ಮಂಗಳೂರಿನಲ್ಲಿ ದುರಂತ, ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವು

Story Highlights

ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಸಮೀಪದ ಬೆಳ್ತಂಗಡಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಮಂಗಳೂರು (Mangaluru): ಈಜಲು ಹೋಗಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಜೀವವನ್ನು ಬಲಿ ತೆಗೆದುಕೊಂಡಿದೆ. ಹೌದು, ಅವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಸಮೀಪದ ಬೆಳ್ತಂಗಡಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಲಾರೆನ್ಸ್ ಫೆರ್ನಾಂಡಿಸ್ (20), ಸೂರಜ್ (19) ಮತ್ತು ಜೇಸನ್ (19) ಮೃತರು.

ಮೂವರೂ ಮಂಗಳೂರಿನ ಕಾಲೇಜೊಂದರಲ್ಲಿ (Mangalore College) ಬಿಎಸ್ಸಿ ನರ್ಸಿಂಗ್ ಓದುತ್ತಿದ್ದರು, ಇವರೆಲ್ಲರೂ ಕೂಡ ಮಂಗಳೂರಿನ ಅಕ್ಕಪಕ್ಕದ ಪ್ರದೇಶಗಳಿಗೆ ಸೇರಿದವರು. ಮನೆಯಲ್ಲಿ ಸೆಮಿ ಕ್ರಿಸ್‌ಮಸ್ ಪಾರ್ಟಿ ಇದ್ದುದರಿಂದ ವಾಲ್ಟರ್ ಎಂಬ ವ್ಯಕ್ತಿ ಬಂದಿದ್ದ.

ಬುಧವಾರ ಸಂಜೆ ಎಲ್ಲರೂ ನದಿಗೆ ಈಜಲು ತೆರಳಿದ್ದರು. ಈ ವೇಳೆ ಮೂವರೂ ಆಳವಾದ ಸ್ಥಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಬರದ ಕಾರಣ ಸಂಬಂಧಿಕರು ಹುಡುಕಾಡಿದಾಗ ಬ್ಯಾರೇಜ್ ನಲ್ಲಿ ಬಟ್ಟೆ, ಮೊಬೈಲ್ ಪತ್ತೆಯಾಗಿದೆ.

ಗುರುವಾರ ಬೆಳಿಗ್ಗೆ, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಬ್ಬರ್ ಬೋಟ್‌ಗಳೊಂದಿಗೆ ಶೋಧ ನಡೆಸಿದ ನಂತರ ಮೂವರ ಶವಗಳನ್ನು ಹೊರತೆಗೆಯಲಾಯಿತು. ಪೋಷಕರ ಅಳಲು ಮುಗಿಲು ಮುಟ್ಟಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

3 nursing youths drown in river in Mangaluru

Related Stories