Bus Catches Fire: ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ, ಸಂಪೂರ್ಣವಾಗಿ ಸುಟ್ಟು ಭಸ್ಮ! ಪ್ರಯಾಣಿಕರು ಪಾರು
ಕೇರಳದ ಕೊಟ್ಟಾಯಂನಲ್ಲಿ ಪ್ರವಾಸಿಗರೊಂದಿಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಗಳಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಸಂಭವಿಸಿ ಪ್ರಯಾಣಿಕರು ಸಮಯಕ್ಕೆ ಇಳಿದು ಪ್ರಾಣಾಪಾಯ ತಪ್ಪಿಸಿಕೊಂಡಿದ್ದಾರೆ

- ಕೊಟ್ಟಾಯಂ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ
- ಪ್ರವಾಸಿಗರು ಸಮಯಕ್ಕೆ ಇಳಿದು ಪ್ರಾಣಾಪಾಯ ತಪ್ಪು
- ಬಸ್ ಸಂಪೂರ್ಣ ಸುಟ್ಟು ಭಸ್ಮ, ಕಾರಣ ಪತ್ತೆಗೆ ತನಿಖೆ
Kerala Bus Catches Fire: ಕೇರಳದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿದೆ. ಕೆಲವೇ ನಿಮಿಷಗಳಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲಪ್ಪುರಂ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಸೂಪರ್ ಡಿಲಕ್ಸ್ ಬಸ್ 28 ಮಂದಿ ಪ್ರಯಾಣಿಕರೊಂದಿಗೆ ಪಥನಂತಿಟ್ಟದ ಗವಿಗೆ ತೆರಳುತ್ತಿತ್ತು. ಮಾರ್ಗಮದ್ಯೆ ಸಾಗುತ್ತಿದ್ದ ವೇಳೆ, ಮಣಿಮಲ ಸಮೀಪದ ಪಜಾಯಿಡಂ–ಕುನ್ನತುಪುಳ ಪ್ರದೇಶಕ್ಕೆ ಬಂದಾಗ ಅಪಾಯ ಎದುರಾಯಿತು.
ಟೈರ್‌ನಿಂದ ಹೊಗೆ, ನಂತರ ಬೆಂಕಿ
ಬಸ್‌ನ ಹಿಂಬದಿಯ ಎಡ ಟೈರ್‌ನಿಂದ ಹೊಗೆ ಕಾಣಿಸಿಕೊಂಡುದನ್ನು ಪ್ರಯಾಣಿಕರು ಗಮನಿಸಿ ತಕ್ಷಣ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿ ಎಲ್ಲರನ್ನು ಸುರಕ್ಷಿತವಾಗಿ ಇಳಿಸಿದ್ದಾನೆ. ಲಗೇಜ್‌ಗಳನ್ನು ತೆಗೆದುಕೊಳ್ಳುವಷ್ಟರಲ್ಲಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಬಸ್ ಸಂಪೂರ್ಣವಾಗಿ ಸುತ್ತು ಹೋಗಿದೆ.
ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಪರ್ಯಾಯ ಬಸ್ ವ್ಯವಸ್ಥೆ ಮಾಡಿದೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.







