ಆಸ್ತಿಗಾಗಿ ತಾಯಿಯನ್ನೇ 15 ಬಾರಿ ಚಾಕುವಿನಿಂದ ಇರಿದು ಕೊಂದ ಕಿರಾತಕ ಮಗ
ಹೈದರಾಬಾದ್ ನಲ್ಲಿ ಆಸ್ತಿ ವಿಷಯದಲ್ಲಿ ಮಗ-ತಾಯಿ ನಡುವಿನ ಗಲಾಟೆ ಹತ್ಯೆಯಲ್ಲಿ ಕೊನೆಯಾಗಿದೆ. ಆಸ್ತಿ ವಿಚಾರಕ್ಕೆ ಮಗ ತಾಯಿಗೆ 15 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ
- ಆಸ್ತಿ ವಿಚಾರದಲ್ಲಿ ತಾಯಿಯ ಹತ್ಯೆ ಮಾಡಿದ ಕಿರಾತಕ ಮಗ
- 15 ಬಾರಿ ಚಾಕುವಿನಿಂದ ಇರಿದು ಮಗನ ಪೈಶಾಚಿಕ ಕೃತ್ಯ
- ಹೈದರಾಬಾದ್ ತೆಳ್ಳಾಪುರದಲ್ಲಿ ನಡೆದ ಭೀಕರ ಘಟನೆ
ಆಸ್ತಿ (Property) ಹಂಚಿಕೆಗೆ ಸಂಬಂಧಿಸಿದಂತೆ, ಮಾದಕ ವಸ್ತುಗಳ (Drugs) ಚಟಕ್ಕೆ ಮರುಳಾಗಿದ್ದ ಮಗ ತನ್ನ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರ ಘಟನೆ ಹೈದರಾಬಾದ್‌ನ (Hyderabad) ತೆಳ್ಳಾಪುರದಲ್ಲಿ ನಡೆದಿದೆ. ಈ ಭೀಕರ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಪಾಪಿ ಮಗ ಕಾರ್ತಿಕ್ ರೆಡ್ಡಿ ದಿನನಿತ್ಯ ತನ್ನ ಚಟಕ್ಕಾಗಿ ಹಣ ಕೇಳುತ್ತಿದ್ದ. ತಾಯಿಯಾದ ರಾಧಿಕಾ ಅವರು ಪುತ್ರನಿಗೆ ಹಣ ನೀಡದೆ ದುಶ್ಚಟಗಳಿಂದ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಆದರೆ ಆಸ್ತಿ ಬೇಡಿಕೆ ಇಟ್ಟಿದ್ದ ಮಗನ ಆಕ್ರೋಶವೇ ಕೊನೆಗೆ ತಾಯಿಯ ಸಾವಿಗೆ ಕಾರಣವಾಯಿತು.
15 ಬಾರಿ ಇರಿದು ಕ್ರೂರ ಹತ್ಯೆ
ಆಸ್ತಿ ಸಂಪೂರ್ಣವಾಗಿ ತನ್ನ ಹೆಸರಿಗೆ ಬರೆದು ಕೊಡುವಂತೆ ನಿರಂತರ ಒತ್ತಡ ಹೇರುತ್ತಿದ್ದ ಕಾರ್ತಿಕ್, ನಿರಾಕರಿಸಿದ ತಾಯಿ ಮುಂದೆ ತೀವ್ರ ವಾಗ್ವಾದ ನಡೆಸಿದ. ತೀವ್ರ ಆಕ್ರೋಶಕ್ಕೆ ಒಳಗಾದ ಆತ ತಾಯಿಯನ್ನು ಮನೆಯಲ್ಲಿ 15 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ. ತಕ್ಷಣವೇ ರಾಧಿಕಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆಯ ಪ್ರಾಣ ಉಳಿಯಲಿಲ್ಲ.
ಜಮೀನು, ಆಸ್ತಿ ಆಸೆ, ಮದ್ಯ (Alcohol) ಕುಡಿಯುವ ಮತ್ತು ಮಾದಕ ವಸ್ತುಗಳ ಬಳಕೆ, ಅಪರಾಧಿ ಮನೋಭಾವಕ್ಕೆ ಕಾರಣವಾಯಿತು. ನಿರುದ್ಯೋಗಿಯಾಗಿದ್ದ ಕಾರ್ತಿಕ್ ಮನೆಗೆ ಒಳ್ಳೆಯ ಮಗನಾಗಲಿಲ್ಲ. ಕೊನೆಗೆ ಹೆತ್ತ ತಾಯಿಯನ್ನೇ ಕೊಲ್ಲುವ ಹಂತಕ್ಕೆ ತಂದು ನಿಲ್ಲಿಸಿತು.
Son Kills Mother for Property in Hyderabad
Our Whatsapp Channel is Live Now 👇