SSLC ಪಾಸ್ ಆಗಿದ್ರೆ ಸಾಕು ನಿಮಗೆ ಸಿಗುತ್ತೆ ಸೆಂಟ್ರಲ್ ಗವರ್ನಮೆಂಟ್ ಕೆಲಸ! ರೈಲ್ವೆ ಇಲಾಖೆ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ಸೆಂಟ್ರಲ್ ಗವರ್ನಮೆಂಟ್ ಕೆಲಸ (Central Government Job) ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಆದರೆ ಅವಕಾಶ ಸಿಕ್ಕಿರುವುದಿಲ್ಲ. ನಮ್ಮಲ್ಲಿ ಹಲವು ಜನರಿಗೆ ಉತ್ತಮವಾದ ಟ್ಯಾಲೆಂಟ್ ಇದ್ದರು ಸಹ ಅವರಿಗೆ ಒಳ್ಳೆಯ ಕೆಲಸ ಸಿಗದೆ ನಿರುದ್ಯೋಗಿಗಳಾಗಿದ್ದರು. ಇನ್ನು ಕೆಲವರಿಗೆ ವಿದ್ಯಾರ್ಹತೆ ಇದ್ದರು ಸಹ, ಅದಕ್ಕೆ ತಕ್ಕಂತೆ ಕೆಲಸ ಸಿಗದೆ ಸಿಕ್ಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿರುತ್ತಾರೆ.
ಮತ್ತು ಕೆಲವರಿಗೆ ಹೆಚ್ಚು ಓದಲು ಅನುಕೂಲ ಇಲ್ಲದೆ, ಒಳ್ಳೆಯ ಕೆಲಸ ಸಿಕ್ಕಿರುವುದಿಲ್ಲ. ಈ ರೀತಿ ಒಂದಲ್ಲಾ ಒಂದು ಕಾರಣದಿಂದ ಹೊಸ ಕೆಲಸ ಬೇಕು ಎಂದುಕೊಂಡಿರುವವರಿಗೆ ರೈಲ್ವೆ ಇಲಾಖೆಯಿಂದ ಒಂದು ಸೂಪರ್ ಸುದ್ದಿ ಸಿಕ್ಕಿದೆ. SSLC ಓದಿದ್ದರೆ ಸಾಕು ರೈಲ್ವೆ ಇಲಾಖೆಯಲ್ಲಿ ಹುದ್ದೆ (Railway Recruitment) ಪಡೆಯಬಹುದು.. SSLC ಪಾಸ್ ಆಗಿ ಒಳ್ಳೆಯ ಕೆಲಸ ಬೇಕು ಎಂದುಕೊಂಡಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ.
ಆಗ್ನೇಯ ಮದ್ಯ ರೈಲ್ವೆಯಲ್ಲಿ 1000ಕ್ಕಿಂತ ಹೆಚ್ಚು ಪೋಸ್ಟಿಂಗ್ ಗಳು ಖಾಲಿ ಇದೆ, ಆಸಕ್ತಿ ಇರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಕೆಲಸಗಳ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ತಪ್ಪದೆ ಓದಿ. ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ನೀಡುವುದಾದರೆ, 820 ಅಸಿಸ್ಟಂಟ್ ಲೋಕೋ ಪೈಲೆಟ್, 132 ಟೆಕ್ನಿಷಿಯನ್, 64 ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳು ಈಗ ಖಾಲಿ ಇದೆ..
ಈ ಕೆಲಸಕ್ಕೆ ಅರ್ಜಿ ಹಾಕುವವರು 10ನೇ ತರಗತಿ ಮುಗಿಸಿರಬೇಕು. ಸ್ಪರ್ಧಾತ್ಮಕ ಪರೀಕ್ಷೆ (Competitive Exam) ನಡೆಸಿ ಈ ಹುದ್ದೆಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ಇಡಲಾಗಿದ್ದು, ಕೆಲಸಕ್ಕೆ ಅಪ್ಲೈ ಮಾಡುವವರ ವಯಸ್ಸು 18 ವರ್ಷ ದಾಟಿರಬೇಕು. ಈ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
ಅದರಲ್ಲಿ ಪಾಸ್ ಆದವರಿಗೆ ಕೊನೆಯದಾಗಿ ಆಯ್ಕೆ, ದಾಖಲಾತಿ ಪರಿಶೀಲನೆ ಇದೆಲ್ಲವನ್ನು ಕೂಡ ನಡೆಸಲಾಗುತ್ತದೆ. ಈ ಕೆಲಸಕ್ಕೆ ಕೆಲವು ದಾಖಲೆಗಳು ಅಗತ್ಯವಿದ್ದು, ಬೇಕಿರುವ ದಾಖಲೆಗಳು ಈ ರೀತಿ ಇದೆ.. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕ್ಯಾಸ್ಟ್ ಸರ್ಟಿಫಿಕೇಟ್, ಪಾಸ್ ಪೋರ್ಟ್ ಸೈಜ್ ಫೋಟೋ, ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ. ಈ ದಾಖಲೆಗಳನ್ನು ಮರೆಯಬೇಡಿ.
ರೈಲ್ವೆ ಇಲಾಖೆಯಲ್ಲಿ(Railway Jobs) ಕೆಲಸ ಪಡೆಯುವುದು ಎಂದರೆ ಜೀವನವೇ ಸೆಟ್ಲ್ ಆದ ಹಾಗೆ, ಸಾಕಷ್ಟು ಜನರು ಇಲ್ಲಿ ಕೆಲಸ ಪಡೆಯಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಹಲವು ಕಾರಣಗಳಿಗೆ ಕೆಲಸ ಸಿಕ್ಕಿರುವುದಿಲ್ಲ. ಹಾಗಾಗಿ ಸಿಕ್ಕಿರುವ ಈ ಅವಕಾಶವನ್ನು ಪೂರ್ತಿಯಾಗಿ ಬಳಸಿಕೊಂಡು, ಲಿಖಿತ ಪರೀಕ್ಷೆಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡು, ಉತ್ತಮ ವೇತನ ಕೊಡುವ ಈ ಕೆಲಸವನ್ನು ನಿಮ್ಮದಾಗಿಸುಕೊಳ್ಳಿ.
ಈ ಕೆಲಸ ಪಡೆದರೆ ನಿಮ್ಮ ಆರ್ಥಿಕ ಸುಧಾರಿಸುತ್ತದೆ, ಹಾಗೆಯೇ ಇಡೀ ಜೀವನ ಯಾರದ್ದೇ ಸಹಾಯ ಇಲ್ಲದೆ ನಿಮ್ಮ ಬದುಕನ್ನು ನಡೆಸಿಕೊಂಡು ಹೋಗಬಹುದು. ಹಾಗಾಗಿ ಈ ಕೆಲಸಕ್ಕೆ ಅಪ್ಲೈ ಮಾಡಿ, ಕೆಲಸ ಪಡೆದುಕೊಳ್ಳಿ.
Railway job vacancy for 10th pass people








