೂರ್ಣಗೊಳಿಸಿದೆ. ಫೆಬ್ರವರಿಯಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದ್ದು, ರೈತರಿಗೆ ನಿರೀಕ್ಷಿತ ಸುದ್ದಿ ಸಿಕ್ಕಿದೆ.
- PM Kisan 22ನೇ ಕಂತು ಫೆಬ್ರವರಿಯಲ್ಲಿ ಜಮಾ
- ಅರ್ಹ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ
- e-KYC ಮತ್ತು ದಾಖಲೆ ಅಪ್‌ಡೇಟ್ ಕಡ್ಡಾಯ
PM Kisan: ರೈತರ ಆದಾಯ ಬೆಂಬಲಕ್ಕಾಗಿ ಜಾರಿಯಲ್ಲಿರುವ ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಕಳೆದ ವರ್ಷದ ಗೊಂದಲ ಮರುಕಳಿಸದಂತೆ ಮುಂಚಿತವಾಗಿಯೇ ಹಣ ವಿತರಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಫೆಬ್ರವರಿಯಲ್ಲಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ (Bank Account) ನೇರವಾಗಿ ಹಣ ಜಮೆಯಾಗುವ (Money Deposit) ಸಾಧ್ಯತೆ ಹೆಚ್ಚಿದೆ.
ಎಷ್ಟು ಹಣ ಯಾರಿಗೆ?
ಪ್ರತಿ ವರ್ಷ ಮೂರು ಹಂತಗಳಲ್ಲಿ ₹6,000 ನೀಡುವ ಪಿಎಂ ಕಿಸಾನ್ ಯೋಜನೆಯಂತೆ, 22ನೇ ಕಂತಿನಲ್ಲಿ ಪ್ರತಿ ರೈತರಿಗೆ ₹2,000 ಜಮೆಯಾಗಲಿದೆ. ಬಜೆಟ್‌ನಲ್ಲಿ ಹೆಚ್ಚುವರಿ ಘೋಷಣೆಗಳಿದ್ದರೂ, ಅವು ಏಪ್ರಿಲ್ ನಂತರವೇ ಜಾರಿಗೆ ಬರಲಿವೆ.
ಫಲಾನುಭವಿಗಳ ಪಟ್ಟಿ ತಿದ್ದುಪಡಿ ಮುಂದುವರಿಕೆ
ಕೇಂದ್ರ ಸರ್ಕಾರ ಜುಲೈ ಬಳಿಕ ಪಿಎಂ ಕಿಸಾನ್ ಹಣವನ್ನು ಕೇವಲ ನಿಜವಾದ ಅರ್ಹ ರೈತರಿಗೆ ಮಾತ್ರ ನೀಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಕೋಟಿಗೂ ಹೆಚ್ಚು ಅಯೋಗ್ಯ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆ ಇನ್ನೂ ಮುಂದುವರಿದಿರುವುದರಿಂದ ರೈತರು ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ ಎಂದು ನಿರಂತರವಾಗಿ ಪರಿಶೀಲಿಸುವುದು ಅಗತ್ಯ.
e-KYC ಮತ್ತು ದಾಖಲೆಗಳ ಮಹತ್ವ
ಹಲವು ರೈತರು e-KYC ಅಪ್‌ಡೇಟ್ ಮಾಡದ ಕಾರಣ ಹಿಂದಿನ ಕಂತಿನ ಹಣದಿಂದ ವಂಚಿತರಾಗಿದ್ದರು. ಇಂತಹ ಸಮಸ್ಯೆ ಮರುಕಳಿಸದಂತೆ ಯುನಿಕ್ ಫಾರ್ಮರ್ ಐಡಿ, ಬ್ಯಾಂಕ್ ವಿವರಗಳು ಮತ್ತು ಭೂ ದಾಖಲೆಗಳನ್ನು ಸರಿಯಾಗಿ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ e-KYC, ಮೊಬೈಲ್ ನಂಬರ್ ಅಪ್‌ಡೇಟ್, ಮಿಸ್ಸಿಂಗ್ ಮಾಹಿತಿ ತಿದ್ದುಪಡಿ ಆಯ್ಕೆಗಳು ಲಭ್ಯವಿವೆ.
ಹೊಸ ಅರ್ಜಿಗೆ ರೈತರಿಗೆ ಅವಕಾಶ
ಹೊಸ ರೈತರು ಈಗಲೂ pmkisan.gov.in ವೆಬ್‌ಸೈಟ್‌ನಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪರಿಶೀಲನೆಯ ನಂತರ ಅವರು ಕೂಡ 22ನೇ ಕಂತಿನ ಹಣ ಪಡೆಯಬಹುದು. ಅನರ್ಹ ಫಲಾನುಭವಿಗಳು ಹಣ ಪಡೆದವರು ಸ್ವಯಂಪ್ರೇರಿತವಾಗಿ ಆನ್‌ಲೈನ್ ರಿಫಂಡ್ ಮೂಲಕ ಹಣ ಹಿಂದಿರುಗಿಸಬಹುದಾಗಿದೆ. ಇದರಿಂದ ಕಾನೂನು ಕ್ರಮ ತಪ್ಪಿಸಿಕೊಳ್ಳಬಹುದು.







