ಗಡ್ಡ ಬೋಳಿಸದ ಗಂಡ, ಮೈದುನನ ಜೊತೆ ಓಡಿಹೋದ ಮಹಿಳೆ

ಗಡ್ಡ ಬೋಳಿಸಲು ಮಹಿಳೆ ಪದೇ ಪದೇ ಹೇಳುತ್ತಿದ್ದರೂ, ಆಕೆಯ ಪತಿ ಅದಕ್ಕೆ ಒಪ್ಪಲಿಲ್ಲ. ಇದರಿಂದ ಆ ಮಹಿಳೆ ತನ್ನ ಮೈದುನನ ಜೊತೆಗೆ ಓಡಿಹೋಗಿದ್ದಾಳೆ.

ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ ತನ್ನ ಗಂಡನ “ಗಡ್ಡ” ದಿಂದಾಗಿ ಗಂಡನನ್ನೇ ಬಿಟ್ಟು ಬೇರೊಬ್ಬನೊಂದಿಗೆ ಪರಾರಿಯಾಗಿದ್ದಾಳೆ.

ಗಡ್ಡ ಬೋಳಿಸಲು ಮಹಿಳೆ ಪದೇ ಪದೇ ಹೇಳುತ್ತಿದ್ದರೂ, ಆಕೆಯ ಪತಿ ಅದಕ್ಕೆ ಒಪ್ಪಲಿಲ್ಲ. ಇದರಿಂದ ಆ ಮಹಿಳೆ ತನ್ನ ಮೈದುನನ ಜೊತೆಗೆ ಓಡಿಹೋಗಿದ್ದಾಳೆ. ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಶಕೀರ್ ಎಂಬ ವ್ಯಕ್ತಿ 7 ತಿಂಗಳ ಹಿಂದೆ ಅರ್ಷಿ ಎಂಬ ಯುವತಿಯನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದ ಅವನ ಹೆಂಡತಿ ಗಡ್ಡ ಬೋಳಿಸಲು ಒತ್ತಡ ಹಾಕುತ್ತಿದ್ದಾಳೆ. “ನಾನು ಕುಟುಂಬದ ಒತ್ತಡದಿಂದ ನಿನ್ನನ್ನು ಮದುವೆಯಾದೆ, ನೀನು ಗಡ್ಡ ಬೋಳಿಸಿಕೊಂಡರೆ ಮಾತ್ರ ನಿನ್ನೊಂದಿಗೆ ಸಂಸಾರ ಮಾಡುತ್ತೇನೆ” ಎಂದು ಅರ್ಷಿ ಹೇಳಿದ್ದಾಗಿ ಶಕೀರ್ ಆರೋಪಿಸಿದ್ದಾರೆ. ಈ ಬಗ್ಗೆ ಶಕೀರ್ ಅರ್ಷಿಯ ಕುಟುಂಬಕ್ಕೆ ಕೂಡ ಈ ಬಗ್ಗೆ ಹೇಳಿದ್ದ.

ಇದನ್ನೂ ಓದಿ: ಪಾಕಿಸ್ತಾನಿ ನಟ ನಟಿಯರು ಮತ್ತು ಸೆಲೆಬ್ರಿಟಿಗಳಿಗೆ ಶಾಕ್ ಕೊಟ್ಟ ಭಾರತ

ಅರ್ಷಿ ಶಕೀರ್ ಅವರ ಕಿರಿಯ ಸಹೋದರನೊಂದಿಗೆ ಸಂಬಂಧವನ್ನು ಬೆಳೆಸಿದ್ದಳು. ಕೊನೆಗೆ ಫೆಬ್ರವರಿ 3 ರಂದು ಇಬ್ಬರೂ ಮನೆಯಿಂದ ಓಡಿಹೋಗಿದ್ದಾರೆ. ಈ ಬೆಳವಣಿಗೆಯಿಂದ ಶಕೀರ್ ಮತ್ತು ಅವನ ಕುಟುಂಬ ಆಘಾತಕ್ಕೊಳಗಾಯಿತು. ಕುಟುಂಬಕ್ಕೆ ಅವಮಾನವಾಗುತ್ತದೆ ಎಂದು ಹೆದರಿದ ಶಕೀರ್, ತನ್ನ ಸಂಬಂಧಿಕರ ಸಹಾಯದಿಂದ ಅವರನ್ನು ಹುಡುಕಲು ಪ್ರಯತ್ನಿಸಿದ, ಆದರೆ ಅವರಿಬ್ಬರೂ ಪತ್ತೆಯಾಗಲಿಲ್ಲ.

ಕೊನೆಗೆ, ಶಕೀರ್ ತನ್ನ ಹೆಂಡತಿ ಮತ್ತು ಸಹೋದರನ ವಿರುದ್ಧ ದೂರು ದಾಖಲಿಸಿದ್ದಾನೆ. ಅರ್ಷಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ ಎಂದು ಕುಟುಂಬ ಹೇಳಿದೆ.

Woman elopes with brother-in-law over husband’s beard

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories