ಸೂರ್ಯಾಸ್ತದ ಬಳಿಕ ಇದನ್ನು ಎಂದಿಗೂ ಮಾಡಬೇಡಿ ! ಎಚ್ಚರ

Dont do These After Susnset । Kannada Corner

ಸೂರ್ಯಾಸ್ತದ ಬಳಿಕ ಇದನ್ನು ಎಂದಿಗೂ ಮಾಡಬೇಡಿ ! ಎಚ್ಚರ

  • ಆಚಾರ ವಿಚಾರ ಎರಡಕ್ಕೂ ಅದರದ್ದೇ ಆದ ಕಾರಣಗಳು ಇವೆ.
  • ದಿನನಿತ್ಯದ ನಮ್ಮ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳು ಇವೆ.
  • ಕೆಲವೊಮ್ಮೆ ನಂಬಲಸಾಧ್ಯವಾದರೂ ಅದುವೇ ಸತ್ಯ.

ಕನ್ನಡ ಕಾರ್ನರ್ : ಇವುಗಳನ್ನು ನೀವು ಅನುಸರಿಸುತ್ತಿರೋ ಇಲ್ಲವೋ ಆದರೆ ಹಿಂದೂ ಸಂಸ್ಕೃತಿ , ಜೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕವಾಗಿ ಹತ್ತಿರವಾಗಿರುವ ಕೆಲವು ವಿಷಯಗಳನ್ನು ಸೂರ್ಯಾಸ್ತದ ನಂತರ ಮಾಡದೇ ಇರುವುದು ಒಳಿತು.

ಹಿಂದೂ ಸಂಸ್ಕೃತಿ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲವು ವಿಷಯಗಳನ್ನು ಹಾಗೂ ನಂಬಿಕೆಗಳನ್ನು ನಿಮ್ಮ ಮುಂದೆ ಇಡಲಿದ್ದೀವೆ.  ಸೂರ್ಯಾಸ್ತದ ನಂತರ ದ ಕೆಲವು ಆಚರಣೆಗಳು ನಂಬಿಕೆಗಳು ಇಲ್ಲಿವೆ.

ಸೂರ್ಯಾಸ್ತದ ಸಮಯದಲ್ಲಿ ಊಟಮಾಡಬಾರದು .

ಗಾಬರಿ ಆಗಬೇಡಿ , ಏನಪ್ಪಾ , ಇದು ಸೂರ್ಯಾಸ್ತದ ನಂತರ ಊಟ ಮಾಡಬಾರದು ಅಂದರೆ ರಾತ್ರಿ ಉಪವಾಸ ಇರಬೇಕಾ ? ಇಲ್ಲ , ಇದನ್ನು ನಾವು ವೈಜ್ಞಾನಿಕವಾಗಿ ನೋಡಿದರೆ ,

ಸೂರ್ಯಾಸ್ತದ ಬಳಿಕ ಇದನ್ನು ಎಂದಿಗೂ ಮಾಡಬೇಡಿ ! ಎಚ್ಚರ - Kannada News

ವೈದ್ಯರು ಸಲಹೆ ನಿಡುವುದಿಲ್ಲವೇ , ನಿದ್ರಿಸುವ 3-4 ಗಂಟೆಗಳ ಮುಂಚಿತ ಊಟ ಮಾಡಬೇಕೆಂದು. ಇಲ್ಲಿ ಗಮನಿಸ ಬೇಕಾದುದು ಅರೋಗ್ಯ ಹಾಗೂ ಊಟದ ಸಮಯ ನಿರ್ದಿಷ್ಟವಾಗಿರಬೇಕೆಂದು. ಇದು ಪದ್ದತಿಯಾಗಿ ರೂಡಿಯಾಗಿದೆ.

ಸೂರ್ಯಾಸ್ತದ ಬಳಿಕ ಮಲಗಬಾರದು.

ಮೇಲಿನ ವಿಷಯವನ್ನು ನೋಡಿದಾಗ , ಏಕೆ ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಎಂದು ಶಾಸ್ತ್ರವು ಹೇಳುತ್ತದೆ ಎಂದು ಅರ್ಥವಾಗಿರಬೇಕಲ್ಲವೇ , ಆಗಲಿಲ್ಲ ಎಂದರೆ ಹೇಳ್ತಿವಿ ಕೇಳಿ.

ಮೊದಲು ಹೇಳಿದಂತೆ ಸೂರ್ಯಾಸ್ತದ ಸಮಯದಲ್ಲಿ ಊಟ ಮಾಡಬಾರದು ಎಂದರೆ ಹಿಂದೆ ನಮ್ಮ ಹಿರಿಯರು ಸೂರ್ಯಾಸ್ತದ ಮೊದಲೇ ಊಟ ಮಾಡುತ್ತಿದ್ದರು , ಊಟ   ಮಾಡಿದ ತಕ್ಷಣ  ಮಲಗುವುದು ಶ್ರೇಯಸ್ಸಲ್ಲ ಎನ್ನುವ ನಂಭಿಕೆ ಇಟ್ಟಿದ್ದರು.

ಇನ್ನು ಇದನ್ನೇ ವೈಜ್ಞಾನಿಕವಾಗಿ ನೋಡಿದರೆ ಊಟ ಮಾಡಿದ ತಕ್ಷಣ ಮಲಗಿದರೆ ತಿಂದದ್ದು ಜೀರ್ಣವಾಗುವುದಿಲ್ಲ. ಅಜೀರ್ಣ ಸಮಸ್ಯೆ ಎದುರಿಸಬೇಕಾಗುತ್ತದೆ.

ಆಯುರ್ವೇದದ ತತ್ವಗಳ ಪ್ರಕಾರ, ಮಾನವ ದೇಹವು ಪ್ರಕೃತಿಯಚಕ್ರ ,ಸೂರ್ಯನ ಬೆಳಕನ್ನು ಗ್ರಹಿಸುವ ಶಕ್ತಿಯನ್ನು ಬಹಳಷ್ಟು ಹೊಂದಿದೆ. ಇದು ಸೂರ್ಯಾಸ್ತದ ನಂತರ ಒಂದು ಗಂಟೆ ಪ್ರಾರಂಭದ ಅವಧಿಯನ್ನು ಗುರುತಿಸುತ್ತದೆ.Dont do These After Susnset-Kannada Corner-its Kannada

ಸೂರ್ಯಾಸ್ತದ ನಂತರ ಉಗುರನ್ನು ಕತ್ತರಿಸಬೇಡಿ .

ನಮ್ಮ ಹಿರಿಯರು ಹೇಳಿಕೊಟ್ಟ ಪಾಠದಂತೆ ಸುರ್ಯಾಸ್ತದಲ್ಲಿ ಉಗುರನ್ನು ಕತ್ತರಿಸುವುದು ಅಪರಾಧ  ಎಂದು ನಾವು ನಬಿದ್ದೇವೆ , ಇದನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ.

ಈ ವಿಚಾರಕ್ಕೆ ತಕ್ಕಂತೆ ವೈಜ್ಞಾನಿಕ ಕಾರಣವು ಇದೇ , ಹಿಂದಿನ ಕಾಲದಲ್ಲಿ ವಿದ್ಯುತ್ ನ   ಸೌಲಭ್ಯ ಇರಲಿಲ್ಲ , ಯಾವುದೇ ಕೆಲಸ ಕಾರ್ಯಗಳನ್ನು ಅವರು   ಸೂರ್ಯಾಸ್ತದ ಮುಂಚಿತವಾಗಿಯೇ ಮಾಡುತ್ತಿದ್ದರು.

ಕಾರಣ ಆ ನಂತರ ಕತ್ತಲೆಯಲ್ಲಿ ಆ ಕಾರ್ಯ ಮಾಡಲಾಗುವುದಿಲ್ಲ ಎಂದು.   ಈ ವಿಚಾರವು ಅದಕ್ಕೆ ಸಂಬಂದ ಪಟ್ಟಿರುವುದೇ ಆಗಿದೆ, ಸುರ್ಯಾಸ್ತದ ನಂತರ ಕತ್ತಲೆ ಆವರಿಸುತ್ತದೆ ಉಗುರನ್ನು ಕತ್ತರಿಸಲು ಹೋಗಿ ಗಾಯವಾದೀತು ಎಂಬುದೇ ಇದರ ಮುಖ್ಯ ಕಾರಣ.ಸೂರ್ಯಾಸ್ತದ ಬಳಿಕ ಇದನ್ನು ಎಂದಿಗೂ ಮಾಡಬೇಡಿ ! ಎಚ್ಚರ-its Kannada 1

ಸುರ್ಯಾಸ್ತ ಆದ ಮೇಲೆ ಕಸ ಗುಡಿಸಬೇಡಿ.

ಮೇಲಿನ ವಿಚಾರಗಳನ್ನು ತಿಳಿದ ಮೇಲೆ , ಇದಕ್ಕೆ ಕಾರಣ ಸುಲಭವಾಗಿ ತಿಳಿಯಬಹುದು , ಹೌದು ನಿಮ್ಮ ಊಹೆ ನಿಜ , ನಮ್ಮ ಹಿರಿಕರು ಸೂರ್ಯಾಸ್ತದ ನಂತರ ಕಸ ಗುಡಿಸುತ್ತಿರಲಿಲ್ಲ .

ಕಾರಣ ಕತ್ತಲು ! ಕಾಣದ ಕಾರಣ. ಅದನ್ನೇ ನಾವು ಸಹ ಅನುಸರಿಸುತ್ತಾ ಬಂದೆವು. ಇದರ ವೈಜ್ಞಾನಿಕ ವಿಚಾರ ನೋಡಿದರೆ , ಮಲಗುವ ಮುನ್ನ ನಾವು ಗಸಗುಡಿಸಿದ್ದೇ ಆದರೆ ಆ ದೂಳು ಮನೆಯಲ್ಲಿಯೇ ಇರುತ್ತದೆ.

ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಲಗಿದಾಗ ನಾವು ಹೆಚ್ಚು ಉಸಿರಾಡುತ್ತೇವೆ , ಈ ದೂಳು ಪರಿಣಾಮಬೀರುತ್ತದೆ.////

WebTitle : ಸೂರ್ಯಾಸ್ತದ ಬಳಿಕ ಇದನ್ನು ಎಂದಿಗೂ ಮಾಡಬೇಡಿ ! ಎಚ್ಚರ – Dont do These After Susnset । Kannada Corner

>>> ಕ್ಲಿಕ್ಕಿಸಿ : ಕನ್ನಡ ನ್ಯೂಸ್ । Kannada CornerLatest Kannada News 

Follow us On

FaceBook Google News

Read More News Today