ರೈತರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ಜಮಾ! ಕೇಂದ್ರದಿಂದ ಹೊಸ ಯೋಜನೆ
ಕೇಂದ್ರ ಸರ್ಕಾರದ PM-KUSUM ಯೋಜನೆಯಡಿ ರೈತರಿಗೆ 60% ಸಬ್ಸಿಡಿ, 30% ಬ್ಯಾಂಕ್ ಸಾಲ ಸೌಲಭ್ಯ ದೊರೆಯಲಿದ್ದು, ಸೌರ ಪಂಪ್ ಸ್ಥಾಪಿಸಿ ಹೆಚ್ಚುವರಿ ವಿದ್ಯುತ್ ಮಾರಾಟದಿಂದ ತಿಂಗಳಿಗೆ ಸ್ಥಿರ ಆದಾಯ ಗಳಿಸಬಹುದು.

- PM-KUSUM ಯೋಜನೆ ಅಡಿಯಲ್ಲಿ 60% ಸಬ್ಸಿಡಿ
- ಸೌರ ಪಂಪ್ ಸ್ಥಾಪನೆ ಮೂಲಕ ವಿದ್ಯುತ್ ಉತ್ಪಾದನೆ
- ರೈತರಿಗೆ ಲಕ್ಷಾಂತರ ಆದಾಯ ಗಳಿಸುವ ಯೋಜನೆ
ರೈತರಿಗೆ ಮತ್ತೊಂದು ಆದಾಯದ ದಾರಿ
ಕೃಷಿ ಅವಲಂಬಿತ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನೇರ ಹಣ ವರ್ಗಾವಣೆ, ರಾಸಾಯನಿಕ ಗೊಬ್ಬರ ಮತ್ತು ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ, ಕಡಿಮೆ ಬಡ್ಡಿದರ ಸಾಲ (Loan), ಇವುಗಳ ಮೂಲಕ ರೈತರ ಆರ್ಥಿಕ ಸ್ಥಿತಿ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲೇ PM-KUSUM ಯೋಜನೆ ವಿಶೇಷ ಗಮನ ಸೆಳೆದಿದೆ. ಕೃಷಿ ಕಾರ್ಯಕ್ಕೆ ಬಳಸುವ ಪಂಪ್‌ಗಳನ್ನು ಸೌರಶಕ್ತಿಯಿಂದ ಚಾಲಿತಗೊಳಿಸುವ ಮೂಲಕ ರೈತರು ತಮ್ಮ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದಲ್ಲದೆ, ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರದ ಬೆಸ್ಕಾಂಗಳಿಗೆ ಮಾರಾಟ ಮಾಡುವ ಅವಕಾಶವೂ ಇದೆ.
60% ಸಬ್ಸಿಡಿ – ಹೇಗೆ ಸಿಗುತ್ತದೆ?
ಈ ಯೋಜನೆಯಡಿಯಲ್ಲಿ ಸೌರ ಪಂಪ್‌ಗಳ (Solar Pump) ಸ್ಥಾಪನೆಗೆ 60% ಹಣವನ್ನು ಕೇಂದ್ರ ಸರ್ಕಾರವೇ ಸಬ್ಸಿಡಿಯಾಗಿ ನೀಡುತ್ತದೆ. 30% ಮೊತ್ತವನ್ನು ಬ್ಯಾಂಕ್‌ಗಳು ಸಾಲವಾಗಿ ಒದಗಿಸುತ್ತವೆ. ಉಳಿದ 10% ಮೊತ್ತವನ್ನು ರೈತರು ತಮ್ಮಿಂದಲೇ ಹೂಡಿಕೆ ಮಾಡಬೇಕು.
ಈ ಮೂಲಕ ಕಡಿಮೆ ಹೂಡಿಕೆಯಲ್ಲಿ ಸೌರ ಪಂಪ್ ವ್ಯವಸ್ಥೆ ಸ್ಥಾಪಿಸಿ ವರ್ಷಗಳವರೆಗೆ ಆದಾಯ ಗಳಿಸಬಹುದು. 2026ರ ಮಾರ್ಚ್ ವೇಳೆಗೆ 34,800 ಮೆಗಾವಾಟ್ ಸೌರ ಸಾಮರ್ಥ್ಯ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.
ಲಕ್ಷಾಂತರ ಆದಾಯ ಹೇಗೆ?
ಒಂದು ಮೆಗಾವಾಟ್ ಸಾಮರ್ಥ್ಯದ ಸೌರ ಘಟಕವನ್ನು (Solar Panel) ರೈತರು ಸ್ಥಾಪಿಸಿದರೆ, ದಿನಕ್ಕೆ ಸರಾಸರಿ 4,500 ಯುನಿಟ್ ವಿದ್ಯುತ್ ಉತ್ಪಾದನೆ ಸಾಧ್ಯ. ಈ ವಿದ್ಯುತ್ ಅನ್ನು ರಾಜ್ಯದ ಬೆಸ್ಕಾಂಗಳು 25 ವರ್ಷಗಳ ಕಾಲ ಖರೀದಿಸುವ ಒಪ್ಪಂದ ಮಾಡಿಕೊಳ್ಳುತ್ತವೆ.
ಪ್ರತಿ ಯುನಿಟ್‌ಗೆ ₹3.13 ದರ ನಿಗದಿಯಾಗಿದ್ದು, ದಿನಕ್ಕೆ ಸುಮಾರು ₹14,000ರವರೆಗೆ ಆದಾಯ ಸಾಧ್ಯವೆಂದು ಅಂದಾಜಿಸಲಾಗಿದೆ. ದೀರ್ಘಕಾಲದಲ್ಲಿ ಇದು ಲಕ್ಷಾಂತರ ರೂಪಾಯಿಗಳ ಲಾಭ ತರುವ ವ್ಯವಸ್ಥೆಯಾಗಬಹುದು.
ಯಾರು ಅರ್ಹರು?
ರೈತರು
ರೈತ ಸಂಘಗಳು
ಸಹಕಾರ ಸಂಘಗಳು
ನೀರು ಬಳಕೆದಾರರ ಸಂಘಗಳು
ಗ್ರಾಮ ಪಂಚಾಯಿತಿಗಳು
ಅರ್ಜಿ ಸಲ್ಲಿಸುವ ವಿಧಾನ
PM-KUSUM ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಂದಣಿ ಫಾರ್ಮ್ ತೆರೆಯಬೇಕು. ಅಗತ್ಯ ವಿವರಗಳನ್ನು ಭರ್ತಿ ಮಾಡಿ ಡಿಕ್ಲರೇಶನ್ ಒಪ್ಪಿ ಸಲ್ಲಿಸಬೇಕು. ನಂತರ ಲಾಗಿನ್ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ಪಾಸ್‌ಬುಕ್, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ, ಘೋಷಣಾಪತ್ರ, ಬ್ಯಾಂಕ್ ಪಾಸ್‌ಬುಕ್ ಹಾಗೂ ಭೂಮಿ ದಾಖಲೆಗಳು ಅವಶ್ಯಕ.







