ಫ್ಲಶ್ ಮಾಡಿದಾಗ ಟಾಯ್ಲೆಟ್ ಸೀಟ್ ಸ್ಫೋಟ, ವ್ಯಕ್ತಿಗೆ ಗಾಯ
ಶೌಚಾಲಯವನ್ನು ಬಳಸಿದ ನಂತರ ಅದನ್ನು ಫ್ಲಶ್ ಮಾಡಿದಾಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಹೌದು, ಉತ್ತರ ಪ್ರದೇಶದ *ಗ್ರೇಟರ್ ನೊಯ್ಡಾ (Greater Noida)*ನ ಸೆಕ್ಟರ್ 36ರಲ್ಲಿ ಸಂಭವಿಸಿದ ಈ ವಿಚಿತ್ರ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 20 ವರ್ಷದ ಅಷು ಎಂಬ ಯುವಕ, ಮನೆ ಟಾಯ್ಲೆಟ್ ಬಳಸಿದ ನಂತರ ಫ್ಲಶ್ ಮಾಡಿದಾಗ, ಟಾಯ್ಲೆಟ್ ಸೀಟು ಸಿಡಿದು ಆತ ಭೀಕರವಾಗಿ ಗಾಯಗೊಂಡಿದ್ದಾನೆ.
ಅಷು ಎಂಬ ಯುವಕನಿಗೆ ಸುಮಾರು 35% ಶರೀರದಲ್ಲಿ ಗಾಯಗಳಾಗಿದ್ದು, ತಕ್ಷಣವೇ ಕಸಾನಾ ಪ್ರದೇಶದಲ್ಲಿರುವ ಗವರ್ನ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (Government Hospital) ಗೆ ದಾಖಲು ಮಾಡಲಾಗಿದೆ. ವೈದ್ಯರ ಪ್ರಕಾರ, ಅವನ ಸ್ಥಿತಿ ಗಂಭೀರವಾಗಿದ್ದರೂ ಈಗ ಸ್ಥಿರವಾಗಿದೆ.
ಈ ಘಟನೆಯಿಂದ ಟಾಯಿಲೆಟ್ ನ ಪೈಪ್ಲೈನ್ಗಳಲ್ಲಿ ಸಂಚಯವಾಗಿದ್ದ ಮಿಥೇನ್ (methane gas explosion) ಗ್ಯಾಸ್ ಬಗ್ಗೆ ಶಂಕೆ ಮೂಡಿದೆ. ಅದುವೇ ಈ ಸಿಡಿತಕ್ಕೆ ಕಾರಣವಿರಬಹುದೆಂದು ಸ್ಥಳೀಯರು ಹೇಳಿದ್ದಾರೆ. ಇದೇ ವೇಳೆ, ನಗರ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿ ಕೊಳವೆಗಳಲ್ಲಿ ಮೀಥೇನ್ ಅನಿಲ ಸಂಗ್ರಹವಾಗಿರುವುದರಿಂದ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, ಒಳಚರಂಡಿ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈ ರೀತಿಯ ಮೊದಲ ಘಟನೆ ಎಂದು ಹೇಳಿದರು. ಅಲ್ಲದೆ ಈ ಬಗ್ಗೆ ಐಐಟಿ ತಜ್ಞರ ಸಹಾಯದಿಂದ ಪರೀಕ್ಷಿಸಿ ತನಿಖೆ ನಡೆಸುವುದಾಗಿ ಬಹಿರಂಗಪಡಿಸಿದರು.
ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ (public safety) ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.
Toilet Seat Blast in Greater Noida







