ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಭಾಷಣ
ಪ್ರಧಾನಮಂತ್ರಿ ನರೇಂದ್ರ ಮೋದಿ ನವರಾತ್ರಿ ಮೊದಲ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ, ನಾಳೆಯಿಂದ ಜಿಎಸ್ಟಿ ಹೊಸ ದರಗಳು ಜಾರಿಗೆ ಬರುತ್ತಿದ್ದು, ಸಾಮಾನ್ಯರಿಗೆ ದೊಡ್ಡ ಮಟ್ಟದ ಉಪಶಮನ ನೀಡಲಿದೆ ಎಂದರು.
GST new rates: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನವರಾತ್ರಿ ಆರಂಭಕ್ಕೂ ಮುನ್ನ ದಿನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಅವರು ನಾಳೆ, ಸೆಪ್ಟೆಂಬರ್ 22ರಿಂದ ಜಿಎಸ್ಟಿ ಹೊಸ ದರಗಳು ಜಾರಿಗೆ ಬರುತ್ತವೆ ಎಂದು ಘೋಷಿಸಿದರು. ಈ ನಿರ್ಧಾರದಿಂದ ಜನಸಾಮಾನ್ಯರಿಗೆ ನೇರವಾಗಿ ಲಾಭವಾಗಲಿದೆ ಎಂದು ತಿಳಿಸಿದರು.
ಮೋದಿ ಅವರು “ನಾಗರಿಕ್ ದೇವೋ ಭವ” ಎಂಬ ಮಂತ್ರವನ್ನು ಉಲ್ಲೇಖಿಸಿ, ಈ ಜಿಎಸ್ಟಿ ಸುಧಾರಣೆಗಳು ಜನಕೇಂದ್ರಿತವಾಗಿದ್ದು, ಪ್ರತಿಯೊಬ್ಬ ರಾಜ್ಯಕ್ಕೂ ಸಮಾನ ಅವಕಾಶ ನೀಡುತ್ತವೆ ಎಂದು ಹೇಳಿದರು. ಹೊಸ ದರಗಳಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗಲಿದ್ದು, ಇದರಿಂದ ಖರ್ಚು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 3ರಂದು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಅನ್ವಯ, ಈಗ ದೇಶದಾದ್ಯಂತ ದರ ಇಳಿಕೆ ಅನಿವಾರ್ಯವಾಗಿದೆ. ಜನಸಾಮಾನ್ಯರಿಗೆ ಇದು ದೊಡ್ಡ ಮಟ್ಟದ ಆರ್ಥಿಕ ನೆರವು ನೀಡುವಂತಾಗಿದೆ.
ಪ್ರಧಾನಮಂತ್ರಿಗಳು, ಈ ಸುಧಾರಣೆಗಳು ಮುಂದಿನ ಪೀಳಿಗೆ ಆರ್ಥಿಕ ವ್ಯವಸ್ಥೆಗೆ ಪೂರಕವಾಗಿದ್ದು, ಹೂಡಿಕೆಯನ್ನು ಆಕರ್ಷಿಸುವುದಲ್ಲದೆ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಎಂದರು. ನವರಾತ್ರಿ ಸಂದರ್ಭದಲ್ಲಿ ಘೋಷಿಸಿರುವ ಈ ದರ ಇಳಿಕೆ ಉತ್ಸವವನ್ನೇ ಸೃಷ್ಟಿಸಲಿದೆ ಎಂದು ಮೋದಿ ಹೇಳಿದರು.
Prime Minister Narendra Modi addressed the nation



