10ನೇ ತರಗತಿ ಪಾಸ್ ಆಗಿದ್ದವರಿಗೂ ಸಿಗುತ್ತೆ ಸರ್ಕಾರಿ ಕೆಲಸ; ಇಂದೇ ಅಪ್ಲೈ ಮಾಡಿ
ಕೇವಲ 10ನೇ ತರಗತಿ ತೇರ್ಗಡೆ ಹೊಂದಿರುವವರು ಕೂಡ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರ ಸರ್ಕಾರದ ಉದ್ಯೋಗ (Central Government job) ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶ. ಕೇವಲ 10ನೇ ತರಗತಿ ತೇರ್ಗಡೆ ಹೊಂದಿರುವವರು ಕೂಡ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಪರಮನೆಂಟ್ ಜಾಬ್ (permanent job) ಹಾಗೂ ಅತ್ಯುತ್ತಮ ಸಂಬಳ ಕೂಡ ಪಡೆದುಕೊಳ್ಳಬಹುದು.
ಭಾರತೀಯ ಅಂಚೆ ಇಲಾಖೆ ನೇಮಕಾತಿ! (Indian post office recruitment 2024)
ಭಾರತೀಯ ಅಂಚೆ ಇಲಾಖೆ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ ಖಾಲಿ ಇರುವ 7 ಸ್ಟಾಫ್ ಕಾರ್ ಡ್ರೈವರ್ (staff car driver) ಹುದ್ದೆ ಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 20, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ; (education qualification)
ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿ ಹತ್ತನೇ ತರಗತಿ (SSLC) ಉತ್ತೀರ್ಣರಾಗಿರಬೇಕು ಹಾಗೂ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದುಕೊಂಡಿರಬೇಕು.
ವಯೋಮಿತಿ! (Age Limit)
ಭಾರತೀಯ ಅಂಚೆ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಜನವರಿ 20, 2024 ಕ್ಕೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ವಯಸ್ಸಾಗಿರಬೇಕು. ಇದರಲ್ಲಿ ವಯೋಮಿತಿ ಸಡಿಲಿಕೆ ಕೂಡ ಇದ್ದು, ಒಬಿಸಿ ವರ್ಗಕ್ಕೆ ಮೂರು ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವೇತನ ಹಾಗೂ ಉದ್ಯೋಗ ಸ್ಥಳ (salary and posting)
ಭಾರತೀಯ ಅಂಚೆ ಇಲಾಖೆ ನೇಮಕಾತಿ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ, ರೂ. 19,900 ನಿಂದ ರೂ. 63,200 ವರೆಗೆ ತಿಂಗಳ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು, ಛತ್ತೀಸ್‌ಗಢದ ಬಿಲಾಸ್ಪುರ್, ರಾಯಗಢ, ರಾಯಪುರ, ಸರ್ಗುಜಾ ಸ್ಥಳಗಳಲ್ಲಿ ಇರುವ ಅಂಚೆ ಕಚೇರಿಯಲ್ಲಿ ಕೆಲಸ ಮಾಡಲು ಸಿದ್ದರಿರಬೇಕು.
ಆಯ್ಕೆ ಪ್ರಕ್ರಿಯೆ; (selection process)
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪರಿಶೀಲಿಸಿ ಅವರ ಡ್ರೈವಿಂಗ್ ಲೈಸೆನ್ಸ್ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುವುದು. ನಂತರ ಪ್ರಾಯೋಗಿಕವಾಗಿ ಕಾರ್ ಡ್ರೈವಿಂಗ್ ಟೆಸ್ಟ್ ನಡೆಸಲಾಗುವುದು ಎಂದು ಭಾರತೀಯ ಅಂಚೆ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ! (Application fee)
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ ಅಭ್ಯರ್ಥಿಗಳು ಇ – ಚಲನ್ ಮೂಲಕ 100 ರೂಪಾಯಿಗಳ ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; (last date to apply)
ಡಿಸೆಂಬರ್ 20 2023 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 20, 2024ಕ್ಕೆ ಕೊನೆಗೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 20ರ ಒಳಗೆ ಪೋಸ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ! (Address)
ಅಭ್ಯರ್ಥಿಗಳು ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಕಳುಹಿಸಿ.
ಅಸಿಸ್ಟೆಂಟ್ ಡೈರೆಕ್ಟರ್ (Staff)
O/o ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್, ಛತ್ತೀಸ್ಗಢ ವೃತ್ತ, ರಾಯಪುರ-492001.
Those who passed 10th class also get government job, Apply today