ಪಿಎಂ ಕಿಸಾನ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಇಲ್ವಾ? 23ನೇ ಕಂತು ಬರದಿದ್ದರೆ ತಕ್ಷಣ ಹೀಗೆ ಚೆಕ್ ಮಾಡಿ!

ಪಿಎಂ ಕಿಸಾನ್ ಯೋಜನೆಯ 23ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಮುಖ್ಯ ಮಾಹಿತಿ. ನಿಮ್ಮ ಹೆಸರು ಲಿಸ್ಟ್‌ನಿಂದ ತೆಗೆದಿದೆಯೇ? e-KYC, ಪಾವತಿ ಸ್ಥಿತಿ ಮತ್ತು ಕಂತಿನ ಮಾಹಿತಿ ಮೊಬೈಲ್‌ನಲ್ಲೇ ಸುಲಭವಾಗಿ ಪರಿಶೀಲಿಸಬಹುದು.

ದೇಶದ ಲಕ್ಷಾಂತರ ರೈತರು ಈಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಕೆಲ ರೈತರಿಗೆ ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಿದರೇನೋ ಎಂಬ ಆತಂಕವೂ ಶುರುವಾಗಿದೆ. ಹಿಂದಿನ ಕಂತು ಬಂದಿದ್ದರೂ ಈ ಬಾರಿ ಹಣ ಜಮೆಯಾಗದಿದ್ದರೆ, ಮೊದಲು ನಿಮ್ಮ ಸ್ಟೇಟಸ್ ಪರಿಶೀಲಿಸುವುದು ಮುಖ್ಯವಾಗಿದೆ.

ಕೇಂದ್ರ ಸರ್ಕಾರ ಈಗಾಗಲೇ 22ನೇ ಕಂತಿನ ಹಣವನ್ನು ಮಾರ್ಚ್ 13ರಂದು ಬಿಡುಗಡೆ ಮಾಡಿತ್ತು. ಆ ವೇಳೆ ದೇಶದ 9.32 ಕೋಟಿ ರೈತರ ಖಾತೆಗಳಿಗೆ ಡಿಬಿಟಿ (DBT) ಮೂಲಕ ₹18,640 ಕೋಟಿಗೂ ಹೆಚ್ಚು ಮೊತ್ತವನ್ನು ನೇರವಾಗಿ ಜಮಾ ಮಾಡಲಾಗಿತ್ತು. ಈಗ 23ನೇ ಕಂತು ಯಾವಾಗ ಬರುತ್ತದೆ ಎಂಬುದರ ಬಗ್ಗೆ ರೈತರು ಕುತೂಹಲದಿಂದ ಕಾಯುತ್ತಿದ್ದಾರೆ.

ಪಿಎಂ ಕಿಸಾನ್ ಸ್ಟೇಟಸ್ ಹೇಗೆ ಪರಿಶೀಲಿಸಬೇಕು?

ರೈತರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸುಲಭವಾಗಿ ಸ್ಟೇಟಸ್ ಪರಿಶೀಲಿಸಬಹುದು. ಇದರಿಂದ ಕಂತು ಜಮಾ ಆಗಿದೆಯೇ, e-KYC ಪೂರ್ಣಗೊಂಡಿದೆಯೇ, ಪಾವತಿ ತಡೆ ಆಗಿದೆಯೇ ಎಂಬ ಮಾಹಿತಿ ಸಿಗುತ್ತದೆ.

ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
https://pmkisan.gov.in

ಅದಾದ ಬಳಿಕ ಕೆಳಗಿನ ಹಂತಗಳನ್ನು ಅನುಸರಿಸಿ:

ಹೋಮ್ ಪೇಜ್‌ನಲ್ಲಿ “Know Your Status” ಆಯ್ಕೆಯನ್ನು ಕ್ಲಿಕ್ ಮಾಡಿ
ನಿಮ್ಮ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ
ಕ್ಯಾಪ್ಚಾ ಕೋಡ್ ಹಾಕಿ “Get OTP” ಒತ್ತಿ
ಮೊಬೈಲ್‌ಗೆ ಬಂದ OTP ನಮೂದಿಸಿ
ನಂತರ “Get Data” ಆಯ್ಕೆ ಮಾಡಿದರೆ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ

ಯಾವ ಮಾಹಿತಿ ಇಲ್ಲಿ ಕಾಣಿಸುತ್ತದೆ?

ಸ್ಟೇಟಸ್ ಪರಿಶೀಲಿಸಿದಾಗ ಕೆಳಗಿನ ಮಾಹಿತಿಗಳು ಲಭ್ಯವಾಗುತ್ತವೆ:

ಹಿಂದಿನ ಕಂತುಗಳ ಪಾವತಿ ಇತಿಹಾಸ
e-KYC ಸ್ಥಿತಿ
ಬ್ಯಾಂಕ್ ಖಾತೆ ಪರಿಶೀಲನೆ ಮಾಹಿತಿ
ಹೊಸ ಕಂತಿನ ಪಾವತಿ ಸ್ಥಿತಿ

ಒಂದೇ ವೇಳೆ e-KYC ಅಪ್‌ಡೇಟ್ ಆಗದೇ ಇದ್ದರೆ ಅಥವಾ ಬ್ಯಾಂಕ್ ಮಾಹಿತಿ ತಪ್ಪಿದ್ದರೆ, ಕಂತಿನ ಹಣ ತಾತ್ಕಾಲಿಕವಾಗಿ ತಡೆ ಆಗುವ ಸಾಧ್ಯತೆಯೂ ಇದೆ. ಆದ್ದರಿಂದ ರೈತರು ತಕ್ಷಣವೇ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ.

23ನೇ ಕಂತು ಯಾವಾಗ ಬರಬಹುದು?

ಕೇಂದ್ರ ಸರ್ಕಾರ ಇನ್ನೂ 23ನೇ ಕಂತಿನ ಅಧಿಕೃತ ದಿನಾಂಕ ಘೋಷಿಸಿಲ್ಲ. ಆದರೆ ಕಳೆದ ವರ್ಷಗಳ ಟ್ರೆಂಡ್ ಗಮನಿಸಿದರೆ, ಜೂನ್ ಅಥವಾ ಜುಲೈ ತಿಂಗಳಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈಗಲೇ ತಮ್ಮ ಸ್ಟೇಟಸ್ ಪರಿಶೀಲಿಸಿ, ಯಾವುದೇ ತೊಂದರೆ ಇದ್ದರೆ ಸರಿಪಡಿಸಿಕೊಂಡರೆ ಮುಂದಿನ ಕಂತು ಸಮಯಕ್ಕೆ ಖಾತೆಗೆ ಜಮಾ ಆಗುವ ಸಾಧ್ಯತೆ ಹೆಚ್ಚುತ್ತದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories