ಶಾಲೆಯ ಗೇಟಿನಲ್ಲೇ ಶಾಲಾ ಬಾಲಕಿಯ ಅಪಹರಣ! ಮುಂದೇನಾಯ್ತು ಗೊತ್ತಾ?
ನೋಯ್ಡಾದಲ್ಲಿ ಶಾಲಾ ಬಾಲಕಿಯನ್ನು ಬಲವಂತವಾಗಿ ಅಪಹರಿಸಿದ ವ್ಯಕ್ತಿ, ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಲಕ್ನೋ: ಶಾಲೆಯ ಗೇಟ್ ಬಳಿ ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ತಡೆದು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದಾನೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ದೆಹಲಿಯ ಉಪನಗರವಾದ ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ 6.45 ಕ್ಕೆ ಕೆಲವು ಬಾಲಕಿಯರು ಸೆಕ್ಟರ್ 53 ರ ಗಿಜೋಡ್ ಪ್ರದೇಶದಲ್ಲಿರುವ ಮದರ್ ತೆರೇಸಾ ಶಾಲೆಗೆ ಹೋಗುತ್ತಿದ್ದರು.
ಅಷ್ಟರಲ್ಲಿ, ಶಾಲೆಯ ಗೇಟ್ ಹೊರಗೆ ಒಬ್ಬ ವ್ಯಕ್ತಿ ಕಾರಿನೊಂದಿಗೆ (Car) ಇದ್ದ. ಅಲ್ಲಿಗೆ ಬಂದ ಒಬ್ಬ ಬಾಲಕಿಯನ್ನು ಆತ ತಡೆದು ಆ ವ್ಯಆಕೆಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ತಕ್ಷಣ ಕಾರಿನಲ್ಲಿ ಅಪಹರಿಸಿದ್ದಾನೆ.
ಇದನ್ನೂ ಓದಿ: ಅತ್ತೆ ಮತ್ತು ಹೆಂಡತಿಯನ್ನು ಕೊಂದು ಬಾಳೆ ಗಿಡ ನೆಟ್ಟಿದ್ದ ಅಳಿಯ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ
ಮತ್ತೊಂದೆಡೆ, ಈ ವಿಷಯ ತಿಳಿದ ತಕ್ಷಣ ಪೊಲೀಸರು ಪ್ರತಿಕ್ರಿಯಿಸಿದರು. ಅವರು ಶಾಲೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಕಾರಿನ ಸಂಖ್ಯೆಯನ್ನು ಆಧರಿಸಿ, ಬಾಲಕಿಯನ್ನು ಅಪಹರಿಸಿದ ವ್ಯಕ್ತಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಯಿತು.
ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆ ವ್ಯಕ್ತಿ ಶಾಲಾ ಬಾಲಕಿಯನ್ನು (School Girl) ಏಕೆ ಅಪಹರಿಸಿದ್ದಾನೆ ಎಂಬುದರ ಕುರಿತು ಅವರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಈ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
सेक्टर 53 स्थित गिझोड गांव के मदर टेरेसा स्कूल के गेट के पास से कार सवार बदमाश 15 वर्षीय बच्ची का अपहरण करके ले गए, घटना सीसीटीवी में हुई कैद, #noidakhabar @noidapolice @vinodsharmanbt pic.twitter.com/rL0NW4TM1s
— NoidaKhabar.com (@noidakhabar) July 30, 2025







