India News

ದೇಶದ ಜನತೆಗೆ ಮೋದಿ ಅವರ ಬರ್ತ್ ಡೇ ಗಿಫ್ಟ್, ಇಂತಹವರಿಗೆ ಸಿಗಲಿದೆ 2 ಲಕ್ಷದವರೆಗೆ ಸುಲಭ ಸಾಲ

ನಮ್ಮ ದೇಶದಲ್ಲಿ ಸಾಕಷ್ಟು ಜನ ಬಡವರು, ಕಷ್ಟದಲ್ಲಿ ಇರುವವರು ಇದ್ದಾರೆ. ಅಂಥವರು ಅಭಿವೃದ್ಧಿ ಆಗಬೇಕು, ಅವರಿಗೆಲ್ಲಾ ಒಳ್ಳೆಯದಾಗಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು, ಆರ್ಥಿಕವಾಗಿ ಅವರಿಗೆ ಒಳ್ಳೆಯದಾಗಲಿ, ಸಬಲೀಕರಣ ಆಗಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪ್ರಯೋಜನವನ್ನು ಬಡಜನರು ಪಡೆದುಕೊಳ್ಳುತ್ತಿದ್ದಾರೆ.

ಅದರಲ್ಲೂ ಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರವು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಬಳಸಿಕೊಂಡು ಅವರು ತಮ್ಮ ಜೀವನದಲ್ಲಿ ಇನ್ನು ಒಳ್ಳೆಯ ಸ್ಥಾನಕ್ಕೆ ಏರಬಹುದು.

Get this card now to Get free benefit up to 5 lakhs

ಮಗುವನ್ನು ದತ್ತು ತೆಗೆದುಕೊಳ್ಳಲು ನಮ್ಮ ದೇಶದಲ್ಲಿ ಇರುವ ನಿಯಮಗಳೇನು ಗೊತ್ತಾ? ಕಾನೂನು ತಿಳಿಯಿರಿ

ಇದೀಗ ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದ್ದು, ಮೋದಿ ಅವರ ಸರ್ಕಾರದ ವತಿಯಿಂದ ಈ ಒಂದು ಹೊಸ ಯೋಜನೆ ಬರಲಿದ್ದು, ಮೋದಿ (PM Narendra Modi Birth Day) ಅವರ ಹುಟ್ಟುಹಬ್ಬಕ್ಕೆ ಇದು ಜನರಿಗೆ ಕೊಡುತ್ತಿರುವ ಗಿಫ್ಟ್ ಆಗಿದೆ.

ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದು ವಿಶೇಷವಾಗಿ ಸಾಂಪ್ರದಾಯಿಕವಾಗಿ ಕೌಶಲ್ಯತೆಗಳನ್ನು ಹೊಂದಿರುವ ಜನರಿಗಾಗಿ ಶುರು ಮಾಡುತ್ತಿರುವ ಯೋಜನೆ

ಈ ಯೋಜನೆಯ ಹೆಸರು ವಿಶ್ವಕರ್ಮ ಯೋಜನೆ (Vishwakarma Yojana). ಈಗ ಸಿಕ್ಕಿರುವ ಮಾಹಿತಿ ಪ್ರಕಾರ ವಿಶ್ವಕರ್ಮ ಯೋಜನೆಗಾಗಿ ಸುಮಾರು 2 ಲಕ್ಷ ರೂಪಾಯಿಯವರೆಗು ಸಾಲ ಪಡೆಯಬಹುದು ಎಂದು ಹೇಳಲಾಗುತ್ತಿದೆ. ಕುಶಲಕರ್ಮಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.

Vishwakarma Yojanaಈ ಯೋಜನೆಯಲ್ಲಿ ಸಾಲ ಪಡೆಯುವ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10,000 ರೂಪಾಯಿಯನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಪಿಎಮ್ ಮೋದಿ ಅವರ ಈ ಯೋಜನೆಯಲ್ಲಿ ಕುಶಲಕರ್ಮಿಗಳಿಗೆ ಮೊದಲ ಕಂತಿನಲ್ಲಿ 1 ಲಕ್ಷ ರೂಪಾಯಿ ಸಾಲವನ್ನು ಕೊಡಲಾಗುತ್ತದೆ.

ಎರಡನೇ ಕಂತಿನಲ್ಲಿ 5% ಡಿಸ್ಕೌಂಟ್ ವರೆಗು 2 ಲಕ್ಷದವರೆಗು ಸಾಲ ಕೊಡಲಾಗುತ್ತದೆ. 5% ಬಡ್ಡಿ ಡಿಸ್ಕೌಂಟ್ ಇರುವುದು ಮತ್ತೊಂದು ವಿಶೇಷ ಆಗಿದೆ.

ಇಷ್ಟೇ ಅಲ್ಲದೆ, ಈ ಕಲೆಗಳನ್ನು ಕಲಿಯುವವರಿಗೆ 500 ರೂಪಾಯಿಗಳನ್ನು ತರಬೇತಿ ಪಡೆಯುವ ವೇಳೆ ಸ್ಟೈಪಂಡ್ ಆಗಿ ನೀಡಲಾಗುತ್ತದೆ. ಅದಕ್ಕೆ ಬೇಕಾದ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ 1500 ರೂಪಾಯಿ ಕೊಡಲಾಗುತ್ತದೆ.

ಈ ಸಾಲಕ್ಕೆ ಬಡ್ಡಿ ಕೂಡ ಕಡಿಮೆ ದರದಲ್ಲಿ, ಸಬ್ಸಿಡಿ ಜೊತೆಗೆ ಇರುತ್ತದೆ ಎನ್ನುವುದು ವಿಶೇಷ. 5% ವರೆಗು ಸಬ್ಸಿಡಿ ಬಡ್ಡಿದರ ಇರುತ್ತದೆ. ಸೆಪ್ಟೆಂಬರ್ 17ರಂದು ವಿಶ್ವಕರ್ಮ ದಿನಾಚರಣೆ ಜೊತೆಗೆ ಮೋದಿ ಅವರ ಹುಟ್ಟುಹಬ್ಬ, ಈ ಎರಡು ದಿನಕ್ಕೆ ಜನರಿಗೆ ಗಿಫ್ಟ್ ಕೊಡಲಾಗುತ್ತಿದೆ.

Vishwakarma Yojana Benefits and Loan Details

Our Whatsapp Channel is Live Now 👇

Whatsapp Channel

Related Stories