Viral Video: ಮಗುವನ್ನು ರಕ್ಷಿಸಲು ನಾಯಿಗಳು ಹಾವಿನೊಂದಿಗೆ ಕಾದಾಡಿದ ವೈರಲ್ ವಿಡಿಯೋ!
Viral Video: ತಳ್ಳುಗಾಡಿಯಲ್ಲಿ ಮಗು ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಹಿಂದೆ ಒಂದು ಹಾವು ಬರುತ್ತದೆ. ನಾಯಿಗಳು ಮಗುವನ್ನು ಹಾವಿನಿಂದ ರಕ್ಷಿಸಲು ಕಾದಾಡುತ್ತವೆ, ಸದ್ಯ ಈ ವಿಡಿಯೋ ವೈರಲ್ ಆಗಿದೆ.
Viral Video: ತಳ್ಳುಗಾಡಿಯಲ್ಲಿ ಮಗು ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಹಿಂದೆ ಒಂದು ಹಾವು ಬರುತ್ತದೆ. ನಾಯಿಗಳು ಮಗುವನ್ನು ಹಾವಿನಿಂದ ರಕ್ಷಿಸಲು ಕಾದಾಡುತ್ತವೆ, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ನಾಯಿಗಳು ಮಗುವನ್ನು ಉಳಿಸಲು ಹಾವಿನೊಂದಿಗೆ ಹೋರಾಡುತ್ತಿರುವುದನ್ನು ಕಾಣಬಹುದು.
ಔಟ್ ಆಫ್ ಕಾಂಟೆಕ್ಸ್ಟ್ ಹ್ಯೂಮನ್ ರೇಸ್ ಹೆಸರಿನ ಪುಟದಿಂದ ಈ ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಅದರ ಶೀರ್ಷಿಕೆಯು, ‘ಟಾಸ್ಕ್ ಯಶಸ್ವಿಯಾಗಿ ವಿಫಲವಾಗಿದೆ!’ ಎಂದು ನೀಡಲಾಗಿದೆ. ಈ ವೀಡಿಯೊ 07 ಸೆಕೆಂಡುಗಳು ಇದ್ದು, ಇದನ್ನು 3.8 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದರೊಂದಿಗೆ ಜನ ಈ ಬಗ್ಗೆ ಸಾಕಷ್ಟು ಕಾಮೆಂಟ್ ಕೂಡ ಮಾಡಿದ್ದಾರೆ.
ತಳ್ಳುಗಾಡಿಯಲ್ಲಿ ಮಗು ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಮಗುವಿನ ಹಿಂದಿನಿಂದ ಒಂದು ಹಾವು ಬರುತ್ತದೆ. ಅದನ್ನು ಗಮನಿಸಿದ ನಾಯಿಗಳು ಮಗುವನ್ನು ಹಾವಿನಿಂದ ರಕ್ಷಿಸಲು ಪ್ರಯತ್ನಿಸುತ್ತವೆ.
ಸ್ಥಳದಲ್ಲೇ ಮೂರು ನಾಯಿಗಳು ಹಾವಿನೊಂದಿಗೆ ಕಾದಾಡುತ್ತಿರುವುದು ಕಂಡು ಬರುತ್ತದೆ. ಅಷ್ಟರಲ್ಲಿ ನಾಯಿಯೊಂದು ಹಾವನ್ನು ಬಾಯಲ್ಲಿ ಹಿಡಿದು ಎಸೆದಿದೆ. ವಿಡಿಯೋ ನೋಡಿದ್ರೆ ರೆಕಾರ್ಡ್ ಮಾಡುತ್ತಿದ್ದವರ ಬಳಿ ಹಾವು ಬಿದ್ದಿರುವುದು ಗೊತ್ತಾಗಿದೆ. ಆದರೆ, ಹಾವು ಎಲ್ಲಿಗೆ ಹೋಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ಈ ವೀಡಿಯೊ ಕ್ಲಿಪ್ ಅನ್ನು ಇಂಟರ್ನೆಟ್ ಬಳಕೆದಾರರು ಬಹಳಷ್ಟು ಹಂಚಿಕೊಂಡಿದ್ದಾರೆ. ಈ ಬಗ್ಗೆ ಜನ ಸಾಕಷ್ಟು ಕಾಮೆಂಟ್ ಕೂಡ ಮಾಡಿದ್ದಾರೆ. ಬಹುತೇಕ ಮಂದಿ ನಾಯಿಗಳ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ನಾಯಿಗಳು ನಿಜವಾಗಿಯೂ ತುಂಬಾ ಪ್ರಾಮಾಣಿಕವಾಗಿವೆ ಎಂದು ಬಳಕೆದಾರರು ಹೊಗಳಿದ್ದಾರೆ.
ನಾಯಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ರಕ್ಷಿಸಿವೆ ಎಂದು ಕೆಲವರು ಹೇಳಿದರು. ಇನ್ನು ಕೆಲವರು, ಮಗುವನ್ನು ಒಂಟಿಯಾಗಿ ಬಿಟ್ಟಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
Dogs attempting to fight with snake to save a baby viral video
— Out of Context Human Race (@NoContextHumans) April 23, 2023
Follow us On
Google News |