ಮದುವೆ ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದ ಸರ್ಕಾರ, ರೂಲ್ಸ್ ಪಾಲಿಸದೆ ಹೋದರೆ 10 ವರ್ಷ ಜೈಲು ಶಿಕ್ಷೆ

Story Highlights

ತಮ್ಮ ಅಸಲಿ ಗುರುತನ್ನು ಹೇಳದೆ, ತಮ್ಮ ಹೆಸರು, ತಮ್ಮ ಕೆಲಸ ಅಥವಾ ತಮ್ಮ ಕುಟುಂಬಸ್ಥರ ಕುರಿತು ಸುಳ್ಳು ಮಾಹಿತಿ ನೀಡಿ ಹುಡುಗಿಯನ್ನು ವಂಚಿಸಿ ಮದುವೆಯಾದರೆ ಅಂತವರಿಗೆ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ

ಮದುವೆ ಎನ್ನುವುದು ಪವಿತ್ರವಾದ ಬಂದ, ಮದುವೆ (Marriage) ಕೇವಲ ಎರಡು ಮನುಸ್ಸುಗಳ ಮಿಲನ ಮಾತ್ರವಲ್ಲ ಎರಡು ಕುಟುಂಬಗಳ ಮಿಲನ ಕೂಡ ಹೌದು. ಮೊದಲೆಲ್ಲಾ ಮಕ್ಕಳು ತಮ್ಮ ತಂದೆ ತಾಯಿ ತೋರಿಸಿದವರನ್ನು ಮದುವೆಯಾಗುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ, ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಅನೇಕ ಮದುವೆಗಳು ಇಬ್ಬರ ನಡುವೆ ಸಂಬಂಧಗಳು ಸರಿ ಇಲ್ಲದ ಕಾರಣ ಮುರಿದು ಬಿದ್ದಿರುವುದನ್ನು ನೋಡಿದ್ದೇವೆ, ಇನ್ನು ಮದುವೆ ಕುರಿತು ಅನೇಕ ಪ್ರಕರಣಗಳು ಸಹ ದಿನೇ ದಿನೇ ಹೆಚ್ಚಾಗುತ್ತಾ ಬರುತ್ತಿದೆ.

ಇನ್ನು ಮದುವೆ ವಿಷಯದಲ್ಲಿ ಅನೇಕ ಮಹಿಳೆಯರಿಗೆ ಪುರುಷರು ವಂಚಿಸುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಾ ಬರುತ್ತಿದೆ. ಹೌದು, ತಮ್ಮ ಬಗ್ಗೆ ಸುಳ್ಳು ಮಾಹಿತಿ ನೀಡಿ ನಂತರ ಹುಡುಗಿಯನ್ನು ಮರಳು ಮಾಡಿ ಆಕೆಯನ್ನು ಮದುವೆಯಾಗುವ ಅನೇಕ ಪ್ರಯತ್ನಗಳು ನಡೆದಿರುವ ಬಗ್ಗೆ ಪ್ರಕರಣಗಳು ದಾಖಲಾಗುತ್ತಿವೆ.

ಇನ್ನು ಇವೆಲ್ಲವನ್ನೂ ಗಮನಿಸಿದ ಕೇಂದ್ರ ಸರ್ಕಾರ (Central Government) ಇದೀಗ ಮಹಿಳೆಯರ ಸುರಕ್ಷತೆಗಾಗಿ ಮದುವೆ ಕುರಿತು ಹೊಸ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ. ಹೌದು, ಇದೀಗ ದೇಶದಲ್ಲಿ ಮದುವೆ ಕುರಿತು ನಡೆಯುತ್ತಿರುವ ವಂಚನೆಗಳಿಗೆ ಬ್ರೇಕ್ ಹಾಕಲು ಇದೀಗ ಕೇಂದ್ರ ಸರ್ಕಾರ ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ.

ಯುವಕ ತನ್ನ ಅಸಲಿ ಗುರುತನ್ನು ಹೇಳದೆ, ತನ್ನ ಕುರಿತು ಸುಳ್ಳು ಮಾಹಿತಿ ನೀಡಿ, ಹುಡುಗಿಯನ್ನು ವಂಚಿಸಿ ಮದುವೆಯಾಗಿತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದೆ. ಇನ್ನು ಈ ರೀತಿ ವಂಚನೆಗೆ ಗುರಿಯಾದ ಹುಡುಗಿಯ ಬಾಳು ನಿಜಕ್ಕೂ ದುಸ್ಥಿರಸ್ಥಿತಿಯಲ್ಲಿದ್ದು, ಅವರನ್ನು ತಮ್ಮ ಪೋಷಕರು ಸಹ ಒಪ್ಪಿಕೊಳ್ಳುತ್ತಿಲ್ಲ, ಇನ್ನು ಈ ರೀತಿ ವಂಚನೆಗೆ ಗುರಿಯಾದ ಅನೇಕ ಮಹಿಳೆಯರು ಇಂದಿಗೂ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಇನ್ನು ಇಂತಹ ವಂಚನೆಗಳನ್ನು ತಡೆಯಲು ಇದೀಗ ಕೇಂದ್ರ ಸರ್ಕಾರ ಲೋಕ ಸಭೆಯಲ್ಲಿ ಈ ಕುರಿತು ಚರ್ಚಿಸಿ ಹೊಸ ಕಠಿಣ ನಿಯಮಗಳನ್ನು (New Rules) ಜಾರಿಗೆ ತರಲು ನಿರ್ಧರಿಸಿದೆ.

ಹೌದು, ತಮ್ಮ ಅಸಲಿ ಗುರುತನ್ನು ಹೇಳದೆ, ತಮ್ಮ ಹೆಸರು, ತಮ್ಮ ಕೆಲಸ ಅಥವಾ ತಮ್ಮ ಕುಟುಂಬಸ್ಥರ ಕುರಿತು ಸುಳ್ಳು ಮಾಹಿತಿ ನೀಡಿ ಹುಡುಗಿಯನ್ನು ವಂಚಿಸಿ ಮದುವೆಯಾದರೆ ಅಂತವರಿಗೆ ಇದೀಗ ಸರ್ಕಾರವು 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲು ಇದೀಗ ವಸೂದೆಯನ್ನು ಜಾರಿಗೆ ತರಲಾಗಿದೆ.

ಸದ್ಯ ಈ ಕುರಿತು ಲೋಕ ಸಭೆಯಲ್ಲಿ ಚರ್ಚೆಗಳು ನಡೆದಿದ್ದು, ಆದಷ್ಟು ಬೇಗ ಈ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

The government has implemented new rules on marriage

Related Stories