ಇಂದೇ ನಟ ದರ್ಶನ್ ಜಾಮೀನು? ಸುಪ್ರೀಂ ಕೋರ್ಟ್ ತೀರ್ಪಿಗೆ ನಿರೀಕ್ಷೆ - Darshan Bail Verdict Today

ಚಿತ್ರದುರ್ಗದ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಸೇರಿ ಆರೋಪಿಗಳಿಗೆ ಜಾಮೀನು ಸಿಗಬಹುದೆಂಬ ನಿರೀಕ್ಷೆ ಇದೆ. ಸುಪ್ರೀಂ ಕೋರ್ಟ್ (Supreme Court) ಇಂದು ತೀರ್ಪು ನೀಡುವ ಸಾಧ್ಯತೆ ಹೆಚ್ಚಿದೆ.

  • ದರ್ಶನ್ ಜಾಮೀನು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಇಂದೇ
  • ಆರೋಪಿಗಳ ಪರ ಕಪಿಲ್ ಸಿಬಲ್ ವಾದ ಮಂಡನೆ
  • ರಾಜ್ಯ ಸರ್ಕಾರ ಪರ ವಾದಿಸಿದ್ದೆ ಸುಧಾರಿತ ವಕೀಲರ ತಂಡ

ಬೆಂಗಳೂರು (Bengaluru): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ (Actor Darshan) ಸೇರಿದಂತೆ ಏಳು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ಇಂದು (ಜುಲೈ 22) ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಿರ್ಣಾಯಕ ಹಂತ ತಲುಪಿದೆ.

ಇದುವರೆಗೆ ರಾಜ್ಯ ಸರ್ಕಾರದ ಪರ ವಾದ ಕೇಳಿರುವ ನ್ಯಾಯಮೂರ್ತಿಗಳ ದ್ವಿಸದಸ್ಯ ಪೀಠ ಇಂದು ಆರೋಪಿಗಳ ಪರ ವಾದ ಆಲಿಸಲಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಕಳೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಜೆ ಬಿ ಪಾರ್ದಿವಾಲಾ ನೇತೃತ್ವದ ಪೀಠ, ಹೈಕೋರ್ಟ್ ಜಾಮೀನು ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ದಾಖಲೆಗಳನ್ನು ಸೂಕ್ತವಾಗಿ ಪರಿಗಣಿಸದೇ ಜಾಮೀನು ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಆರೋಪಿಗಳ ವಕೀಲರು ತಮ್ಮ ವಾದವನ್ನು ಆಧಾರ ಸಮೇತ ಮಂಡನೆ ಮಾಡಬೇಕಾಗುತ್ತದೆ.

ನಟ ದರ್ಶನ್

ಈ ಪ್ರಕರಣದಲ್ಲಿ ದರ್ಶನ್ ಪರ ಪ್ರಾರಂಭದಲ್ಲಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನಿಯೋಜಿತರಾಗಿದ್ದರು. ಆದರೆ ಅವರು ಈಗ ಕರ್ನಾಟಕದ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರದ ಪರ ವಾದ ಮಾಡುತ್ತಿರುವ ಕಾರಣ, ಸುಪ್ರೀಂ ಕೋರ್ಟ್‌ನಲ್ಲಿ ಅವರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವುದು ತಪ್ಪು ಎನ್ನಲಾಯಿತು. ಹೀಗಾಗಿ ದರ್ಶನ್ ಪರವಾಗಿ ಈಗ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್‌ದಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಈಗಾಗಲೇ ಗಂಭೀರವಾದ ವಾದ ಮಂಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಪರ ವಕೀಲರು ಕೂಡಾ ತಮ್ಮದಾದ ದೃಷ್ಟಿಕೋನವನ್ನೂ ತರುವ ನಿರೀಕ್ಷೆ ಇದೆ. ಎಲ್ಲಾ ವಾದಗಳನ್ನು ಆಲಿಸಿದ ನಂತರ, ಇಂದು ಜಾಮೀನು ಕುರಿತು ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

Actor Darshan's bail plea

ಇದಾದ ಜೊತೆಗೆ, ದರ್ಶನ್ ಸದ್ಯ ಥಾಯ್ಲೆಂಡ್‌ನ (Thailand) ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಅವರು ಅಭಿನಯಿಸುತ್ತಿರುವ “ಡೆವಿಲ್” ಚಿತ್ರಕ್ಕೆ ಸಂಬಂಧಿಸಿದ ಸಾಂಗ್ ಶೂಟಿಂಗ್ ಚಟುವಟಿಕೆಗಳು ನಾಲ್ಕು ದಿನಗಳಿಂದ ನಡೆಯುತ್ತಿವೆ. ದರ್ಶನ್ ಕುಟುಂಬದೊಂದಿಗೆ ಥಾಯ್ಲೆಂಡ್‍ಗೆ ತೆರಳಿದ್ದು, ಜುಲೈ 25ರ ನಂತರ ಭಾರತಕ್ಕೆ ವಾಪಸ್ಸು ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Actor Darshan’s Bail Verdict Likely Today

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories