ಸಿಹಿ ಸುದ್ದಿ! ಮಳೆಯಿಂದ ಬೆಳೆ ನಾಶ ಆಗಿರುವ ರೈತರಿಗೆ ಸರ್ಕಾರದಿಂದ ₹15,000 ಪರಿಹಾರ, ಇಂದೇ ಅರ್ಜಿ ಸಲ್ಲಿಸಿ

ಮಳೆಗಾಲದಲ್ಲಿ (Rainy Days) ಕೆಲವೊಮ್ಮೆ ರೈತರು (Farmers) ಕಷ್ಟಪಟ್ಟು ಬೆಳೆಯುವ ಬೆಳೆಗಳು ಮಳೆಯಿಂದಾಗಿ ಸಂಪೂರ್ಣ ಹಾನಿಗೆ ಒಳಗಾಗುತ್ತದೆ. ಇದರಿಂದ ರೈತರಿಗೆ ನಷ್ಟವಾಗುತ್ತದೆ. ಆದರೆ ಈಗ ಮಳೆಯಿಂದ ನಷ್ಟ ಆಗಿರುವ ಬೆಳೆಗಳಿಗೆ ಸರ್ಕಾರ ₹15,000 ಸಹಾಯಧನ (Compensation) ಕೊಡುತ್ತಿದೆ. ಬೆಳೆ ನಷ್ಟ ಆಗಿರುವವರು ಇಂದೇ ಅರ್ಜಿ ಸಲ್ಲಿಸಬಹುದು.

ಈ ಯೋಜನೆ ಈಗ ಹರಿಯಾಣದಲ್ಲಿ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲೂ ವಿಸ್ತರಿಸುವ ನಿರೀಕ್ಷೆ ಇದೆ. ಆದ್ದರಿಂದ ಬೇರೆ ರಾಜ್ಯದವರು ಈ ಲೇಖನ ಓದುತ್ತಿದ್ದರೆ ಗೊಂದಲಗೊಳ್ಳಬೇಡಿ.

ಈ ಬಾರಿ ಮುಂಗಾರು ಉತ್ತಮವಾಗಿಲ್ಲ, ಹಲವು ಸರಿಯಾದ ಮಳೆ ಇಲ್ಲದೆ ಅನಾವೃಷ್ಟಿ ಆಗಿದೆ. ಇನ್ನಷ್ಟು ಕಡೆ ಮಳೆ ಇಂದ ಅತಿವೃಷ್ಟಿ ಆಗಿದೆ. ಕೆಲವು ಕಡೆ ಪ್ರವಾಹ ಕೂಡ ಆಗಿದೆ. ಹೀಗೆ ಮಳೆ ಕಾರಣಕ್ಕೆ ಬೆಳೆ (Crops) ನಾಶ ಆಗಿರುವವರಿಗೆ ಸರ್ಕಾರದಿಂದ ಪರಿಹಾರ ಸಿಗಲಿದೆ, ಒಂದು ಎಕರೆಗೆ ₹15,000 ರೂಪಾಯಿಯ ಹಾಗೆ ಸರ್ಕಾರ ಪರಿಹಾರ ನೀಡುತ್ತದೆ..

ಹಾಗೆಯೇ ನಷ್ಟದಲ್ಲಿರುವ ರೈತರಿಗೆ ಕೃಷಿಗೆ ಸಹಾಯ ಆಗಲಿ ಎಂದು ಭತ್ತದ ಸಸಿಗಳನ್ನು ರೈತರಿಗೆ ಕೊಡಲಾಗುತ್ತದೆ. ಹಲವು ಕಡೆ ಅತಿಯಾದ ಮಳೆಯ ಕಾರಣ ಕೃಷಿ ಭೂಮಿಗೆ ಅತಿಯಾದ ಮಳೆನೀರು ನುಗ್ಗಿ ಬೆಳೆ ನಾಶ ಉಂಟಾಗಿದೆ.

ರೈತರು ಕೃಷಿ ಮಾಡಿದ ಭೂಮಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸಧ್ಯಕ್ಕೆ ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 18,000 ಎಕರೆ ಭೂಮಿಯಷ್ಟು ಜಾಗಕ್ಕೆ ನಷ್ಟವಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಇದರಿಂದ ರೈತರಿಗೆ ನಷ್ಟವಾಗಿದ್ದು, ಅವರಿಗೆ ಬೆಳೆಯ ಪರಿಹಾರ ಸಿಗಲಿದೆ. 100% ಬೆಳೆ ನಾಶ ಆಗಿರುವ ರೈತರ ಭೂಮಿಗೆ 1 ಎಕರೆಗೆ ₹15,000 ಪರಿಹಾರ ಧನ ಸಿಗಲಿದೆ. ಈ ತಿಂಗಳ ಕೊನೆಯ ನಂತರ ಅಂದರೆ ಜುಲೈ 31ರ ಬಳಿಕ ಪರಿಹಾರ ಧನದ ಬಗ್ಗೆ ಪೂರ್ತಿಯಾಗಿ ಸ್ಪಷ್ಟ ಮಾಹಿತಿ ಸಿಗುತ್ತದೆ.

compensation from the government to farmersನಷ್ಟ ಅನುಭವಿಸುತ್ತಿರುವ ರೈತರ ಭೂಮಿಯಲ್ಲಿ ಮತ್ತೆ ನಾಟಿ ಅಥವಾ ಬಿತ್ತನೆ ಮಾಡಬಹುದು ಎನ್ನುವ ಹಾಗಿದ್ದರೆ, ಅದಕ್ಕೆ ಪ್ರತ್ಯೇಕವಾದ ಹಣಸಹಾಯ ಪರಿಹಾರ ಸಿಗುತ್ತದೆ. ಮತ್ತೆ ನಾಟಿ ಬಿತ್ತನೆ ಮಾಡಲು ಸಾಧ್ಯವಿಲ್ಲ ಎನ್ನುವಂಥ ರೈತರ ಭೂಮಿಗೆ ಬೇರೆಯ ಪರಿಹಾರ ಕೊಡಲಾಗುತ್ತದೆ.

ಈ ಪರಿಹಾರಗಳು ಮಾತ್ರವಲ್ಲ, ಪ್ರವಾಹದಿಂದ ಪ್ರಾಣ ಕಳೆದುಕೊಂಡ ರೈತರ ಕುಟುಂಬಕ್ಕೆ ₹4 ಲಕ್ಷ ರೂಪಾಯಿಯ ಪರಿಹಾರ ಸರ್ಕಾರದಿಂದ ರೈತರ ಕುಟುಂಬಕ್ಕೆ ಸಿಗುತ್ತದೆ.

ಈ ಪರಿಹಾರವನ್ನು ರೈತರು ಪಡೆಯಬೇಕು ಎಂದರೆ, ಜುಲೈ 31ರ ಒಳಗೆ ತಮ್ಮ ಭೂಮಿ ಬಗ್ಗೆ ಎಲ್ಲಾ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕಿದ ನಂತರ ಆಗಸ್ಟ್ 15ರವರೆಗು ರೈತರ ಅರ್ಜಿಯ ಸರ್ವೇ ಮತ್ತು ಮೇಲ್ವಿಚಾರಣೆ ಕಾರ್ಯಗಳು ನಡೆಯಲಿದೆ.

ಒಂದು ವೇಳೆ ದಿನಾಂಕ ಮೀರಿದರೆ, ನೀವು ಈ ಯೋಜನೆಯ ಲಾಭ ಪಡೆಯಲು ಆಗುವುದಿಲ್ಲ. ಪ್ರವಾಹ ಆಗಿ, ನಷ್ಟ ಅನುಭವಿಸುತ್ತಿರುವ ರೈತರು ತಮಗೆ ಹಾನಿ ಆಗಿರುವ ಬೆಳೆಗೆ ಪರಿಹಾರ ಪಡೆಯಲು ಇ ಪರಿಹಾರ ಪೋರ್ಟಲ್ ಇಂದ ಅರ್ಜಿ ಹಾಕಿ, ಪರಿಹಾರ ಕ್ಲೇಮ್ ಮಾಡಬಹುದು.

ರಾಜ್ಯದಲ್ಲಿ ಈಗ ಮೇವುಗಳ ಬೆಳೆಗಳಿಗೆ ಕೂಡ ಹಾನಿ ಉಂಟಾಗಿದೆ. ಹಾಗಾಗಿ ಜಾನುವಾರುಗಳ ಮೇವು ಹಾನಿಗೂ ಸರ್ಕಾರ ಪರಿಹಾರ ನೀಡುವ ಯೋಚನೆ ಮಾಡಿದೆ. ಇದಕ್ಕಾಗಿ ರಾಜ್ಯ ಸರ್ಕಾರ ವಿಪತ್ತು ನಿರ್ವಹಣಾ ನಿಧಿಕಡೆಯಿಂದ ಹಾನಿ ಉಂಟಾಗಿರುವ ಒಂದು ದೊಡ್ಡ ಪ್ರಾಣಿಗೆ ದಿನಕ್ಕೆ 80 ರೂಪಾಯಿ, ಸಣ್ಣ ಪ್ರಾಣಿಗೆ ಒಂದು ದಿನಕ್ಕೆ 45 ರೂಪಾಯಿ ಸಹಾಯ ನೀಡಲಾಗುತ್ತಿದೆ. ಈ ಹಣವನ್ನು ಜಾನುವಾರುಗಳ ಮಾಲೀಕ ಅಂದರೆ ಆ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ..

ಇದಕ್ಕಾಗಿ ನೋಂದಣಿ ಮಾಡಿಕೊಳ್ಳಲು ಬೇಕಿರುವ ದಾಖಲೆಗಳು ಹೀಗಿವೆ..

*ರೈತರ ಕ್ಷೇತ್ರ ಪತ್ರಿಕೆ
*ರೈತರ ಐಡೆಂಟಿಟಿ ಪ್ರೂಫ್
*ರೈತರ ವಾಸ ಪ್ರಮಾಣ ಪತ್ರ
*ರೈತರ ಆಧಾರ್ ಕಾರ್ಡ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
*ಇನ್ನಿತರ ದಾಖಲೆಗಳು.

ಈ ಯೋಜನೆ ಈಗ ಹರಿಯಾಣದಲ್ಲಿ ಜಾರಿಯಾಗಿದೆ. ಇದೇ ಯೋಜನೆ ದೇಶದ ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದರೆ, ಜನರಿಗೆ ಹೆಚ್ಚು ಅನುಕೂಲವಾಗಲಿದೆ.

Rs 15,000 compensation from the government to farmers whose crops have been destroyed by rain

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories