ಎಸ್‌ಎಸ್‌ಎಲ್‌ಸಿ ಆದವರಿಗೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳ ನೇಮಕಾತಿ! ಅರ್ಜಿ ಅವಧಿ ವಿಸ್ತರಣೆ
ಕರ್ನಾಟಕ ಅರಣ್ಯ ಇಲಾಖೆಯ 750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 7ರವರೆಗೆ ವಿಸ್ತರಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಉಚಿತ ಅರ್ಜಿ ಅವಕಾಶವಿದೆ.

- 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ
- ಅರ್ಜಿ ಅವಧಿ ಸೆ.7ರವರೆಗೆ ವಿಸ್ತರಣೆ ಆದೇಶ
- ಎಸ್‌ಎಸ್‌ಎಲ್‌ಸಿ ಅರ್ಹತೆ ಇದ್ದವರಿಗೆ ಅವಕಾಶ
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ (KFD Recruitment) ಇರುವ 750 ಅರಣ್ಯ ವೀಕ್ಷಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಆಗಸ್ಟ್ 31 ಕೊನೆಯ ದಿನವಾಗಿತ್ತು. ತಾಂತ್ರಿಕ ಸಮಸ್ಯೆ ಹಾಗೂ ಸರ್ವರ್ ದಟ್ಟಣೆಯ ಕಾರಣ ಇದೀಗ ಸೆಪ್ಟೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ಹಾಗೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಗಮನಾರ್ಹ ಅವಕಾಶವಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ.
ಯಾವ ವೃತ್ತದಲ್ಲಿ ಎಷ್ಟು ಹುದ್ದೆ?
Vacancy Details : ಒಟ್ಟು 750 ಹುದ್ದೆಗಳನ್ನು ರಾಜ್ಯದ ವಿವಿಧ ಅರಣ್ಯ ವೃತ್ತಗಳಿಗೆ ಹಂಚಿಕೆ ಮಾಡಲಾಗಿದೆ. ಚಾಮರಾಜನಗರದಲ್ಲಿ ಅತಿ ಹೆಚ್ಚು 169 ಹುದ್ದೆಗಳಿದ್ದು, ಮೈಸೂರಿನಲ್ಲಿ 120, ಬೆಂಗಳೂರಿನಲ್ಲಿ 70, ಬಳ್ಳಾರಿಯಲ್ಲಿ 62 ಮತ್ತು ಕೆನರಾ ವೃತ್ತದಲ್ಲಿ 60 ಹುದ್ದೆಗಳಿವೆ.
ಇನ್ನು ಚಿಕ್ಕಬಳ್ಳಾಪುರದಲ್ಲಿ 56, ಮಂಗಳೂರಿನಲ್ಲಿ 54, ಬೆಳಗಾವಿಯಲ್ಲಿ 42, ಶಿವಮೊಗ್ಗದಲ್ಲಿ 38, ಕೊಡಗಿನಲ್ಲಿ 32 ಹಾಗೂ ಹಾಸನದಲ್ಲಿ 30 ಹುದ್ದೆಗಳು ಲಭ್ಯವಿವೆ. ಧಾರವಾಡದಲ್ಲಿ 12 ಮತ್ತು ಕಲಬುರಗಿಯಲ್ಲಿ 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ಅಂಕಗಳೇ ಮುಖ್ಯ
ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು (SSLC Qualification). ಇಲಾಖೆಯ ನಿಯಮಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಈ ನೇಮಕಾತಿಯಲ್ಲಿ ಯಾವುದೇ ಅರ್ಜಿ ಶುಲ್ಕವಿಲ್ಲ. ಅಂದರೆ ಎಲ್ಲಾ ವರ್ಗದ ಅರ್ಹ ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಲಿಖಿತ ಪರೀಕ್ಷೆ ಇಲ್ಲ
ಅಭ್ಯರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಲಿಖಿತ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು (Merit Selection) ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.
ಮೆರಿಟ್‌ನಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ (Physical Test) ನಡೆಸಲಾಗುತ್ತದೆ. ಇದರ ಬಳಿಕ ವೈದ್ಯಕೀಯ ತಪಾಸಣೆಯನ್ನೂ ಪೂರ್ಣಗೊಳಿಸಿ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ KFD ಅಧಿಕೃತ ವೆಬ್‌ಸೈಟ್‌ಗೆ ತೆರಳಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಬಳಿಕ ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ, ಅಗತ್ಯ ದಾಖಲೆಗಳು ಮತ್ತು ಭಾವಚಿತ್ರವನ್ನು ಅಪ್‌ಲೋಡ್ ಮಾಡಬೇಕು.
ಅರ್ಜಿಯನ್ನು ಸೆಪ್ಟೆಂಬರ್ 7ರೊಳಗೆ ಸಲ್ಲಿಸಿ, ನಂತರ ಅರ್ಜಿ ಸಂಖ್ಯೆ ಅಥವಾ ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ.



