ಕಲುಷಿತ ನೀರಿನ ದುರಂತ, ಸಾವಿನ ಸಂಖ್ಯೆ 10ಕ್ಕೆ ಏರಿಕೆ! ಲ್ಯಾಬ್ ವರದಿ ಬಹಿರಂಗ

ಮಧ್ಯಪ್ರದೇಶದ ಇಂದೋರ್ ನಗರದ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ ಡಯೇರಿಯಾ ಹರಡಿದ್ದು, 10 ಮಂದಿ ಮೃತಪಟ್ಟಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ.

  • ಕಲುಷಿತ ನೀರು ಸೇವನೆಯಿಂದ ಡಯೇರಿಯಾ ಸಾವು
  • ಇಂದೋರ್ ದುರಂತದಲ್ಲಿ 10 ಮಂದಿ ಮೃತ್ಯು
  • ಕಲುಷಿತಗೊಳ್ಳಲು ನೀರಿನ ಲೀಕೆಜ್ ಕಾರಣ ಶಂಕೆ

Water Contamination: ದೇಶದಲ್ಲೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂದೋರ್ ನಲ್ಲಿ (Indore) ಕಲುಷಿತ ಕುಡಿಯುವ ನೀರಿನ ದುರಂತ ಜನರಲ್ಲಿ ಆತಂಕ ಹುಟ್ಟುಹಾಕಿದೆ. ಭಗೀರಥಪುರ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆ ಹಲವು ಕುಟುಂಬಗಳನ್ನು ದುಃಖದಲ್ಲಿ ಮುಳುಗಿಸಿದೆ.

ಕಲುಷಿತ ನೀರು ಸೇವಿಸಿದ (Drinking Water) ಪರಿಣಾಮ ಡಯೇರಿಯಾ ತೀವ್ರವಾಗಿ ಹರಡಿದ್ದು, ಇದುವರೆಗೆ 10 ಮಂದಿ ಮೃತಪಟ್ಟಿರುವುದನ್ನು ಪುಷ್ಯಮಿತ್ರ ಭಾರ್ಗವ (ಇಂದೋರ್ ಮೇಯರ್) ಖಚಿತಪಡಿಸಿದ್ದಾರೆ. ಇದೇ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲ್ಯಾಬ್ ವರದಿ ಏನು ಹೇಳುತ್ತದೆ?

ಪ್ರಭಾವಿತ ಪ್ರದೇಶದಿಂದ ಸಂಗ್ರಹಿಸಿದ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಲ್ಯಾಬ್ ವರದಿಯಲ್ಲಿ ನೀರು ಕಲುಷಿತವಾಗಿರುವುದು ದೃಢಪಟ್ಟಿದ್ದು, ಇದುವೇ ಅನಾರೋಗ್ಯ ಮತ್ತು ಸಾವುಗಳಿಗೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರು ಹೇಗೆ ಕಲುಷಿತವಾಯಿತು?

ಮುನ್ಸಿಪಲ್ ಅಧಿಕಾರಿಗಳ ಪ್ರಕಾರ, ಪೈಪ್‌ಲೈನ್ ಲೀಕೆಜ್‌ನಿಂದ ಮಲಿನ ನೀರು ಕುಡಿಯುವ ನೀರಿನ ಲೈನ್‌ಗೆ ಬೆರೆತಿರುವ ಸಾಧ್ಯತೆ ಇದೆ. ಪರಿಸ್ಥಿತಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಪೀಡಿತ ಪ್ರದೇಶದಲ್ಲಿ ಶುದ್ಧ ನೀರು ಸರಬರಾಜು ಮತ್ತು ನಿರಂತರ ವೈದ್ಯಕೀಯ ನಿಗಾ ಮುಂದುವರಿದಿದೆ.

ಸ್ಥಳೀಯರು ಆತಂಕ ಪಡಬಾರದೆಂದು ಅಧಿಕಾರಿಗಳು ಮನವಿ ಮಾಡಿದ್ದು, ಆರೋಗ್ಯ ಸಮಸ್ಯೆಗಳಿದ್ದರೆ ತಕ್ಷಣ ಆಸ್ಪತ್ರೆಗೆ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories