India News

ಮಹಿಳೆಯರ ಅಳತೆಗಳನ್ನು ಪುರುಷ ಟೈಲರ್ ತೆಗೆದುಕೊಳ್ಳಬಾರದು: ಯುಪಿ ಮಹಿಳಾ ಆಯೋಗ

ಉತ್ತರಪ್ರದೇಶ: ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಆಯೋಗ ಕೆಲವು ಶಿಫಾರಸುಗಳನ್ನು ಪ್ರಸ್ತಾಪಿಸಿದೆ. ಅಕ್ಟೋಬರ್ 28 ರಂದು ಲಕ್ನೋದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಆಯೋಗದ ಸದಸ್ಯರು ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.

ಮಹಿಳೆಯರ ಅಳತೆಗಳನ್ನು ಪುರುಷ ಟೈಲರ್ ತೆಗೆದುಕೊಳ್ಳಬಾರದು, ಪುರುಷರು ಜಿಮ್‌ಗಳು ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಬಾರದು,ಎಂದು ಉತ್ತರ ಪ್ರದೇಶ ಮಹಿಳಾ ಆಯೋಗವು ಮಹಿಳೆಯರ ಸುರಕ್ಷತೆಗಾಗಿ ಕೆಲವು ಶಿಫಾರಸುಗಳನ್ನು ಪ್ರಸ್ತಾಪಿಸಿದೆ.

Up Women's Body Proposes Safety Measures
ಟೈಲರ್

ಪುರುಷ ಟೈಲರ್‌ಗಳು ಮಹಿಳೆಯರ ಅಳತೆ ಮಾಡುವುದನ್ನು ತಡೆಯುವುದು, ಮಹಿಳಾ ಬಟ್ಟೆ ಅಂಗಡಿಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ಮಾತ್ರ ನೇಮಿಸುವುದು, ಶಾಲಾ ಬಸ್‌ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದು, ಜಿಮ್‌ಗಳು ಮತ್ತು ಯೋಗ ಕೇಂದ್ರಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಪುರುಷರಿಗೆ ಅವಕಾಶ ನೀಡಬಾರದು, ಎಲ್ಲೆಡೆ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಇನ್ನಷ್ಟು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಮಹಿಳೆಯರ ಸುರಕ್ಷತೆಯನ್ನು ಸುಧಾರಿಸಲು ವಿವಿಧ ವಿಧಾನಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಯುಪಿ ಮಹಿಳಾ ಆಯೋಗದ ಸದಸ್ಯೆ ಮನಿಶಾ ಅಹ್ಲಾವತ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪುರುಷರ ಕೆಟ್ಟ ಉದ್ದೇಶ, ಕೆಟ್ಟ ಸ್ಪರ್ಶ ಹಾಗೂ ಅಸಭ್ಯ ವರ್ತನೆಯಿಂದ ಮಹಿಳೆಯರನ್ನು ರಕ್ಷಿಸಲು ಈ ಪ್ರಸ್ತಾವನೆಗಳನ್ನು ಮಾಡಲಾಗಿದೆ, ಆದರೆ ಎಲ್ಲಾ ಪುರುಷರು ಕೆಟ್ಟ ಉದ್ದೇಶಗಳನ್ನು ಹೊಂದಿರುತ್ತಾರೆ ಎಂದು ನಾವು ಹೇಳುತ್ತಿಲ್ಲ, ಸುರಕ್ಷತೆಯ ದೃಷ್ಟಿ ಇಂದ ಮಾತ್ರ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

Up Women’s Body Proposes Safety Measures

Related Stories