Ants: ನಿಮ್ಮ ಮನೆಯಲ್ಲಿ ಸಾಲು ಸಾಲು ಇರುವೆಗಳ ರಾಶಿ ಕಾಣಿಸಿಕೊಳ್ಳುತ್ತಿದ್ದೀಯಾ? ಹಾಗಾದ್ರೆ ಈ ಒಂದು ಅದೃಷ್ಟ ನಿಮಗೆ ಒಲಿದಿದೆ ಎಂದರ್ಥ!
Ants: ಯಾವ ರೀತಿಯಾದಂತಹ ಇರುವೆಗಳು ಕಾಣಿಸಿಕೊಂಡರೆ ಹೆಚ್ಚಿನ ಅದೃಷ್ಟ? ಯಾವ ರೀತಿಯ ಇರುವೆಗಳು ಅಶುಭ ಸೂಚನೆಯನ್ನು ತೋರಿಸುತ್ತವೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ
Ants: ಪ್ರತಿಯೊಬ್ಬರ ಮನೆಯಲ್ಲಿಯೂ ಒಮ್ಮೆಯಾದರೂ ಇರುವೆಗಳು ಕಾಣಿಸಿಕೊಂಡಿರುತ್ತದೆ. ಯಾವುದಾದರೂ ಸಣ್ಣ ಸಕ್ಕರೆ ಚೂರು ಕಂಡರೆ ಸಾಕು ಅಲ್ಲಿ ಇರುವೆಗಳ ರಾಶಿಯೇ ಕಾಣಬಹುದು. ಹೀಗಾಗಿ ಕವಿಗಳು ಇರುವೆ ನೀನೇಕೆ ಎಲ್ಲಾ ಕಡೆ ಇರುವೆ ಎಂದು ಇರುವೆಗಳನ್ನು ಕೂಡ ಹಾಡಿ ವರ್ಣಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಗರುಡ ಪುರಾಣದಲ್ಲಿ ಇರುವೆಗಳನ್ನು ಬಹಳ ವಿಶೇಷವಾದಂತಹ ಕೀಟ ಎಂದು ಪರಿಗಣಿಸಲಾಗಿದ್ದು, ಇದು ಮನುಷ್ಯನ ಶುಭ ಹಾಗು ಅಶುಭ ಫಲಗಳನ್ನು ತಿಳಿಸುವ ಸಂಕೇತ ಎಂದು ಹೇಳಲಾಗಿದೆ.
ಹಾಗಾದ್ರೆ ಯಾವ ರೀತಿಯಾದಂತಹ ಇರುವೆಗಳು ಕಾಣಿಸಿಕೊಂಡರೆ ಹೆಚ್ಚಿನ ಅದೃಷ್ಟ? ಯಾವ ರೀತಿಯ ಇರುವೆಗಳು ಅಶುಭ ಸೂಚನೆಯನ್ನು ತೋರಿಸುತ್ತವೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸಾಮಾನ್ಯವಾಗಿ ಇರುವೆಗಳಲ್ಲಿ ಎರಡು ವಿಧಗಳನ್ನು ನಾವು ಕಾಣಬಹುದು ಒಂದು ಕೆಂಪು ಇರುವೆ ಹಾಗೂ ಮತ್ತೊಂದು ಕಪ್ಪು ಇರುವೆಗಳು.
ಕೆಂಪು ಇರುವೆಯನ್ನು ಅಶುಭದ ಸೂಚನೆ ಎಂದು ಪರಿಗಣಿಸಲಾಗಿದೆ. ಇದು ಒಮ್ಮೆ ಮನುಷ್ಯನ ಮೇಲೆ ಕುಳಿತರೆ ಸಾಕು ಕಚ್ಚಿ ತಿನ್ನುವಷ್ಟು ನೋವನ್ನು ನೀಡಿ ಹೋಗುತ್ತದೆ. ಇದರಿಂದಾಗಿ ಈ ರೀತಿಯಾದಂತಹ ಕೆಂಪು ಇರುವೆಗಳನ್ನು ಅನಾಧಿಕಾಲದಿಂದಲೂ ಧರಿದ್ರ ಎಂದು ಪರಿಗಣಿಸಲಾಗಿದೆ. ಕಾಣಿಸಿಕೊಂಡರೆ ಅದು ಅಶುಭ ಫಲವನ್ನು ಸೂಚಿಸುತ್ತದೆ ಹಾಗೂ ನೀವು ಮಾಡುವಂತಹ ಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು ಎಂಬುದರ ಪರಿಣಾಮವಾಗಿರುತ್ತದೆ.
ಇನ್ನು ಎರಡನೆಯದಾಗಿ ಕಪ್ಪು ಇರುವೆಗಳು…. ಹೌದು ಗೆಳೆಯರೆ ಮನುಷ್ಯನಿಗೆ ಯಾವುದೇ ರೀತಿಯಾದಂತಹ ಹಾನಿಯನ್ನಾಗಲಿ ಅಥವಾ ತೊಂದರೆಯಾಗಲಿ ನೀಡದೆ ತಾನಾಯಿತು ತನ್ನ ಪಾಡಾಯಿತು ಎಂದು ಶ್ರಮದಿಂದ ಆಹಾರ ಅರಸುತ್ತ ಓಡಾಡಿಕೊಂಡು ಇರುವಂತಹ ಇರುವೆಗಳು.
ಇಂತಹ ಕಪ್ಪು ಇರುವೆಗಳು ನಿಮ್ಮ ಬದುಕಿನಲ್ಲಿ ಎದುರಾಗುತ್ತಿರುವಂತಹ ಒಳ್ಳೆಯ ದಿನಗಳ ಸಂಕೇತವಾಗಿರಲಿದೆ. ನೀವು ಎಷ್ಟೇ ಬಾರಿ ಇದನ್ನು ದೂರ ತಳ್ಳಿಬಿಟ್ಟರು, ಕೂಡ ಅದು ಪದೇ ಪದೇ ನಿಮ್ಮ ಮನೆಯ ಆವರಣದಲ್ಲಿಯೇ ಅಡ್ಡಾಡುತ್ತಿದ್ದರೆ ನಿಮಗೆ ಹೆಚ್ಚಿನ ಅದೃಷ್ಟ ಒದಗಿ ಬರಲಿದೆ ಹಾಗೂ ನೀವು ಮಾಡುವಂತಹ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ ಎಂದರ್ಥ.
ಹೀಗಾಗಿ ಯಾವುದೇ ಕಾರಣಕ್ಕೂ ಕಪ್ಪು ಇರುವೆಗಳು ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಕೊಲ್ಲದೆ ನಿಧಾನವಾಗಿ ಪೊರಕೆಯಿಂದ ಗುಡಿಸಿ ಮರದ ಬುಡದ ಕೆಳಗೆ ಬಿಟ್ಟುಬಿಡಿ. ನಿಮ್ಮ ಮನೆಯ ಆವರಣಗಳಲ್ಲಿ ಹೆಚ್ಚಾಗಿ ಯಾವ ಇರುವೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.
Are you seeing Black Ants in your house? It means you are lucky
Follow us On
Google News |