ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೊಡಗು ಪೋಲೀಸರ ಕಣ್ತಪ್ಪಿಸಿ ಎಸ್ಕೇಪ್!
ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಕೊಡಗು ಜಿಲ್ಲೆ ಮಡಿಕೇರಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ
ಕೊಡಗು / ಕರ್ನಾಟಕ (Kodagu, Karnataka): ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಕೊಡಗು ಜಿಲ್ಲೆ ಮಡಿಕೇರಿ ಪೊಲೀಸರು ಹೈದ್ರಾಬಾದ್‌ನ ಉಪ್ಪಲ್ ಪ್ರದೇಶಕ್ಕೆ ಸ್ಪಾಟ್ ಮಹಜರು ಮಾಡಲು ಕರೆದೊಯ್ದ ವೇಳೆ ಪರಾರಿಯಾಗಿದ್ದಾನೆ.
ಅಂಕುರ್ ಠಾಕೂರ್ ಅಲಿಯಾಸ್ ರಾಣಾ ತಲೆಮರೆಸಿಕೊಂಡಿರುವ ಆರೋಪಿ. ಇತ್ತೀಚೆಗೆ ಕೊಡಗಿನಲ್ಲಿ ತೆಲಂಗಾಣ (Telangana) ಮೂಲದ ರಮೇಶ್ ಎಂಬುವವರ ಮೃತದೇಹವನ್ನು ಎರಡನೇ ಪತ್ನಿ ನಿಹಾರಿಕಾ (Niharika) ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ಮಾಡಿ 800 ಕಿ.ಮೀ ದೂರದ ಕೊಡಗಿಗೆ ಬಂದು ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.
ಕೊಡಗು ಪೊಲೀಸರು ಪ್ರಕರಣದ ತನಿಖೆ ನಡೆಸಿ ನಿಹಾರಿಕಾ ಜೊತೆಗೆ ಆಕೆಯ ಪ್ರಿಯಕರ ನಿಖಿಲ್ ಮತ್ತು ಅಂಕುರ್ ಠಾಕೂರ್ ಎಂಬಾತನನ್ನು ಬಂಧಿಸಿದ್ದಾರೆ. ಸ್ಥಳ ಪರಿಶೀಲನೆಗಾಗಿ ಕೊಡಗು ಪೊಲೀಸರು (Kodagu Police) ಅಂಕುರ್ ಠಾಕೂರ್‌ನನ್ನು ಉಪ್ಪಲ್‌ಗೆ ಕರೆದುಕೊಂಡು ಹೋದಾಗ, ಅವನು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಕೊಡಗು ಪೊಲೀಸರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೆ ಮೇಲಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Accused who was arrested in the case of murder escape from Karnataka Kodagu Police