ಲಖನೌ, ತಿರುಪತಿಯ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ, ಪೊಲೀಸರಿಂದ ಶೋಧ

Story Highlights

ತಿರುಪತಿ ಹಾಗೂ ಲಖನೌ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಬಂದ ಹಿನ್ನೆಲೆ ಪೊಲೀಸರಿಂದ ಶೋಧ ಕಾರ್ಯ ನಡೆಯಿತು

  • ತಿರುಪತಿ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ
  • ಲಖನೌನ 10 ಹೋಟೆಲ್‌ಗಳಿಗೆ ಇಮೇಲ್ ಬೆದರಿಕೆ
  • ಪೊಲೀಸರಿಂದ ಶೋಧ ತೀವ್ರ ತಪಾಸಣೆ

ತಿರುಪತಿ: ತಿರುಪತಿಯಲ್ಲಿ, ಬಾಂಬ್ ಬೆದರಿಕೆ (bomb threat) ದೂರುಗಳನ್ನು ಸ್ವೀಕರಿಸಿದ ನಂತರ, ಕಳೆದ ಮೂರು ದಿನಗಳಿಂದ ನೂರಾರು ವಿಮಾನಗಳಿಗೆ (hundreds of flights) ಬಾಂಬ್ ಬೆದರಿಕೆ ಇಮೇಲ್‌ಗಳು (bomb threat emails) ಬಂದ ಬೆನ್ನಲ್ಲೇ ಹೋಟೆಲ್ ಗಳಿಗೂ ಇದೆ ರೀತಿಯ ಬೆದರಿಕೆ ಕರೆಗಳು ಬಂದಿವೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.

“ನಾವು ದೂರುಗಳನ್ನು ಸ್ವೀಕರಿಸಿದ ತಕ್ಷಣ, ನಿರ್ದಿಷ್ಟ ಹೋಟೆಲ್‌ಗಳಲ್ಲಿ ಇರುವ ಜನರನ್ನು ಸ್ಥಳಾಂತರಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ (bomb disposal squad) ತೀವ್ರ ಶೋಧ ನಡೆಸಿದೆ,” ಎಂದು ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

“ನಾವು ಪರಿಶೀಲನೆ ನಡೆಸಿದಾಗ, ಈ ದೂರುಗಳು ನಕಲಿ ಇಮೇಲ್ ಬೆದರಿಕೆ ಎಂದು ತಿಳಿದುಬಂದಿದೆ. ನಾವು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ (Lucknow) ಕನಿಷ್ಠ 10 ಪ್ರತಿಷ್ಠಿತ ಹೋಟೆಲ್‌ಗಳಿಗೆ (prestigious hotels) ಭಾನುವಾರ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದವು. “ನೀವು 55,000 ಡಾಲರ್ ನೀಡದಿದ್ದರೆ, ಸ್ಫೋಟ ಸಂಭವಿಸುತ್ತದೆ” ಎಂದು ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.

“ನಿಮ್ಮ ಹೋಟೆಲ್‌ನ ಆವರಣದಲ್ಲಿ ಕಪ್ಪು ಚೀಲಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ನನಗೆ 55,000 ಅಮೆರಿಕನ್ ಡಾಲರ್ ಬೇಕು. ಕೊಡದಿದ್ದರೆ, ನಾನು ಬಾಂಬ್ ಸ್ಫೋಟಿಸುತ್ತೇನೆ, ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಯತ್ನಿಸಿದರೂ ಸಹ ಸ್ಫೋಟವಾಗುತ್ತದೆ” ಎಂದು ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿತ್ತು.

“ಬೆಳಗ್ಗೆ ನಮಗೆ ಬೆದರಿಕೆ ಮೇಲ್ ಬಂದಿತು. ಮುನ್ನೆಚ್ಚರಿಕೆಗೆ, ಸ್ಥಳೀಯ ಪೊಲೀಸ್ ಠಾಣೆಗೆ (local police station) ವಿಷಯ ತಿಳಿಸಿದ್ದೇವೆ ಮತ್ತು ತನಿಖಾ ತಂಡ (investigation team) ಈ ಬಗ್ಗೆ ಪರಿಶೀಲಿಸುತ್ತಿದೆ” ಎಂದು ಹೋಟೆಲ್ ಮ್ಯಾನೇಜರ್‌ ಓರ್ವ ಹೇಳಿದರು.

ಪೊಲೀಸರು ತಕ್ಷಣವೇ ಬಾಂಬ್ ಬೆದರಿಕೆ ಬಂದ ಎಲ್ಲಾ ಹೋಟೆಲ್‌ಗಳಲ್ಲಿ ಶೋಧ (search) ನಡೆಸಿದ್ದು, ತನಿಖೆ ಮುಂದುವರಿಸುತ್ತಿದ್ದಾರೆ.

Tirupati and Lucknow Hotels Receive Bomb Threat Emails

Related Stories