Viral News: ರೈಲು ಖರೀದಿಗೆ 300 ಕೋಟಿ ಸಾಲ ಬೇಕು; ಗ್ರಾಹಕರ ಬೇಡಿಕೆಗೆ ಬೆಚ್ಚಿಬಿದ್ದ ಬ್ಯಾಂಕ್! ಆಮೇಲೆ ಏನಾಯ್ತು ಗೊತ್ತಾ?
Viral News: ಅನೇಕ ಬಾರಿ ನೀವು ಅರ್ಜಿ ಸಲ್ಲಿಸದಿದ್ದರೂ ಬ್ಯಾಂಕ್ ಪ್ರತಿನಿಧಿಗಳು ಆಕರ್ಷಕ ಸಾಲದ ಯೋಜನೆಗಳನ್ನು ನಿಮಗೆ ಕರೆ ಮಾಡಿ ತಿಳಿಸುತ್ತಾರೆ. ನೀವು ಸಹ ಅನೇಕ ಸಲ ಇಂತಹ ಬ್ಯಾಂಕ್‌ಗಳು (Banks) ಅಥವಾ ಪ್ರತಿನಿಧಿಗಳಿಂದ ಕರೆಗಳನ್ನು ಒಂದಲ್ಲ ಒಂದು ಬಾರಿ ಸ್ವೀಕರಿಸಿರುತ್ತೀರಿ
Viral News: ಮನೆ ಕಟ್ಟುವುದಿರಲಿ (Home Loan), ಕಾರು ಕೊಳ್ಳುವುದಿರಲಿ (Car Loan), ವ್ಯಾಪಾರ ಬೆಳೆಸುವುದಿರಲಿ (Business Loan), ಮಗುವಿಗೆ ಶಿಕ್ಷಣ (Education Loan) ಕೊಡಿಸುವುದಿರಲಿ ಅಥವಾ ಮಗಳ ಮದುವೆ ಮಾಡುವುದಿರಲಿ, ಕಡಿಮೆ ದರದಲ್ಲಿ ಸಾಲವು ಅಗತ್ಯಗಳನ್ನು ಪೂರೈಸುವ ಮಾರ್ಗವಾಗಿದೆ.
ಅನೇಕ ಬಾರಿ ನೀವು ಅರ್ಜಿ ಸಲ್ಲಿಸದಿದ್ದರೂ ಬ್ಯಾಂಕ್ ಪ್ರತಿನಿಧಿಗಳು ಆಕರ್ಷಕ ಸಾಲದ ಯೋಜನೆಗಳನ್ನು ನಿಮಗೆ ಕರೆ ಮಾಡಿ ತಿಳಿಸುತ್ತಾರೆ. ನೀವು ಸಹ ಅನೇಕ ಸಲ ಇಂತಹ ಬ್ಯಾಂಕ್‌ಗಳು (Banks) ಅಥವಾ ಪ್ರತಿನಿಧಿಗಳಿಂದ ಕರೆಗಳನ್ನು ಒಂದಲ್ಲ ಒಂದು ಬಾರಿ ಸ್ವೀಕರಿಸಿರುತ್ತೀರಿ, ಅವರು ಬಾಂಕ್ ನೀಡುವ ‘ಆಕರ್ಷಕ ದರಗಳನ್ನು’ ಉಲ್ಲೇಖಿಸಲು ಪ್ರಾರಂಭಿಸುತ್ತಾರೆ.
ಇಂತಹದ್ದೇ ಒಂದು ಕರೆ ಮಾಡಿದ ಬ್ಯಾಂಕ್ ಪ್ರತಿನಿಧಿಗೆ ಗ್ರಾಹಕರ ಬೇಡಿಕೆ ಕೇಳಿ ಶಾಕ್ ಆಗಿದೆ. ಅಂತಹ ಆಡಿಯೋ ಕಾಲ್ (Audio Call) ವೈರಲ್ ಆಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಸಾಲದ ಮೊತ್ತವನ್ನು ಕೇಳಿ ಶಾಕ್ ಆಗಿದ್ದಾರೆ.
ಶನಿ-ರಾಹು ಸಂಯೋಗ: ಅಕ್ಟೋಬರ್ 17 ರವರೆಗೆ ಈ 3 ರಾಶಿಗಳಿಗೆ ಅಶುಭ, ಎಚ್ಚರದಿಂದಿರಿ!
ನಿಶಾ ಎಂಬ ಬ್ಯಾಂಕ್ ಉದ್ಯೋಗಿಯೊಬ್ಬರು ಕರೆ ಮಾಡಿ ಗ್ರಾಹಕರ ಅಗತ್ಯಗಳನ್ನು ಕೇಳಲಾಗಿದೆ ಎಂದು ವರದಿಯಾಗಿದೆ. ಇದಾದ ಮೇಲೆ ಫೋನ್‌ನ ಇನ್ನೊಂದು ತುದಿಯಲ್ಲಿರುವ ವ್ಯಕ್ತಿ ತುಂಬಾ ಆರಾಮವಾಗಿ 300 ಕೋಟಿ ರೂಪಾಯಿ ಸಾಲಕ್ಕೆ ಬೇಡಿಕೆ ಇಟ್ಟಿದ್ದ. ಅಷ್ಟೇ ಅಲ್ಲ ರೈಲು ಖರೀದಿಸಲು ಸಾಲ ಬೇಕು ಎಂಬ ಕಾರಣವನ್ನೂ ಹೇಳಿದ್ದಾರೆ.
ಈ ನಡುವೆ ಈ ಹಿಂದೆ ಯಾವುದಾದ್ರೂ ಸಾಲ ಪಡೆದಿದ್ದೀರಾ ಎಂದು ಬ್ಯಾಂಕ್ ಉದ್ಯೋಗಿ ಕೇಳಿದಾಗ, ಆತ ಸೈಕಲ್ ಸಾಲ ಪಡೆದಿದ್ದಾನೆ. ಈ ಹಿಂದೆ ಹೀರೋ ಸೈಕಲ್ ಖರೀದಿಸಲು 1,600 ರೂಪಾಯಿ ಸಾಲ ಪಡೆದಿದ್ದಾಗಿ ವ್ಯಕ್ತಿ ಹೇಳಿದ್ದಾನೆ. ಜುಲೈ 15 ರಂದು ಹಂಚಿಕೊಂಡ ಈ ಆಡಿಯೋವನ್ನು ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ಆಲಿಸಿದ್ದಾರೆ.
Need a 300 Crores Loan For Buy Train Audio Call Goes Viral
Follow us On
Google News |