ಸುಪ್ರೀಂ ಕೋರ್ಟ್‌ನಲ್ಲಿ 241 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ! ಅರ್ಜಿ ಸಲ್ಲಿಸಿ

ಸುಪ್ರೀಂ ಕೋರ್ಟ್ 241 ಕಿರಿಯ ನ್ಯಾಯಾಲಯ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಮತ್ತಷ್ಟು ವಿವರಗಳಿಗಾಗಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

  • ಸುಪ್ರೀಂ ಕೋರ್ಟ್ 241 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ.
  • ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ಟೈಪಿಂಗ್ ಹಾಗೂ ಡಿಸ್ಕ್ರಿಪ್ಟಿವ್ ಪರೀಕ್ಷೆ.
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮಾರ್ಚ್ 03, 2025.

ಭಾರತೀಯ ಸುಪ್ರೀಂ ಕೋರ್ಟ್ 241 ಕಿರಿಯ ನ್ಯಾಯಾಲಯ ಸಹಾಯಕ ಹುದ್ದೆಗಳ ನೇಮಕಾತಿ (Supreme Court recruitment) ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಫೆಬ್ರವರಿ 05, 2025ರಿಂದ ಮಾರ್ಚ್ 03, 2025ರವರೆಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಪದವಿಯ ವಿದ್ಯಾರ್ಹತೆ ಅಗತ್ಯವಿದೆ. ಜೊತೆಗೆ, 35 WPM ಇಂಗ್ಲಿಷ್ ಟೈಪಿಂಗ್ ವೇಗ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ 18ರಿಂದ 30 ವರ್ಷಗಳೊಳಗಿನವರಾಗಿರಬೇಕು.

ಅರ್ಜಿ ಶುಲ್ಕವನ್ನು ಜನರಲ್, ಒಬಿಸಿ, ಇಡಬ್ಲ್ಯೂಎಸ್ ಅಭ್ಯರ್ಥಿಗಳು ₹1,000 ಮತ್ತು ಎಸ್ಸಿ, ಎಸ್ಟಿ, ಮಾಜಿ ಸೈನಿಕ ಅಭ್ಯರ್ಥಿಗಳು ₹250 ಪಾವತಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ (100 ಪ್ರಶ್ನೆಗಳು), ಕಂಪ್ಯೂಟರ್ ಟೆಸ್ಟ್ (25 ಪ್ರಶ್ನೆಗಳು), ಟೈಪಿಂಗ್ ಟೆಸ್ಟ್ (35 WPM) ಮತ್ತು ಡಿಸ್ಕ್ರಿಪ್ಟಿವ್ ಪರೀಕ್ಷೆ ಇರುವುದರಿಂದ ಅಭ್ಯರ್ಥಿಗಳು ಸಿದ್ಧರಾಗಬೇಕು.

ಅರ್ಜಿ ಸಲ್ಲಿಕೆಗೆ https://cdn3.digialm.com/EForms/configuredHtml/32912/92214/Registration.html ವೆಬ್‌ಸೈಟ್‌ಗೆ ಭೇಟಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಯನ್ನು https://cdnbbsr.s3waas.gov.in/s3ec0490f1f4972d133619a60c30f3559e/uploads/2025/02/2025020434.pdf ಲಿಂಕ್ ಮೂಲಕ ಪಡೆಯಬಹುದಾಗಿದೆ.

ಕೆಪಿಟಿಸಿಲ್‌ನಲ್ಲಿ 2,975 ಹುದ್ದೆಗಳ ನೇಮಕಾತಿ:

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್) 2,975 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಏಪ್ರಿಲ್ 2025ರೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಪ್ರಕಾರ, ಆಯಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ವೇಗಗೊಳ್ಳಲಿದ್ದು, ಭೌತಿಕ ಪರೀಕ್ಷೆಗಳ ನಿರ್ವಹಣೆ ಕೂಡ ನಡೆಯಲಿದೆ.

ಈ ಹುದ್ದೆಗಳ ನೇಮಕಾತಿ ಪೂರ್ಣಗೊಂಡ ಬಳಿಕ ಎಇಇ, ಜೆಇ ಸೇರಿದಂತೆ ಇತರ ಹುದ್ದೆಗಳಿಗೂ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯತೆಗಳಿವೆ.

Supreme Court Invites Applications for 241 Vacancies

Related Stories