ಪ್ರಿಂಟೆಡ್ ಪೆಟ್ ಮೆಮೊರೀಸ್ ಎಂಬ ಕಂಪನಿ ನಡೆಸಿದ ಸಂಶೋಧನೆಯಿಂದ ಟಕ್ಕರ್ (Golden Retriever Dog Tucker) ವಿಶ್ವದ ಸಾಮಾಜಿಕ ಮಾಧ್ಯಮಗಳಲ್ಲಿ ನಂಬರ್ ಒನ್ ಪ್ರಭಾವಿ ಎಂದು ಬಹಿರಂಗಪಡಿಸಿದೆ.
ಇತ್ತೀಚಿನ ದಿನಗಳಲ್ಲಿ, ಜನರು ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಹೆಚ್ಚು ಗಳಿಸುತ್ತಿದ್ದಾರೆ. YouTube, Instagram, Tiktok ಇತ್ಯಾದಿಗಳು ಪ್ರಪಂಚದಾದ್ಯಂತ ಅನೇಕ ಹೊಸ ಸ್ಟಾರ್‌ಗಳನ್ನು ನೀಡಿವೆ.
ಭಾರತದಲ್ಲಿಯೂ ಹಳ್ಳಿ ಜನರು ಸಹ ರೀಲುಗಳನ್ನು ಮಾಡಿ ಸಂಪಾದಿಸಿ ಫೇಮಸ್ ಆಗುತ್ತಿದ್ದಾರೆ ಎಂದರೆ ಯಾರೂ ಬೇಗ ಊಹಿಸಲೂ ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ದುಡ್ಡು ಗಳಿಸುವ ಬಹಳಷ್ಟು ಜನರನ್ನು ನೀವು ನೋಡಿರಬೇಕು,
ಆದರೆ ಸೋಶಿಯಲ್ ಮೀಡಿಯಾ ಮೂಲಕ ವರ್ಷದಲ್ಲಿ ಕೋಟಿಗಟ್ಟಲೆ ಸಂಪಾದಿಸುವ ನಾಯಿಯನ್ನು ನೀವು ನೋಡಿದ್ದೀರಾ? ಇದನ್ನು ಕೇಳಿ ನೀವು ಖಂಡಿತ ಶಾಕ್ ಆಗಿರಬೇಕು. ಹೌದು, ಸ್ನೇಹಿತರೆ ಗೋಲ್ಡನ್ ರಿಟ್ರೈವರ್ ನಾಯಿ ಒಂದರ ವಾರ್ಷಿಕ ಆದಾಯ ಎಂಟು ಕೋಟಿ 28 ಲಕ್ಷ ರೂಪಾಯಿ ಎಂದರೆ ನೀವು ನಂಬಲೇ ಬೇಕು.
ಪ್ರಿಂಟೆಡ್ ಪೆಟ್ ಮೆಮೊರೀಸ್ ಎಂಬ ಕಂಪನಿ ನಡೆಸಿದ ಸಂಶೋಧನೆಯಿಂದ ಟಕ್ಕರ್ ಎಂಬ ಸಾಕು ನಾಯಿ ವಿಶ್ವದ ಸಾಮಾಜಿಕ ಮಾಧ್ಯಮಗಳಲ್ಲಿ ನಂಬರ್ ಒನ್ ಪ್ರಭಾವಿ ಎಂದು ಬಹಿರಂಗಪಡಿಸಿದೆ. ಎರಡನೆ ವಯಸ್ಸಿನಿಂದಲೇ ಟಕ್ಕರ್ ಪ್ರಾಯೋಜಿತ ಜಾಹೀರಾತುಗಳ ಮೂಲಕ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದೆ.
ಟಕ್ಕರ್ ನ ಮಾಲೀಕರು, 30 ನಿಮಿಷಗಳ ವಿಡಿಯೋಗೆ ಯೂಟ್ಯೂಬ್ 30 ಲಕ್ಷದಿಂದ 50 ಲಕ್ಷ ರೂಪಾಯಿ ಪಾವತಿಸುತ್ತದೆ ಎಂದು ಅವರು ‘ನ್ಯೂಯಾರ್ಕ್ ಪೋಸ್ಟ್’ಗೆ ತಿಳಿಸಿದ್ದಾರೆ.
Instagram ಮೂಲಕ, ಅವರು ಮೂರರಿಂದ ಎಂಟು ಸ್ಟೋರಿಗಳಿಗೆ 16 ಲಕ್ಷ ರೂ. ಗಳಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಅವರು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಕೋಟಿಗಳನ್ನು ಗಳಿಸುತ್ತಾರೆ. ನಾಯಿಯ ಮಾಲೀಕರು ಒಂದು ವರ್ಷದಲ್ಲಿ ಒಟ್ಟು ಎಂಟು ಕೋಟಿಗೂ ಹೆಚ್ಚು ಗಳಿಸುತ್ತಾರೆ.
ಈ ನಾಯಿಯ ಸಂಪಾದನೆ ಈ ಮಟ್ಟಕ್ಕೆ ಬೆಳೆದ ಕಾರಣ ಮೊದಲು ಕೆಲಸ ಮಾಡುತ್ತಿದ್ದ ಅದರ ಮಾಲಿಕರು ಕೆಲಸ ತೊರೆದು ಕೇವಲ ಈ ನಾಯಿಯ ಸ್ಟೋರಿ, ರೀಲ್ಸ್ ಮಾಡುತ್ತಿದ್ದಾರೆ, ಈಗೆ ಟಕ್ಕರ್‌ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ಗಂಡ ಹೆಂಡತಿ ಇಬ್ಬರು ತಮ್ಮ ಕೆಲಸವನ್ನು ತೊರೆದು ಈಗ ಬಂಪರ್ ಗಳಿಕೆ ಮಾಡುತ್ತಿದ್ದಾರೆ.
ಟಕ್ಕರ್ ಗೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸುಮಾರು 25 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ಪೈಕಿ ಟಿಕ್‌ಟಾಕ್‌ನಲ್ಲಿ ಒಂದು ಕೋಟಿ ಹತ್ತು ಲಕ್ಷ, ಯೂಟ್ಯೂಬ್‌ನಲ್ಲಿ 51 ಲಕ್ಷ, ಫೇಸ್‌ಬುಕ್‌ನಲ್ಲಿ 43 ಲಕ್ಷ, ಇನ್‌ಸ್ಟಾಗ್ರಾಮ್‌ನಲ್ಲಿ 34 ಲಕ್ಷ ಮತ್ತು ಟ್ವಿಟರ್‌ನಲ್ಲಿ 62 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
Golden Retriever Dog Tucker Earns 8 Crore Per Year From Social Media Platforms Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.