ವಿದ್ಯಾಲಕ್ಷ್ಮಿ ಯೋಜನೆ: ವಿದ್ಯಾರ್ಥಿಗಳಿಗೆ 16 ಲಕ್ಷವರೆಗೆ ಶಿಕ್ಷಣ ಸಾಲ! ಅರ್ಜಿ ಪ್ರಕ್ರಿಯೆ ಇಲ್ಲಿದೆ

Education Loan: ಉನ್ನತ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವಿದ್ಯಾಲಕ್ಷ್ಮಿ ಯೋಜನೆ ನೆರವಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು 16 ಲಕ್ಷವರೆಗೆ ಶಿಕ್ಷಣ ಸಾಲ ಪಡೆದು ಓದು ಮುಂದುವರಿಸಬಹುದು, ಬಡ್ಡಿಗೆ ಸರ್ಕಾರದಿಂದ ಸಬ್ಸಿಡಿಯೂ ದೊರೆಯುತ್ತದೆ.

  • ವಿದ್ಯಾಲಕ್ಷ್ಮಿ ಯೋಜನೆ, ಶಿಕ್ಷಣ ಸಾಲ ಸೌಲಭ್ಯ
  • ಕೇಂದ್ರ ಸರ್ಕಾರದ ಯೋಜನೆ, ಆರ್ಥಿಕ ಸಹಾಯ
  • ವಿದ್ಯಾಲಕ್ಷ್ಮಿ ಯೋಜನೆ ಅರ್ಜಿ ಪ್ರಕ್ರಿಯೆ

Education Loan: ಬಹು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಕನಸು ಇದ್ದರೂ, ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅಡ್ಡಿಯಾಗುತ್ತದೆ. ಕಾಲೇಜು ಶುಲ್ಕ, ವಸತಿ ವೆಚ್ಚ ಹಾಗೂ ಇತರೆ ಖರ್ಚುಗಳ ಕಾರಣದಿಂದ ಕೆಲವರು ಓದನ್ನು ಮಧ್ಯದಲ್ಲೇ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಾರೆ.

ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ವಿದ್ಯಾಲಕ್ಷ್ಮಿ ಯೋಜನೆ’ (PM Vidyalaxmi Scheme) ಜಾರಿಗೆ ತಂದಿದೆ.

ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳು 16 ಲಕ್ಷವರೆಗೆ ಶಿಕ್ಷಣ ಸಾಲ ಪಡೆಯುವ ಅವಕಾಶ ಹೊಂದಿದ್ದಾರೆ. ಮುಖ್ಯವಾಗಿ ಉನ್ನತ ಶಿಕ್ಷಣಕ್ಕಾಗಿ ಈ ಸಾಲ ನೀಡಲಾಗುತ್ತದೆ. ಸರ್ಕಾರದಿಂದ ನೀಡುವ ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದ ಕಾರಣದಿಂದ ಇದು ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗಲಿದೆ.

2024ರಲ್ಲಿ ಯೋಜನೆಗೆ ಚಾಲನೆ

ಕೇಂದ್ರ ಸರ್ಕಾರವು 2024ರ ಕೇಂದ್ರ ಬಜೆಟ್‌ನಲ್ಲಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಘೋಷಿಸಿತು. ಬಳಿಕ 2024ರ ನವೆಂಬರ್ 6ರಂದು ಸಚಿವ ಸಂಪುಟದಿಂದ ಅನುಮೋದನೆ ದೊರೆತ ನಂತರ ಯೋಜನೆ ಜಾರಿಗೆ ಬಂದಿದೆ.

ಈ ಯೋಜನೆಯಡಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಲ ಪಡೆಯಬಹುದು. 10 ಲಕ್ಷದವರೆಗೆ ಸಾಲಕ್ಕೆ ಸುಮಾರು 3% ಬಡ್ಡಿದರ ಮಾತ್ರ ಇರಲಿದೆ. ಸಾಲವನ್ನು ಹಿಂತಿರುಗಿಸಲು ಸುಮಾರು 15 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಜೊತೆಗೆ ಕೋರ್ಸ್ ಮುಗಿದ ನಂತರ ಒಂದು ವರ್ಷದವರೆಗೆ ಬಡ್ಡಿದರದಲ್ಲಿ ವಿನಾಯಿತಿ ನೀಡುವ ವ್ಯವಸ್ಥೆಯೂ ಇದೆ.

ಯಾರು ಅರ್ಹರು?

ವಿದ್ಯಾಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯಲು ಕೆಲವು ಅರ್ಹತಾ ನಿಯಮಗಳನ್ನು ಪಾಲಿಸಬೇಕು.

  1. ಭಾರತದಲ್ಲಿನ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
  2. ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷದೊಳಗೆ ಇದ್ದರೆ ಬಡ್ಡಿ ಸಬ್ಸಿಡಿ ಸಿಗುತ್ತದೆ.
  3. ದೇಶದ ಟಾಪ್ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟ್ ಪಡೆದಿರಬೇಕು.
  4. ಡೊನೇಷನ್ ಮೂಲಕ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೇರ್ಪಡೆಗೊಂಡಿದ್ದರೆ ಸಾಲ ಸಿಗುವುದಿಲ್ಲ.
  5. ಇತರ ಸರ್ಕಾರಿ ಯೋಜನೆಗಳಿಂದ ಈಗಾಗಲೇ ಲಾಭ ಪಡೆದಿದ್ದರೆ ಅನರ್ಹರಾಗಬಹುದು.
  6. ಯುಜಿ, ಪಿಜಿ ಹಾಗೂ ಇಂಟಿಗ್ರೇಟೆಡ್ ಕೋರ್ಸ್‌ಗಳಿಗೆ ಮಾತ್ರ ಈ ಸಾಲ ಸೌಲಭ್ಯ ದೊರೆಯುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಸುಲಭವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

  1. ಅಧಿಕೃತ ವೆಬ್‌ಸೈಟ್ pmvidyalaxmi.co.in ತೆರೆಯಿರಿ.
  2. “Student Login” ಆಯ್ಕೆ ಮಾಡಿ Create New Account ಕ್ಲಿಕ್ ಮಾಡಿ.
  3. ಹೆಸರು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನಮೂದಿಸಿ.
  4. ಮೊಬೈಲ್‌ಗೆ ಬಂದ OTP ನಮೂದಿಸಿ ಖಾತೆ ಸಕ್ರಿಯಗೊಳಿಸಿ.
  5. ನಂತರ ಪಾಸ್‌ವರ್ಡ್ ಸೆಟ್ ಮಾಡಿ ಲಾಗಿನ್ ಆಗಿ.
  6. ಹೋಮ್ ಪೇಜ್‌ನಲ್ಲಿ ಕಾಣುವ Apply for Education Loan ಆಯ್ಕೆಯನ್ನು ಕ್ಲಿಕ್ ಮಾಡಿ.
  7. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹಾಗೂ ಯಾವ ಬ್ಯಾಂಕ್‌ನಿಂದ ಸಾಲ ಬೇಕೋ ಆಯ್ಕೆ ಮಾಡಿ.
  8. ಅರ್ಜಿ ಸಲ್ಲಿಸಿದ ನಂತರ Application Number ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು.

ಅಗತ್ಯ ದಾಖಲೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳು ಅಗತ್ಯವಾಗಬಹುದು.

  1. ಆಧಾರ್ ಕಾರ್ಡ್
  2. ಪಾನ್ ಕಾರ್ಡ್
  3. ನಿವಾಸ ಪ್ರಮಾಣಪತ್ರ
  4. ಕಾಲೇಜು ಪ್ರವೇಶ ಪತ್ರ
  5. ಶುಲ್ಕ ವಿವರಗಳು
  6. ಆದಾಯ ಪ್ರಮಾಣಪತ್ರ

ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಲಕ್ಷ್ಮಿ ಯೋಜನೆ ದೊಡ್ಡ ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Stories