ನಮ್ಮ ದೇಶದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳನ್ನು ವಿಶೇಷವಾಗಿ ತರುತ್ತಿರುವುದು ಆರ್ಥಿಕವಾಗಿ ಕಷ್ಟದಲ್ಲಿರುವ ಜನರಿಗಾಗಿ.
ಬಡವರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಸಲುವಾಗಿ ಇಂಥ ಯೋಜನೆಗಳನ್ನು ತರಲಾಗುತ್ತಿದೆ. ಕೇಂದ್ರ ಸರ್ಕಾರ ಮಾತ್ರವಲ್ಲ ರಾಜ್ಯ ಸರ್ಕಾರ ಸಹ ಯೋಜನೆಗಳನ್ನು ತರುತ್ತಿದೆ..
ವಿಶೇಷವಾಗಿ ಮಹಿಳೆಯರಿಗೆ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಆಗಬಾರದೆಂಬುದು ಉದ್ದೇಶ, ಹಾಗೆಯೇ ಮಹಿಳೆಯರು ಯಾರದ್ದೇ ಸಹಾಯ ಇಲ್ಲದೆ ಬದುಕು ನಡೆಸಬೇಕು ಎಂದು ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳಿಂದ ಬಹಳಷ್ಟು ಮಹಿಳೆಯರಿಗೆ ಅನುಕೂಲ ಮತ್ತು ಉಪಯೋಗ ಆಗುತ್ತಿದೆ.
ಇದೇ ರೀತಿ ಮತ್ತೊಂದು ಹೊಸ ಯೋಜನೆಯನ್ನು (New Scheme) ರಾಜ್ಯ ಸರ್ಕಾರವು ಎಲ್ಲಾ ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಇದು ಕೂಡ ಮಹಿಳೆಯರಿಗೆ ಅನುಕೂಲ ತರುವ ಯೋಜನೆ ಆಗಿದ್ದು, ಈ ಯೋಜನೆಯ ಫಲ ಪಡೆಯಲು ನೀವು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅದೆಲ್ಲವನ್ನು ಸರಿಯಾಗಿ ಪಾಲಿಸಿದರೆ ಮಾತ್ರ ನಿಮಗೆ ಈ ಯೋಜನೆಯ ಸೌಲಭ್ಯ ಸಿಗುತ್ತದೆ..
ಇದು ರಾಜ್ಯದ ಮಹಿಳೆಯರಿಗೆ ಉಚಿತವಾಗಿ ಮೊಬೈಲ್ (Free Mobile Phone) ನೀಡುವ ಯೋಜನೆ ಆಗಿದೆ, ಈ ಯೋಜನೆಯಲ್ಲಿ ಉಚಿತ ಸ್ಮಾರ್ಟ್ ಫೋನ್ (Smartphone) ಜೊತೆಗೆ 3 ವರ್ಷಗಳ ಕಾಲ ಉಚಿತ ಇಂಟರ್ನೆಟ್ ಸೇವೆಯನ್ನು ಕೂಡ ನೀಡಲಾಗುತ್ತದೆ.
ರಾಜ್ಯದ 40 ಲಕ್ಷ ಮಹಿಳೆಯರು ಈ ಸೌಲಭ್ಯ ಪಡೆಯಬಹುದು. ಈ ಯೋಜನೆಯನ್ನು ಮಹಿಳೆಯರಿಗೆ ತಲುಪಿಸಲು ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳು ಶಿಬಿರಗಳನ್ನು ಆಯೋಜಿಸಲಿದ್ದು ಈ ಪ್ರಕ್ರಿಯೆ 2023ರ ಆಗಸ್ಟ್ 10ರಿಂದ ಶುರುವಾಗಲಿದೆ.
ಇನ್ನು ಈ ಯೋಜನೆಯನ್ನು ಜಾರಿಗೆ ತಂದಿರುವುದು ರಾಜಸ್ಥಾನದ ರಾಜ್ಯ ಸರ್ಕಾರ (Rajasthan Govt) ಆಗಿದೆ. ಈ ಯೋಜನೆಯಲ್ಲಿ ಮನೆಯ ಮಹಿಳಾ ಮುಖ್ಯಸ್ಥರಿಗೆ ಸುಮಾರು 1.35ಕೋಟಿ ಮಹಿಳೆಯರಿಗೆ ಈ ಯೋಜನೆಯಿಂದ ಉಚಿತವಾಗಿ ಸ್ಮಾರ್ಟ್ ಫೋನ್ ಸಿಗುತ್ತದೆ.
ಇದು ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ (Digital Seva Scheme) ಆಗಿದೆ.. ರಾಜಸ್ತಾನದ ಮುಖ್ಯಮಂತ್ರಿಗಳು 2022ರ ಬಜೆಟ್ ನಲ್ಲಿ ಈ ಯೋಜನೆಯ ಬಗ್ಗೆ ಮಂಡಿಸಿದ್ದರು. ಶೀಘ್ರದಲ್ಲೇ ಶುರು ಮಾಡುವ ಮಾಹಿತಿ ನೀಡಿದ್ದರು.
ಇದೀಗ ಈ ಯೋಜನೆಯ ಅಡಿಯಲ್ಲಿ 1.35ಕೋಟಿ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಅದರ ಜೊತೆಗೆ 3 ವರ್ಷಗಳವರೆಗು ಫ್ರೀ ಇಂಟರ್ನೆಟ್ (Free Internet Data) ಸೌಲಭ್ಯ ಒದಗಿಸಿ ಕೊಡಲಾಗುತ್ತದೆ.
2022ರಲ್ಲೇ ಮಹಿಳೆಯರಿಗೆ ಈ ಸ್ಮಾರ್ಟ್ ಫೋನ್ ಗಳು ಸಿಗಬೇಕಿತ್ತು. ಆದರೆ ಆ ಸಮಯದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಲು ಸರ್ಕಾರಕ್ಕೆ ಸಾಧ್ಯ ಆಗಿರದ ಕಾರಣ ಈ ಯೋಜನೆ ಇಷ್ಟು ದಿನಗಳ ಕಾಲ ಜಾರಿಗೆ ಬಂದಿರಲಿಲ್ಲ.. ಆದರೆ ಬಹಳ ಬೇಗ ಈ ಯೋಜನೆಯನ್ನು ಜಾರಿಗೆ ತರಲಿದ್ದು, ಮೊದಲಿಗೆ 40 ಲಕ್ಷ ಸ್ಮಾರ್ಟ್ ಫೋನ್ ಗಳನ್ನು ವಿತರಿಸಲಿದ್ದಾರೆ. ರಾಜಸ್ಥಾನದ ಮಹಿಳೆಯರಿಗೆ ಈ ಸೌಲಭ್ಯ ಸಿಗಲಿದೆ.
Rajasthan Govt Digital Seva Scheme Free Smartphone Distribution
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.