ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಕೊಂದ ಸೊಸೆ! ನಂತರ ಮಾಡಿದ್ದು ಖತರ್ನಾಕ್ ಪ್ಲಾನ್

ಉತ್ತರ ಪ್ರದೇಶದಲ್ಲಿ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಸೊಸೆ ಅತ್ತೆಯನ್ನು ಉಸಿರುಗಟ್ಟಿಸಿ ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಸಾವು ಎಂದು ನಂಬಿಸಲು ಯತ್ನಿಸಿದರೂ ಪೊಲೀಸರ ತನಿಖೆಯಲ್ಲಿ ನಿಜ ಹೊರಬಂದಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಒಂದು ಗ್ರಾಮದಲ್ಲಿ ಕುಟುಂಬವನ್ನು ನಡುಗಿಸುವಂತಹ ಘಟನೆ ನಡೆದಿದೆ. ಪ್ರಿಯಕರನ ಜೊತೆ ಮಧ್ಯರಾತ್ರಿ ಇದ್ದ ಸೊಸೆಯನ್ನು ಅತ್ತೆ ಕಂಡ ಹಿನ್ನೆಲೆಯಲ್ಲಿ ಆಕೆಯನ್ನು ಉಸಿರುಗಟ್ಟಿಸಿ ಕೊಂದ ಪ್ರಕರಣ ಬೆಳಕಿಗೆ ಬಂದಿದೆ.

ಭಂಕರ್‌ಪುರ ಬಸೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್ 3ರ ರಾತ್ರಿ ಸೊಸೆಯ ಮನೆಗೆ ಆಕೆಯ ಪ್ರಿಯಕರ ಆದಿಲ್ ಬಂದಿದ್ದಾನೆ. ಆ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಇದ್ದುದನ್ನು ಅತ್ತೆ ಗಮನಿಸಿದ್ದಾಳೆ. ಈ ಘಟನೆ ಹೊರಬಂದರೆ ಸಮಸ್ಯೆಯಾಗಬಹುದು ಎಂಬ ಭಯದಿಂದ ಇಬ್ಬರೂ ಸೇರಿ ಅತ್ತೆಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೃದಯಾಘಾತ ಎಂದು ನಂಬಿಸಲು ಯತ್ನ

ಅತ್ತೆಯನ್ನು ದಿಂಬಿನಿಂದ ಒತ್ತಿ ಉಸಿರುಗಟ್ಟಿಸಿ ಕೊಂದ ಬಳಿಕ, ಸೊಸೆ ಪರಿಸ್ಥಿತಿಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾಳೆ. ಬೆಳಗಿನ ಜಾವ ಸುಮಾರು 3 ಗಂಟೆಗೆ ತನ್ನ ಪತಿಗೆ ಕರೆ ಮಾಡಿ ಅತ್ತೆಗೆ ಹೃದಯಾಘಾತ ಬಂದಿದೆ ಎಂದು ಹೇಳಿದ್ದಾಳೆ.

ಕುಟುಂಬದವರಿಗೂ ಹೃದಯಾಘಾತದಿಂದಲೇ ಸಾವು ಸಂಭವಿಸಿದೆ ಎಂದು ನಂಬಿಸಲಾಗಿದೆ. ನಂತರ ವೃದ್ಧೆಯ ಅಂತ್ಯಕ್ರಿಯೆಯನ್ನೂ ನಡೆಸಿ ಮಣ್ಣಿನಡಿಗೆ ಇಡಲಾಗಿತ್ತು.

ಅನುಮಾನದಿಂದ ಸತ್ಯ ಬಹಿರಂಗ

ಆದರೆ ಸೊಸೆಯ ವರ್ತನೆ ಬಗ್ಗೆ ಮರಣಹೊಂದಿದ ಮಹಿಳೆಯ ಪತಿ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿಯ ಅಕಸ್ಮಾತ್ ಸಾವು ಬಗ್ಗೆ ಸಂಶಯಗೊಂಡ ಅವರು ಪೊಲೀಸರಿಗೆ ದೂರು ನೀಡಿದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮೃತದೇಹವನ್ನು ಮರುತೆಗೆಯಿಸಿ ಪೋಸ್ಟ್‌ಮಾರ್ಟಂ ನಡೆಸಿದಾಗ ವೃದ್ಧೆಯ ಕುತ್ತಿಗೆ ಮುರಿದಿರುವುದು ಪತ್ತೆಯಾಯಿತು. ಈ ವರದಿಯಿಂದ ಪ್ರಕರಣ ಸಂಪೂರ್ಣವಾಗಿ ತಿರುವು ಪಡೆದುಕೊಂಡಿತು.

ಸೊಸೆ ಮತ್ತು ಪ್ರಿಯಕರ ಬಂಧನ

ಪೋಲೀಸರು ಸೊಸೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬಹಿರಂಗವಾಯಿತು. ಆಕೆ ತನ್ನ ಪ್ರಿಯಕರ ಆದಿಲ್ ಜೊತೆಗೆ ಸೇರಿ ಅತ್ತೆಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories