Bengaluru AQI: ಬೆಂಗಳೂರು ಏರ್ ಕ್ವಾಲಿಟಿ ಆತಂಕ, ಶಿವಮೊಗ್ಗ ವಾಯುಗುಣಮಟ್ಟ ಮತ್ತಷ್ಟು ಕುಸಿತ

Bengaluru AQI: ರಾಜ್ಯದಲ್ಲಿ ಬೆಂಗಳೂರು ಸೇರಿ ಶಿವಮೊಗ್ಗ ವಾಯು ಗುಣಮಟ್ಟ ಹದಗೆಟ್ಟಿದ್ದು, AQI ಅಂಕೆಗಳು ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ ಮಟ್ಟ ತಲುಪಿವೆ. ತಜ್ಞರು ಶ್ವಾಸಕೋಶ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿ ಸುರಕ್ಷತಾ ಕ್ರಮ ಪಾಲನೆಗೆ ಮನವಿ ಮಾಡಿದ್ದಾರೆ.

ಬೆಂಗಳೂರು (Bengaluru): ಶಿವಮೊಗ್ಗ ವಾಯು ಗುಣಮಟ್ಟ (Karnataka Air Quality) ದಿನೇ ದಿನೇ ಕುಸಿಯುತ್ತಿರುವುದು ಸ್ಥಳೀಯರಲ್ಲಿ ಕಳವಳ ಉಂಟುಮಾಡಿದೆ. ಇತ್ತೀಚಿನ ಅಂಕೆಗಳ ಪ್ರಕಾರ ಶಿವಮೊಗ್ಗ AQI 176 ತಲುಪಿದ್ದು, ಕೆಲವೊಮ್ಮೆ 200ರ ಗಡಿಯತ್ತವೂ ಸಾಗುತ್ತಿರುವುದು ಆರೋಗ್ಯ ತಜ್ಞರ ಗಮನ ಸೆಳೆದಿದೆ.

ಈ ಮಟ್ಟದ ಗಾಳಿ ದೀರ್ಘಕಾಲ ಉಸಿರಾಟಕ್ಕೆ ಹಾನಿಕರವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬೆಂಗಳೂರು ಸ್ಥಿತಿಯೂ ಚಿಂತಾಜನಕ

ಕೆಲ ದಿನಗಳ ಹಿಂದೆ ತೀವ್ರ ಕಳಪೆ ಹಂತ ತಲುಪಿದ್ದ ಬೆಂಗಳೂರು ಏರ್ ಕ್ವಾಲಿಟಿ (Bengaluru AQI) ಈಗ 125ರಲ್ಲಿದೆ. ಅಂಕೆಗಳಲ್ಲಿ ಸ್ವಲ್ಪ ಏರುಪೇರು ಕಂಡರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಇದು ಇನ್ನೂ ಸುರಕ್ಷಿತ ಮಟ್ಟದಲ್ಲಿಲ್ಲ. ಮಕ್ಕಳಿಗೆ, ವೃದ್ಧರಿಗೆ ಹಾಗೂ ಶ್ವಾಸಕೋಶ ಸಮಸ್ಯೆ ಇರುವವರಿಗೆ ಹೊರಗಡೆ ಹೆಚ್ಚು ಸಮಯ ಕಳೆಯಬಾರದು ಎಂಬ ಸಲಹೆ ನೀಡಲಾಗಿದೆ.

ಇತರ ನಗರಗಳ ವಾಯು ಗುಣಮಟ್ಟ

ಕರ್ನಾಟಕ ರಾಜ್ಯದ ಇತರ ಪ್ರಮುಖ ನಗರಗಳಲ್ಲೂ ಗಾಳಿಯ ಗುಣಮಟ್ಟ ತೃಪ್ತಿಕರವಾಗಿಲ್ಲ. ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ AQI 150 ದಾಖಲಾಗಿದೆ. ಮೈಸೂರಿನಲ್ಲಿ 137, ಬೆಳಗಾವಿಯಲ್ಲಿ 157, ಕಲಬುರಗಿಯಲ್ಲಿ 126, ಬಳ್ಳಾರಿಯಲ್ಲಿ 114, ಹುಬ್ಬಳ್ಳಿಯಲ್ಲಿ 151 ಹಾಗೂ ವಿಜಯಪುರದಲ್ಲಿ 121 ಅಂಕೆಗಳು ದಾಖಲಾಗಿವೆ. ಒಟ್ಟಾರೆ ಬಹುತೇಕ ನಗರಗಳು ‘ಕಳಪೆ’ ಅಥವಾ ‘ಅನಾರೋಗ್ಯಕರ’ ಹಂತದಲ್ಲೇ ಉಳಿದಿವೆ.

AQI ಅರ್ಥೈಸಿಕೊಳ್ಳುವುದು ಹೇಗೆ?

0-50 ರವರೆಗೆ ಇರುವ ಗಾಳಿ ‘ಉತ್ತಮ’ ಎಂದು ಪರಿಗಣಿಸಲಾಗುತ್ತದೆ. 50-100 ‘ಮಧ್ಯಮ’ ಹಂತ, 100-150 ‘ಕಳಪೆ’, 150-200 ‘ಅನಾರೋಗ್ಯಕರ’, 200-300 ‘ಗಂಭೀರ’ ಹಾಗೂ 300ಕ್ಕಿಂತ ಮೇಲ್ಪಟ್ಟರೆ ‘ಅಪಾಯಕಾರಿ’ ಹಂತ ಎಂದು ವರ್ಗೀಕರಿಸಲಾಗುತ್ತದೆ. ಈಗಿನ ಅಂಕೆಗಳು ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವಂತಿವೆ.

ತಜ್ಞರು ಮಾಸ್ಕ್ ಧರಿಸುವುದು, ಅನಗತ್ಯವಾಗಿ ಹೊರಗೆ ತೆರಳುವುದನ್ನು ತಪ್ಪಿಸುವುದು ಹಾಗೂ ಮನೆಗಳಲ್ಲಿ ಗಾಳಿಯ ಹರಿವು ಸುಧಾರಿಸುವಂತೆ ಸಲಹೆ ನೀಡಿದ್ದಾರೆ.

Related Stories