Viral Video: ಅಡುಗೆ ಮಾಡಲು ತನ್ನ ಮೂತ್ರ ಬಳಸುತ್ತಿದ್ದ ಮನೆಗೆಲಸದ ಮಹಿಳೆ, ಕೃತ್ಯ ಕ್ಯಾಮರಾದಲ್ಲಿ ಸೆರೆ
Watch Viral Video : ಅಡುಗೆ ಮಾಡಲು ತನ್ನ ಮೂತ್ರ ಬಳಸುತ್ತಿದ್ದ ಮನೆಗೆಲಸದ ಮಹಿಳೆ, ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಭಯಾನಕ ಘಟನೆ ನಡೆದಿದೆ
Watch Viral Video : ಮನೆಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಇಡೀ ಫ್ಯಾಮಿಲಿ ಫ್ಯಾಮಿಲಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೊರಗೆ ಊಟ ಮಾಡೋಲ್ಲ, ಅಂತಹ ಆರೋಗ್ಯ ಸಮಸ್ಯೆಯೂ ಇಲ್ಲ, ಆದ್ರೆ ಅನಾರೋಗ್ಯಕ್ಕೆ ಕಾರಣವೇನು ಅನ್ನೋದು ಮನೆಯವರಿಗೆ ಗೊತ್ತೇ ಆಗಿಲ್ಲ.
ತ್ಯವೂ ಆರೋಗ್ಯ ಸಮಸ್ಯೆ, ಆಸ್ಪತ್ರೆಗೆ ಹೋದರೆ ವೈದ್ಯಕೀಯ ಪರೀಕ್ಷೆ, ಔಷಧಿಗಳಿಗೆ ನೀರಿನಂತೆ ಸಾವಿರಾರು ರೂಪಾಯಿ ಖರ್ಚು. ಮನೆಯ ಕೆಲಸದ ಮಹಿಳೆಯನ್ನು (Housemaid) ಪ್ರಶ್ನಿಸಿದರೆ, ಚೆನ್ನಾಗಿಯೇ ಅಡುಗೆ ಮಾಡುತ್ತಿರುವುದಾಗಿ ಉತ್ತರ ಕೊಟ್ಟಿದ್ದಳು. ಯಾಕೆ ಹೀಗಾಗುತ್ತಿದೆ ಎಂದು ಮನೆಯಲ್ಲಿ ಯಾರಿಗೂ ಅರ್ಥವಾಗಿರಲಿಲ್ಲ.
ಆದರೆ ಆ ಮನೆಯವರೆಲ್ಲರಿಗೂ ಅನುಮಾನ ಕಾಡುತ್ತಲೇ ಇತ್ತು, ಏನೋ ನಡೆಯುತ್ತಿದೆ ಅನಿಸುತ್ತಿತ್ತು. ಇದೆ ಕಾರಣಕ್ಕೆ ಅಡುಗೆ ಮನೆಯಲ್ಲಿ ರಹಸ್ಯವಾಗಿ ಸೆಲ್ ಫೋನ್ ಕ್ಯಾಮೆರಾ ಅಳವಡಿಸಲಾಗಿತ್ತು. ಆಗ ಅಸಲಿ ವಿಷಯ ಬಯಲಾಗಿದೆ.
ಅಡುಗೆಯವಳು (Housemaid) ತನ್ನ ಮೂತ್ರವನ್ನು ಆಹಾರ ತಯಾರಿಸಲು ಬಳಸುತ್ತಾಳೆ (adding urine to food). ಅವಳು ತನ್ನ ಮೂತ್ರವನ್ನು ಅಡುಗೆಮನೆಯಲ್ಲಿನ ಬಟ್ಟಲಿನಲ್ಲಿ ಹಿಡಿದು ಅವಳು ಅಡುಗೆ ಮಾಡುವ ಆಹಾರದಲ್ಲಿ ಬಳಸುತ್ತಾಳೆ.
ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಶೇ.3ರಷ್ಟು ಡಿಎ ಹೆಚ್ಚಳ
ಈ ದೃಶ್ಯ ನೋಡಿ ಮನೆಯಲ್ಲಿದ್ದವರೆಲ್ಲಾ ಬೆಚ್ಚಿಬಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಮನೆಯ ಮಾಲೀಕರು, ಉದ್ಯಮಿ ರಿಪಬ್ಲಿಕ್ ಏರಿಯಾ ಪೊಲೀಸರಿಗೆ ದೂರು ನೀಡಿದ್ದಾರೆ.
ಆ ಕ್ರಮದಲ್ಲಿ ಮನೆಯವರು ಪೊಲೀಸರ ಮುಂದೆ ವಿಡಿಯೋವನ್ನು ಸಾಕ್ಷಿಯಾಗಿ ತೋರಿಸಿದ್ದಾರೆ. ಹಾಗಾಗಿ ಆಕೆಯನ್ನು ಬಂಧಿಸಲಾಯಿತು. ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ಆಕೆಯಿಂದ ಯಾವುದೇ ಉತ್ತರವಿಲ್ಲ. ಮೊದಲು ಒಪ್ಪದಿದ್ದಾಗ ರೆಕಾರ್ಡ್ ಮಾಡಿದ ವಿಡಿಯೋವನ್ನು ಪೊಲೀಸರು ಆಕೆಗೆ ತೋರಿಸಿದ್ದಾರೆ.
ನಂತರ ಪೊಲೀಸರು ಆಕೆಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ, ಮನೆಯ ಮಾಲೀಕರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
Watch Viral Video, Housemaid caught adding urine to food in Ghaziabad
गाजियाबाद, यूपी में रसोई के बर्तन में पेशाब करने का Video –
घरेलू सहायिका रीना गिरफ्तार है !! https://t.co/snT4sVWDHh pic.twitter.com/9FyU4nzSWG
— Sachin Gupta (@SachinGuptaUP) October 16, 2024