ರೈತರೇ, ಇನ್ಮುಂದೆ ಪಿಎಂ ಕಿಸಾನ್ ಹಣಕ್ಕೆ ಕಟ್ಟುನಿಟ್ಟಿನ ನಿಯಮ: ಈ ಎರಡು ಕೆಲಸ ಕಡ್ಡಾಯ
ಪಿಎಂ ಕಿಸಾನ್ 22ನೇ ಕಂತಿನ ಹಣ ಫೆಬ್ರವರಿಯಲ್ಲಿ ಬರಲಿದೆ ಎನ್ನಲಾಗಿದ್ದು, ಯಾವುದೇ ತಡೆ ಇಲ್ಲದೆ ಹಣ ಪಡೆಯಲು ರೈತರು ಇ-ಕೆವೈಸಿ ಪೂರ್ಣಗೊಳಿಸಿ ಬ್ಯಾಂಕ್ ಖಾತೆಯನ್ನು ಆಧಾರ್ಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ
- ಇನ್ಮುಂದೆ ಪಿಎಂ ಕಿಸಾನ್ ಹಣಕ್ಕೆ ಇ-ಕೆವೈಸಿ ಕಡ್ಡಾಯ
- 22ನೇ ಕಂತು ಪಡೆಯಲು ಆಧಾರ್ ಲಿಂಕ್ ಅಗತ್ಯ
- ಕಿಸಾನ್ ಹಣ ತಡೆ ತಪ್ಪಿಸಲು ಈ ಎರಡು ಕೆಲಸ ಕಡ್ಡಾಯ
PM Kisan Alert: ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀಡಲಾಗುವ 22ನೇ ಕಂತಿನ ಹಣ ಮುಂದಿನ ವರ್ಷ ಫೆಬ್ರವರಿಯಲ್ಲಿ ಖಾತೆಗಳಿಗೆ (Bank Account) ಜಮಾ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ 21ನೇ ಕಂತಿನ ಹಣವನ್ನು ನವೆಂಬರ್ನಲ್ಲಿ ರೈತರಿಗೆ ವರ್ಗಾಯಿಸಲಾಗಿದೆ.
ಹಣ ತಡೆಯುವ ಸಾಧ್ಯತೆ ಏನು?
ಪಿಎಂ ಕಿಸಾನ್ ಯೋಜನೆಯಡಿ ಹಣ ನೇರವಾಗಿ ಖಾತೆಗೆ ಬರುವುದರಿಂದ ಕೆಲವು ತಾಂತ್ರಿಕ ಪ್ರಕ್ರಿಯೆಗಳು ಸರಿಯಾಗಿರಬೇಕಾಗುತ್ತದೆ. ಈ ಪ್ರಕ್ರಿಯೆಗಳು ಪೂರ್ಣವಾಗದಿದ್ದರೆ ಮುಂದಿನ ಕಂತಿನ ಹಣ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಇ-ಕೆವೈಸಿ ಇಲ್ಲದೆ ಹಣ ಇಲ್ಲ
ರೈತರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಇ-ಕೆವೈಸಿ ಪೆಂಡಿಂಗ್ ಇದ್ದರೆ 22ನೇ ಕಂತಿನ ಹಣ ಖಾತೆಗೆ ಜಮಾ ಆಗುವುದಿಲ್ಲ. ಈ ಪ್ರಕ್ರಿಯೆಯನ್ನು pmkisan.gov.in ವೆಬ್ಸೈಟ್ನಲ್ಲಿ ಓಟಿಪಿ ಮೂಲಕ ಅಥವಾ ಸಮೀಪದ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಪೂರ್ಣಗೊಳಿಸಬಹುದು.
ಆಧಾರ್–ಬ್ಯಾಂಕ್ ಲಿಂಕ್ ಮುಖ್ಯ
ಇ-ಕೆವೈಸಿ ಜೊತೆಗೆ ರೈತರ ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಆಗಿರಬೇಕು. ಡಿಬಿಟಿ ಸಕ್ರಿಯವಾಗದೇ ಇದ್ದರೆ ಹಣ ವರ್ಗಾವಣೆ ವಿಫಲವಾಗುತ್ತದೆ. ಬ್ಯಾಂಕ್ ಶಾಖೆಗಳಲ್ಲಿ ಅಥವಾ ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಈ ಲಿಂಕ್ ಪ್ರಕ್ರಿಯೆಯನ್ನು ನವೀಕರಿಸಬಹುದು.
ಈ ಎರಡು ಕೆಲಸಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿದರೆ ಪಿಎಂ ಕಿಸಾನ್ ಹಣದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ರೈತರು ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈಗಲೇ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



