Vastu Tips: ಮನೆಯಲ್ಲಿ ಶೂ ಮತ್ತು ಚಪ್ಪಲಿ ಧರಿಸುವುದರಿಂದ ಏನಾಗುತ್ತದೆ? ಅಷ್ಟಕ್ಕೂ ವಾಸ್ತು ಪ್ರಕಾರ ಉಂಟಾಗುವ ಪರಿಣಾಮಗಳೇನು ಗೊತ್ತಾ?
Vastu Tips : ಚಪ್ಪಲಿ ಅಥವಾ ಶೂಗಳನ್ನು ಧರಿಸಿ ಮನೆಯಲ್ಲಿ ಓಡಾಡುವುದು ಒಳಿತಲ್ಲ, ವಾಸ್ತವವಾಗಿ, ಇದು ವೈಜ್ಞಾನಿಕ ದೃಷ್ಟಿಕೋನದಿಂದಲೂ ಸರಿಯಲ್ಲ, ಹಾಗೆಯೇ ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರವೂ ಇದು ಸರಿಯಲ್ಲ.
Vastu Tips : ಚಪ್ಪಲಿ (wearing slippers) ಅಥವಾ ಶೂಗಳನ್ನು (Shoes) ಧರಿಸಿ ಮನೆಯಲ್ಲಿ ಓಡಾಡುವುದು ಒಳಿತಲ್ಲ, ವಾಸ್ತವವಾಗಿ, ಇದು ವೈಜ್ಞಾನಿಕ ದೃಷ್ಟಿಕೋನದಿಂದಲೂ (scientific point of view) ಸರಿಯಲ್ಲ, ಹಾಗೆಯೇ ವಾಸ್ತು ಮತ್ತು ಜ್ಯೋತಿಷ್ಯದ (Vastu and astrology) ಪ್ರಕಾರವೂ ಇದು ಸರಿಯಲ್ಲ.
ನಮ್ಮ ಹಿರಿಯರು ಚಪ್ಪಲಿ ಹಾಕಿಕೊಂಡು ಮನೆಯ ಒಳಗೆ ಬಂದಾಗ ಬೈದಿರುವುದು ಇಲ್ಲದೆ ಬುದ್ದಿ ಹೇಳಿರುವುದು ಇಂದಿಗೂ ನೆನಪಿರಬಹುದು, ಆದರೆ ಇದಕ್ಕೆ ತಕ್ಕ ಕಾರಣ ತಿಳಿಯದಿದ್ದರೂ ಇಂದಿಗೂ ನಾವು ಮನೆಯ ಹೊರಗೆ ಚಪ್ಪಲಿ ಮತ್ತು ಶೂಗಳನ್ನು ಇರಿಸುತ್ತೇವೆ.
ವಾಸ್ತವವಾಗಿ, ನಾವು ಶೂಗಳು ಮತ್ತು ಚಪ್ಪಲಿಗಳ ಬಗ್ಗೆ ಮಾತನಾಡುವುದಾದರೆ, ಅದು ಶನಿಗೆ ಸಂಬಂಧಿಸಿದ ಬಹು ಕಾಳಜಿ ವಹಿಸಬೇಕಾಗ ವಿಚಾರ. ಅದಕ್ಕಾಗಿಯೇ ಶನಿವಾರದಂದು ಶೂ ಮತ್ತು ಚಪ್ಪಲಿಗಳನ್ನು (Shoes and Slippers) ಖರೀದಿಸುವುದಿಲ್ಲ.
ಈ ದಿನ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಖರೀದಿಸುವವರಿಗೆ ಅವರ ಮನೆಯಲ್ಲಿ ಶನಿಗ್ರಹದ ದೋಷಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ನಮ್ಮಲ್ಲಿ ಎಷ್ಟೋ ಜನರು ಇಂತಹ ವಿಚಾರಗಳನ್ನು ನಂಬುವುದಿಲ್ಲವಾದರೂ ನಿಜಕ್ಕೂ ನಂಬುವವರ ಮಾಹಿತಿಗಾಗಿ ಹೇಳುವುದಾದರೆ ಇದು ವೈಜ್ಞಾನಿಕ ದೃಷ್ಟಿಯಿಂದಲೂ ಸರಿಯಲ್ಲ.
ವಾಸ್ತವವಾಗಿ ನಾವು ಚಪ್ಪಲಿ ಶೂಗಳನ್ನು ಧರಿಸಿ ಮನೆಯ ಹೊರಗೆ ತಿರುಗುತ್ತೇವೆ. ಹೊರಗಿನ ಪ್ರಪಂಚದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಶಕ್ತಿಗಳಿವೆ. ನೀವು ಹೊರಗಿನಿಂದ ಕೊಳಕು ಪಾದರಕ್ಷೆಗಳನ್ನು ಧರಿಸಿ ಮನೆಗೆ ಬಂದಾಗ, ನಿಮ್ಮ ಜಾತಕದಲ್ಲಿ ರಾಹು ಮತ್ತು ಕೇತುಗಳೆರಡೂ ಕೆಟ್ಟ ಪರಿಣಾಮಬೀರುತ್ತವೆ. ಇನ್ನು ವೈಜ್ಞಾನಿಕವಾಗಿ ಮಾತ್ರ ನಂಬುವವರಿಗೆ ಹೇಳುವುದಾದರೆ ಆ ರೀತಿ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಮನೆಯ ಒಳಗೆ ಬರಬಹುದು.
ಕಾರಣ ಏನೇ ಆಗಲಿ ಒಟ್ಟಾರೆ ಚಪ್ಪಲಿ ಶೂಗಳನ್ನು ಧರಿಸಿ ಮನೆಯಲ್ಲಿ ಒಡಾಡುವುದು ಒಳ್ಳೆಯದಲ್ಲ, ನಿಮ್ಮ ಮನೆಯ ವಾಸ್ತು ದೋಷಗಳನ್ನು ಇದು ಇನ್ನಷ್ಟು ಹೆಚ್ಚಿಸಬಹುದು.
ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು ದೇವಸ್ಥಾನದ ಹೊರಗೆ ಚಪ್ಪಲಿ ಬಿಡುತ್ತಾರೆ. ಇದರ ಹೊರತಾಗಿ ಮನೆಯ ಮುಖ್ಯ ಬಾಗಿಲಲ್ಲಿ ಶೂ ಮತ್ತು ಚಪ್ಪಲಿ ಬಿಡುತ್ತಾರೆ, ಜೊತೆಗೆ ವಾಸ್ತು ಪ್ರಕಾರ ಮನೆಯ ಬಾಗಿಲಿನಲ್ಲೇ ಇವುಗಳನ್ನು ಇಡಬಾರದು. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ಮನೆಗೆ ನುಗ್ಗುತ್ತದೆ.
ಇದಲ್ಲದೇ ಮನೆಯಲ್ಲಿ ಪಾದರಕ್ಷೆ, ಚಪ್ಪಲಿ ಹಾಕಿಕೊಂಡು ಮನೆಯಲ್ಲಿ ತಿಜೋರಿ ಇರುವ ಜಾಗಕ್ಕೆ ಹೋದರೆ ಹಣ ಉಳಿಯುವುದಿಲ್ಲ. ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮಿಯೂ ಮನೆಯಲ್ಲಿ ನಕಾರಾತ್ಮಕ ಶಕ್ತಿ ಸೃಷ್ಟಿಸುತ್ತಾಳೆ. ಇನ್ನು ಹರಿದ ಮತ್ತು ಹಳೆಯ ಪಾದರಕ್ಷೆಗಳನ್ನು ಧರಿಸುವುದರಿಂದ ಶನಿಯ ಅಶುಭ ನೆರಳು ಮತ್ತು ಮನೆಯಲ್ಲಿ ಬಡತನ ಬರುತ್ತದೆ.
ಈ ಲೇಖನದಲ್ಲಿ ನೀಡಲಾದ ಮಾಹಿತಿಯ ಮೇಲೆ, ಇದು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಅವುಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಪಟ್ಟ ಕ್ಷೇತ್ರದ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ.
What happens by wearing shoes and slippers at home according to Vastu and astrology