ರೈಲಿನಲ್ಲಿ ಗರ್ಭಿಣಿ ಮೇಲೆ ಅತ್ಯಾಚಾರ ಯತ್ನ, ರೈಲಿನಿಂದ ಕೆಳ ತಳ್ಳಿದ ಕ್ರೂರಿ
ತಮಿಳುನಾಡಿನಲ್ಲಿ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಕಾಮುಕನ ದೌರ್ಜನ್ಯ. ವಿರೋಧಿಸಿದ್ದಕ್ಕೆ ನಿರ್ದಯವಾಗಿ ರೈಲಿನಿಂದ ತಳ್ಳಿದ ಘಟನೆ.

- ಗರ್ಭಿಣಿ ಮಹಿಳೆಗೆ ರೈಲಿನಲ್ಲಿ ಲೈಂಗಿಕ ದೌರ್ಜನ್ಯ ಯತ್ನ
- ಆತ್ಮರಕ್ಷಣೆಗಾಗಿ ಕೂಗಿದಾಗ ನಿರ್ದಯವಾಗಿ ರೈಲಿನಿಂದ ತಳ್ಳಿದ ಆರೋಪಿ
- ಸಂತ್ರಸ್ತೆಗೆ ಗಂಭೀರ ಗಾಯಗಳು, ಆರೋಪಿ ಬಂಧನ
ತಮಿಳುನಾಡು (Tamil Nadu) ರಾಜ್ಯದಲ್ಲಿ ಒಂದು ಕ್ರೂರ ಘಟನೆ ನಡೆದಿದೆ. ಕಾಮುಕ ವ್ಯಕ್ತಿಯೊಬ್ಬ ರೈಲಿನಲ್ಲಿ ಗರ್ಭಿಣಿ ಮಹಿಳೆಯ (Pregnant Woman) ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಮಹಿಳೆ ವಿರೋಧಿಸಿದಾಗ, ನಿರ್ದಯವಾಗಿ ಆಕೆಯನ್ನು ಚಲಿಸುವ ರೈಲಿನಿಂದ ಹೊರಗೆ (Pushed Out From Running Train) ತಳ್ಳಿದ್ದಾನೆ.
ಕೊಯಮತ್ತೂರಿನಿಂದ ತಿರುಪತಿಗೆ ಹೋಗುತ್ತಿದ್ದ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ವಿವರಗಳಿಗೆ ಹೋದರೆ, 36 ವರ್ಷದ ಮಹಿಳೆಯೊಬ್ಬರು ಕೊಯಮತ್ತೂರು-ತಿರುಪತಿ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ತಮಿಳುನಾಡಿನ ತಿರುಪ್ಪೂರಿನಿಂದ ಚಿತ್ತೂರಿಗೆ ಪ್ರಯಾಣಿಸುತ್ತಿದ್ದರು. ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬುದಾಗಿ ತಿಳಿದುಬಂದಿದೆ.
ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ, ಮಗು ಸೇರಿ ಐದು ಮಂದಿ ದುರ್ಮರಣ
ಆಕೆ ಬೆಳಿಗ್ಗೆ 6:40 ಕ್ಕೆ ರೈಲು ಹತ್ತಿ ಮಹಿಳೆಯರ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದಳು. ಆ ಸಮಯದಲ್ಲಿ ಇತರ ಏಳು ಮಹಿಳೆಯರು ಕೂಡ ಇದ್ದರು. ರೈಲು ಬೆಳಿಗ್ಗೆ 10:15 ಕ್ಕೆ ಜೋಲಾರ್ಪೇಟೆ ರೈಲು ನಿಲ್ದಾಣ ತಲುಪಿದ ತಕ್ಷಣ, ಮಹಿಳಾ ಕೋಚ್ನಲ್ಲಿದ್ದ ಇತರ ಎಲ್ಲಾ ಮಹಿಳೆಯರು ಅವರವರ ನಿಲ್ದಾಣದಲ್ಲಿ ಇಳಿದಿದ್ದಾರೆ.
ಜೋಲಾರ್ಪೇಟೆ ನಿಲ್ದಾಣದಲ್ಲಿ ರೈಲು ಚಲಿಸುತ್ತಿದ್ದಾಗ, ಹೇಮರಾಜ್ (27) ಎಂಬ ಯುವಕ ಮಹಿಳಾ ಕೋಚ್ ಹತ್ತಿದ್ದಾನೆ. ಅಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಆದರೆ, ಆಕೆ ವಿರೋಧಿಸಿದ್ದಾಳೆ, ಜೋರಾಗಿ ಕೂಗಿದ್ದಾಳೆ. ಇದರಿಂದ ಭಯಭೀತನಾದ ಹೇಮರಾಜ್, ಮಹಿಳೆಯನ್ನು ಚಲಿಸುವ ರೈಲಿನಿಂದ ಕೆಳ ತಳ್ಳಿದ್ದಾನೆ.
4ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಐವರು ಬಂಧನ
ಇದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ವೆಲ್ಲೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಕೆಯ ಕೈಗಳು, ಕಾಲುಗಳು ಮತ್ತು ತಲೆಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ, ಜೋಲಾರ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ. ಆತ ಈ ಹಿಂದೆಯೂ ಇದೇ ರೀತಿಯ ಅಪರಾಧಗಳನ್ನು ಮಾಡಿದ್ದಾನೆ ಎಂಬುವ ನಿಜಾಂಶ ಬಯಾಲಾಗಿದೆ.
Pregnant Woman Assaulted on Train, Pushed Out



