ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ, 18 ಮಂದಿ ಸಾವು! ಸಂತ್ರಸ್ತರಿಗೆ 10 ಲಕ್ಷ ಪರಿಹಾರ
Tragic Stampede : ದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆಚ್ಚಿನ ಜನಸಂದಣಿಯ ಕಾರಣ ಈ ದುರಂತ ಸಂಭವಿಸಿದ್ದು, ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ.
- 18 ಮಂದಿ ಮೃತಪಟ್ಟಿದ್ದು, 11 ಮಹಿಳೆಯರು, 4 ಮಕ್ಕಳು ಸೇರಿದ್ದಾರೆ
- ಜನಸಂದಣಿ ಹೆಚ್ಚಿದ ಕಾರಣದಿಂದ ಕಾಲ್ತುಳಿತ ಉಂಟಾಯಿತು
- ರೈಲ್ವೆ ಇಲಾಖೆ ಸಂತ್ರಸ್ತರಿಗೆ 10 ಲಕ್ಷ ಪರಿಹಾರ ಘೋಷಣೆ
Tragic Stampede : ಶನಿವಾರ ರಾತ್ರಿ ನ್ಯೂ ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 18 ಮಂದಿ ದುರ್ಮರಣಕ್ಕೀಡಾದ ಘಟನೆ ನಡೆದಿದೆ (Tragic Stampede at New Delhi Railway Station). ಈ ದುರ್ಘಟನೆಯಲ್ಲಿ 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ ಹಲವು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆ ಈ ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ.
ಈ ದುರಂತಕ್ಕೆ ಕಾರಣ ಏನು?
ಪ್ರಯಾಗರಾಜ್ ಮಹಾಕುಂಭ 2025 ಮೇಳಕ್ಕೆ ತೆರಳುತ್ತಿದ್ದ ಭಕ್ತರು ನ್ಯೂ ದೆಹಲಿ ನಿಲ್ದಾಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಒಗ್ಗೂಡಿದ್ದರು. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ 14 ಮತ್ತು 15ನೇ ಪ್ಲಾಟ್‌ಫಾರ್ಮ್ ಬಳಿ ಸಾವಿರಾರು ಜನರು ಸೇರುವುದರಿಂದ ಅಚಾನಕ್ ಕಾಲ್ತುಳಿತ ಶುರುವಾಯಿತು.
ಮೂಲತಃ 12ನೇ ಪ್ಲಾಟ್‌ಫಾರ್ಮ್‌ನಿಂದ ಹೊರಡುವುದಾಗಿ ಘೋಷಿಸಲಾದ ಪ್ರಯಾಗರಾಜ್ ವಿಶೇಷ ರೈಲು, 16ನೇ ಪ್ಲಾಟ್‌ಫಾರ್ಮ್‌ಗೆ ಸ್ಥಳಾಂತರಿಸಲ್ಪಟ್ಟ ಕಾರಣ ಮತ್ತಷ್ಟು ಗೊಂದಲ ಉಂಟಾಯಿತು. ತಕ್ಷಣವೇ ಎಲ್ಲರೂ 16ನೇ ಪ್ಲಾಟ್‌ಫಾರ್ಮ್ ಕಡೆಗೆ ಓಡಿದ ಪರಿಣಾಮ, ಅಪಾರ ಜನಸಂದಣಿಯ ಕಾರಣ ಅನಾಹುತ ಸಂಭವಿಸಿತು.
ಪರಿಹಾರ
ರೈಲ್ವೆ ಇಲಾಖೆ ಪ್ರಕಾರ, ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ಗಂಭೀರ ಗಾಯಗೊಂಡವರಿಗೆ ₹2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಿಗೆ ₹1 ಲಕ್ಷ ನೀಡಲಾಗುವುದು. ಘಟನೆಯ ತಕ್ಷಣ, ನಾಲ್ಕು ವಿಶೇಷ ರೈಲುಗಳನ್ನು ನಿಯೋಜಿಸಿ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲಾಯಿತು.
ರೈಲ್ವೆ ಇಲಾಖೆ ತನಿಖೆಗೆ ಆದೇಶ
ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಡಿಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಕೆ.ಪಿ.ಎಸ್ ಮಲ್ಹೋತ್ರಾ ಮಾಹಿತಿ ನೀಡಿದ್ದು, “ಭಕ್ತರ ಸಂಖ್ಯೆಯನ್ನು ಅಂದಾಜು ಮಾಡಿದ್ದರೂ, ಕೇವಲ 10 ನಿಮಿಷಗಳಲ್ಲಿ ಈ ದುರ್ಘಟನೆ ಸಂಭವಿಸಿತು,” ಎಂದು ತಿಳಿಸಿದ್ದಾರೆ. ರೈಲ್ವೆ ಬೋರ್ಡ್ ಈ ಘಟನೆಯ ತನಿಖೆಗೆ ಎರಡು ಸದಸ್ಯರ ಸಮಿತಿಯನ್ನು ರಚಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಈ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ಸಂತ್ರಸ್ತಕುಟುಂಬಗಳಿಗೆ ಸಂತಾಪಗಳು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ.
Tragic Stampede at New Delhi Railway Station
Our Whatsapp Channel is Live Now 👇