ಪ್ರತಿ ರೈತರ ಖಾತೆಗೂ ಹಣ! ಬಹುನಿರೀಕ್ಷಿತ ಪಿಎಂ ಕಿಸಾನ್ ಯೋಜನೆಯ 21ನೇ ಹಂತ ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ 21ನೇ ಹಂತದ ಹಣ ಬಿಡುಗಡೆ ವಿಳಂಬವಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡರೆ, ಕೆಲವರಿಗೆ ಎರಡು ಹಂತದ ₹4,000 ಮೊತ್ತ ಒಂದೇ ಬಾರಿ ಜಮಾ ಆಗುವ ಸಾಧ್ಯತೆ ಇದೆ.

PM-Kisan Scheme: ಪಿಎಂ ಕಿಸಾನ್ ಯೋಜನೆಯ 21ನೇ ಹಂತ ಯಾವಾಗ ಬರುತ್ತದೆ ಎಂದು ರೈತರು ಕಾತರದಿಂದ ಕಾಯುತ್ತಿದ್ದಾರೆ. ಕಳೆದ 20ನೇ ಹಂತದ ಪಾವತಿ 2025ರ ಆಗಸ್ಟ್ 2ರಂದು ಜಮಾ ಆಗಿದ್ದರೂ, ಮುಂದಿನ ಹಂತದ ದಿನಾಂಕವನ್ನು ಕೇಂದ್ರ ಇನ್ನೂ ಘೋಷಿಸಿಲ್ಲ.

ಈ ನಡುವೆ lಲಕ್ಷಾಂತರ ಸಂಖ್ಯೆಯಲ್ಲಿ ಇರುವ ಅನರ್ಹ ಫಲಾನುಭವಿಗಳನ್ನು ಹೊರಹಾಕುವ ಪರಿಶೀಲನಾ ಕಾರ್ಯವೇ ವಿಳಂಬಕ್ಕೆ ಮುಖ್ಯ ಕಾರಣವೆಂದು ಸೂಚನೆಗಳು ತಿಳಿಸಿವೆ.

ರೈತರಿಗೆ ನೀಡಲಾಗುವ ₹6,000 ವಾರ್ಷಿಕ ನೆರವಿನ ಈ ಯೋಜನೆ, ದೇಶದ ಸಣ್ಣ ರೈತರಿಗೆ ದೊಡ್ಡ ಸಹಾಯ. DBT ಮೂಲಕ ಮೂರು ಹಂತಗಳಲ್ಲಿ ₹2,000 ದಂತೆ ನೇರವಾಗಿ ಜಮಾ ಆಗುವ ಈ ಹಣಕ್ಕಾಗಿ ದೇಶದ ಕೋಟ್ಯಂತರ ರೈತರು ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರವು ಈ ಬಾರಿ e-KYC, ಆಧಾರ್ ಲಿಂಕ್, ಭೂ ದಾಖಲೆ ಪರಿಶೀಲನೆಗಳನ್ನು ಗಟ್ಟಿಯಾಗಿ ನಡೆಸುತ್ತಿದ್ದು, ಅನರ್ಹರ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕುವ ಕಾರ್ಯ ಪ್ರಗತಿಯಲ್ಲಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ 21ನೇ ಹಂತ ಬಿಡುಗಡೆ ಆಗಲಿದೆ.

ಇದರಿಂದಾಗಿ ಹಿಂದಿನ ಹಂತ (20ನೇ ಹಂತ) ಪಡೆಯದೇ ಉಳಿದಿರುವ ಅರ್ಹ ರೈತರಿಗೆ, ದೃಢೀಕರಣ ಪೂರ್ಣಗೊಂಡರೆ, ₹4,000 (20ನೇ + 21ನೇ ಹಂತ) ಒಂದೇ ಬಾರಿಗೆ ಬರಬಹುದೆಂಬ ಸಾಧ್ಯತೆಯೂ ಇದೆ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ 2025 ರೊಳಗೆ ಹಣ ಬರುತ್ತದೆ ಎಂಬ ವರದಿಗಳು ಕೇಳಿಬರುತ್ತಿವೆ.

ಸಮಸ್ಯೆಗಳೆಲ್ಲಾ ಪರಿಹಾರವಾದರೆ, ಮುಂದಿನ ಹಂತದ ಪಾವತಿ ಸುಗಮವಾಗಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರೈತರು ನಿರೀಕ್ಷಿಸಿದ್ದಾರೆ.

PM-Kisan Payment Delay, Farmers May Get Double Credit

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories