ಹಿಮಾಚಲ: ಕಣಿವೆಗೆ ಉರುಳಿದ ಕಾರು, 16 ವರ್ಷದ ಬಾಲಕ ಸೇರಿ ಐವರು ಸಾವು
ಮಂಡಿ ಜಿಲ್ಲೆಯ ಚೌಹಾರ್ ಕಣಿವೆಯಲ್ಲಿ (Chauhar Canyon), ಶನಿವಾರ ರಾತ್ರಿ ಕಾರು ಕಣಿವೆಗೆ ಉರುಳಿ ಬಿದ್ದ ಪರಿಣಾಮ ಐವರು ಸಾವಿಗೀಡಾಗಿದ್ದಾರೆ
ಹಿಮಾಚಲ ಪ್ರದೇಶದ (Himachal Pradesh) ಮಂಡಿ ಜಿಲ್ಲೆಯ ಚೌಹಾರ್ ಕಣಿವೆಯಲ್ಲಿ (Chauhar Canyon), ಶನಿವಾರ ರಾತ್ರಿ ಕಾರು ಕಣಿವೆಗೆ ಉರುಳಿ ಬಿದ್ದ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಒಬ್ಬ 16 ವರ್ಷದ ಬಾಲಕ ಮತ್ತು ಇತರ ನಾಲ್ಕು ವ್ಯಕ್ತಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ.
ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಶನಿವಾರ ರಾತ್ರಿ ಕಾರು (car) ಕಣಿವೆಗೆ ಉರುಳಿ ಬಿದ್ದು, ಭೀಕರ ಅಪಘಾತದಲ್ಲಿ (horrific accident) ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಭಾನುವಾರ (Sunday) ತಿಳಿಸಿದ್ದಾರೆ.
ಐದು ಮೃತರಲ್ಲಿ ಒಬ್ಬನನ್ನು 16 ವರ್ಷದ ಬಾಲಕ (16-year-old boy) ಎಂದು ಗುರುತಿಸಲಾಗಿದೆ. ಉಳಿದ ನಾಲ್ಕು ವ್ಯಕ್ತಿಗಳು 20 ರಿಂದ 25 ವರ್ಷ ವಯಸ್ಸಿನವರು ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ (Sakshi Varma) ತಿಳಿಸಿದರು.
ಧಾಮಚ್ಯಾನ್ ಗ್ರಾಮದ ನಿವಾಸಿಗಳು ಬರೋಟ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಶನಿವಾರ ರಾತ್ರಿ ಕಾರು ನಿಯಂತ್ರಣ ತಪ್ಪಿ ನೇರವಾಗಿ ಸುಮಾರು 700 ಮೀಟರ್ ಕೆಳಗೆ ಬಿದ್ದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಂಡಿ ಸಾಕ್ಷಿ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಮರುದಿನ ಬೆಳಿಗ್ಗೆ, ಕುರಿ ಕಾಯುವ ವ್ಯಕ್ತಿ ಶವಗಳೊಂದಿಗೆ ಕಾರಿನ ಅವಶೇಷಗಳನ್ನು ಕಂಡು ಹತ್ತಿರದ ಇತರ ಜನರಿಗೆ ಮಾಹಿತಿ ನೀಡಿದನು. ನಂತರ ಗ್ರಾಮಸ್ಥರು ಅಪಘಾತದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
Tragic Accident in Himachal Pradesh Mandi Claims Five Lives