ರೈತರಿಗೆ ಭರ್ಜರಿ ಸುದ್ದಿ, ಫೆಬ್ರವರಿಯಲ್ಲಿ ಖಾತೆಗೆ 2,000 ಜಮಾ! ಕೇಂದ್ರದಿಂದ ಬಿಗ್ ಅಪ್ಡೇಟ್
ಪಿಎಂ ಕಿಸಾನ್ 22ನೇ ಕಂತಿನ ಹಣ ಶೀಘ್ರ ಬಿಡುಗಡೆ ಸಾಧ್ಯತೆ ಇದೆ ಎಂದು ಅಂದಾಜು. ಫೆಬ್ರವರಿ 2026ಕ್ಕೆ ರೈತರ ಖಾತೆಗಳಿಗೆ ರೂ.2,000 ಜಮಾಗುವ ನಿರೀಕ್ಷೆ; KYC ಪೂರ್ಣಗೊಂಡವರಿಗೆ ಮಾತ್ರ ಲಾಭ..

- ಪಿಎಂ ಕಿಸಾನ್ 22ನೇ ಕಂತು ಫೆಬ್ರವರಿಯಲ್ಲಿ ನಿರೀಕ್ಷೆ
- 2,000 ಹಣ ನೇರವಾಗಿ ಖಾತೆಗೆ ಜಮಾ
- e-KYC, ಭೂಮಿ ದಾಖಲೆ ಅಪ್ಡೇಟ್ ಕಡ್ಡಾಯ
PM Kisan: ದೇಶದ ಕೋಟ್ಯಂತರ ರೈತರ ಗಮನ ಪಿಎಂ ಕಿಸಾನ್ 22ನೇ ಕಂತಿನ ಮೇಲೆ ನೆಟ್ಟಿದೆ. ಸರ್ಕಾರದಿಂದ ಅಧಿಕೃತ ದಿನಾಂಕ ಪ್ರಕಟವಾಗದಿದ್ದರೂ, ಹಿಂದಿನ ಕಂತುಗಳ ವೇಳಾಪಟ್ಟಿಯನ್ನು ನೋಡಿದರೆ ಫೆಬ್ರವರಿ 2026ರಲ್ಲಿ ಹಣ ಜಮಾ ಆಗುವ ಸಾಧ್ಯತೆ ಹೆಚ್ಚಿದೆ ಎಂಬುದು ಕೃಷಿ ವಲಯದ ನಿರೀಕ್ಷೆ.
ಇದುವರೆಗೆ 21 ಕಂತುಗಳನ್ನು ಯಶಸ್ವಿಯಾಗಿ ವಿತರಿಸಿರುವ ಕೇಂದ್ರ ಸರ್ಕಾರ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ (farmers) ಆರ್ಥಿಕ ಸ್ಥಿರತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮುಂದುವರಿಸುತ್ತಿದೆ. ಪ್ರತಿ ಕಂತಿನಲ್ಲಿ ₹2,000 ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಜಮಾ ಆಗುವುದರಿಂದ ಬೀಜ, ಗೊಬ್ಬರ ಹಾಗೂ ದಿನನಿತ್ಯದ ಕೃಷಿ ಖರ್ಚುಗಳಿಗೆ ನೆರವಾಗುತ್ತಿದೆ.
ಯೋಜನೆಯ ಉದ್ದೇಶ ಮತ್ತು ಲಾಭ
2019ರಲ್ಲಿ ಆರಂಭವಾದ ಈ ಯೋಜನೆಯಡಿ, ಅರ್ಹ ರೈತರಿಗೆ ವರ್ಷಕ್ಕೆ ₹6,000 ನೆರವು ಸಿಗುತ್ತದೆ. ಇದನ್ನು ಮೂರು ಸಮಾನ ಕಂತುಗಳಲ್ಲಿ ನೇರ ಲಾಭ ವರ್ಗಾವಣೆ (DBT) ಮೂಲಕ ಖಾತೆಗೆ ಹಾಕಲಾಗುತ್ತದೆ. ಮಧ್ಯವರ್ತಿಗಳಿಲ್ಲದ ಪಾರದರ್ಶಕ ವ್ಯವಸ್ಥೆಯೇ ಇದರ ಪ್ರಮುಖ ಶಕ್ತಿ.
ಹಣ ಬಾರದಿದ್ದರೆ ಕಾರಣವೇನು?
ಕೆಲವು ಸಣ್ಣ ತಪ್ಪುಗಳೇ ಹಣ ಜಮಾ ಆಗುವುದಕ್ಕೆ ಅಡ್ಡಿಯಾಗುತ್ತಿವೆ. 22ನೇ ಕಂತು ಸಮಯಕ್ಕೆ ಸಿಗಬೇಕಾದರೆ ರೈತರು ಈ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು:
- e-KYC ಪೂರ್ಣಗೊಳಿಸುವುದು (ಆನ್ಲೈನ್ ಅಥವಾ CSC ಕೇಂದ್ರದಲ್ಲಿ)
- ಆಧಾರ್–ಬ್ಯಾಂಕ್ ಲಿಂಕ್ ಸರಿಯಾಗಿರುವುದು
- ಭೂಮಿ ದಾಖಲೆಗಳು ಪೋರ್ಟಲ್ನಲ್ಲಿ ನವೀಕರಿಸಿರುವುದು
- ಹೆಸರು, ಖಾತೆ ಸಂಖ್ಯೆ ಸೇರಿದಂತೆ ವಿವರಗಳು ತಪ್ಪಿಲ್ಲವೆಂದು ಪರಿಶೀಲನೆ
ಕೃಷಿ ವೆಚ್ಚಗಳು ಏರುತ್ತಿರುವ ಈ ಸಂದರ್ಭದಲ್ಲಿ ₹2,000 ಸಹಾಯ ರೈತರಿಗೆ ಮಹತ್ವದ ಉಸಿರಾಟ. ಆದ್ದರಿಂದ ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಅಗತ್ಯ ಪ್ರಕ್ರಿಯೆಗಳನ್ನು ಈಗಲೇ ಮುಗಿಸಿಕೊಳ್ಳುವುದು ಒಳಿತು.







